ಮಡಿಕೇರಿ, ಫೆ. ೧೧: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೪-೨೫ನೇ ಸಾಲಿನ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಿಕಾಭವನದಿಂದ ಅರ್ಜಿಗಳನ್ನು ಪಡೆದುಕೊಂಡು ಫೆಬ್ರವರಿ ೨೦ ರೊಳಗೆ ತಮ್ಮ ಇತ್ತೀಚೆಗಿನ ಒಂದು ಭಾವಚಿತ್ರದೊಂದಿಗೆ ಸಲ್ಲಿಸಬೇಕಾಗಿದೆ. ನವೀಕರಣಕ್ಕೆ ರೂ. ೬೦೦ ಹಾಗೂ ನೂತನ ಸದಸ್ಯರಿಗೆ ರೂ. ೧೬೦೦ ಎಂದು ನಿಗದಿಪಡಿಸಲಾಗಿರುತ್ತದೆ. ಫೆಬ್ರವರಿ ೨೦ರ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಸದಸ್ಯತ್ವಕ್ಕೆ ಮಾನದಂಡಗಳು: ರಾಜಕೀಯದಲ್ಲಿರುವವರಿಗೆ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿರುವವರಿಗೆ ಪತ್ರಕರ್ತರ ಸಂಘದ ಸದಸ್ಯತ್ವ ನೀಡಲಾಗುವುದಿಲ್ಲ, ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಜಿಲ್ಲಾ ವರದಿಗಾರರು/ಸಂಪಾದಕರುಗಳಿAದ ದೃಢೀಕರಿಸಿದ ಪತ್ರ ಲಗತ್ತಿಸಬೇಕು, ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ವರಿಗೆ ಮಾತ್ರ ಸದಸ್ಯತ್ವ ನೀಡಲಾಗುತ್ತದೆ, ನೂತನವಾಗಿ ಸದಸ್ಯತ್ವ ಪಡೆಯುವವರು ಮಾಧ್ಯಮ ಕ್ಷೇತ್ರದಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು ಹಾಗೂ ೨೧ ವರ್ಷ ಮೇಲ್ಪಟ್ಟಿರಬೇಕು, ಜೊತೆಗೆ ಕ್ಯಾಮೆರಾಮೆನ್‌ಗಳು ಎಸ್.ಎಸ್.ಎಲ್.ಸಿ. ಉತ್ತೀರ್ಣವಾದ ಅಂಕಪಟ್ಟಿ ಹಾಗೂ ವರದಿಗಾರರು ಪದವಿ ಅಂಕಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ, ದಾಖಲೆಗಳು ಅಪೂರ್ಣವಾಗಿದ್ದರೆ ಮಾನ್ಯ ಮಾಡಲಾಗುವುದಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಸದಸ್ಯತ್ವ ನೀಡಲಾಗುವುದಿಲ್ಲ. ಸೂಚಕರು ಹಾಗೂ ಅನುಮೋದಕರ ಸಹಿ ಕಡ್ಡಾಯ ವಾಗಿದ್ದು, ಅಪೂರ್ಣ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಪರ್ಯಾಯ ಸಂಘದಲ್ಲಿರುವವರಿಗೆ ಸದಸ್ಯತ್ವ ನೀಡಲಾಗುವುದಿಲ್ಲ. ಮಾಲೀಕರಿಗೆ ಸಂಘದ ಸದಸ್ಯತ್ವಕ್ಕೆ ಅವಕಾಶವಿರುವುದಿಲ್ಲ. ಪತ್ರಿಕೆಯ ಸಂಪಾದಕ/ ಮುದ್ರಕ ಮಾಲೀಕರಾಗಿದ್ದರೆ ಮಾತ್ರ ಅವರಿಗೆ ಸದಸ್ಯತ್ವ ನೀಡಲು ಅವಕಾಶವಿದೆ. ಎಲ್ಲಾ ಪತ್ರಿಕೆಗಳಿಗೆ ಆರ್.ಎನ್.ಐ ನೋಂದಣಿ ಕಡ್ಡಾಯ. ವಾರಪತ್ರಿಕೆ ವರ್ಷದ ೪೮ ವಾರಗಳಲ್ಲಿ ೪೦ ಸಂಚಿಕೆಗಳು ಪ್ರಕಟವಾಗಿರಲೇಬೇಕು.

ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ ಅವರನ್ನು ಸಂಪರ್ಕಿಸ ಬಹುದಾಗಿದೆ. ೯೪೮೨೯೮೨೨೨೮