ಕುಶಾಲನಗರ, ಫೆ. ೧೧: ಕುಶಾಲನಗರ ಬೈಚನಹಳ್ಳಿ ಮುತ್ತಪ್ಪ ದೇವಾಲಯದಲ್ಲಿ ತೆರೆ ಮಹೋತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು.
ಮುತ್ತಪ್ಪ ಸೇವಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೇವಾಲಯದ ಆವರಣದಲ್ಲಿ ಗಣಪತಿ ಹೋಮ ನಂತರ ಧ್ವಜಾರೋಹಣ ನೆರವೇರಿಸಲಾಯಿತು.
ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲಗಳೊAದಿಗೆ ಆಗಮಿಸಿ ದೇವಾಲಯದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ತೆರೆ ಮಹೋತ್ಸವ ಅಂಗವಾಗಿ ತಾಲಪೊಲಿ ಮೆರವಣಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಹೊರಟು ಚಂಡೆ ವಾದ್ಯಗಳೊಂದಿಗೆ ಮುಖ್ಯ ರಸ್ತೆ ಮೂಲಕ ತೆರಳಿ ದೇವಾಲಯಕ್ಕೆ ಆಗಮಿಸಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .ತಡರಾತ್ರಿಯಲ್ಲಿ ತೆರೆ ಮಹೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭ ಮುತ್ತಪ್ಪ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ. ಹರೇಂದ್ರನ್, ಉಪಾಧ್ಯಕ್ಷರಾದ ಆರ್ ಚಂದ್ರ, ಟಿ.ವಿ. ರಾಜೇಶ್, ಖಜಾಂಚಿ ವಿ ಬೇಬಿ, ಕಾರ್ಯದರ್ಶಿ ಎನ್ ಎಸ್ ನರೇಶ್ ಕುಮಾರ್, ಸಹ ಕಾರ್ಯದರ್ಶಿ ಬಳಪಂಡ ಪವನ್, ಕೆ ಯು ರವಿ, ದೇವಾಲಯಗಳ ಒಕ್ಕೂಟ ಉಪಾಧ್ಯಕ್ಷರಾದ ವಿ ಎನ್ ವಸಂತಕುಮಾರ್, ವಿ ಡಿ ಪುಂಡರಿಕಾಕ್ಷ, ಖಜಾಂಚಿ ಎಸ್ ಕೆ ಶ್ರೀನಿವಾಸರಾವ್, ಪ್ರಧಾನ ಕಾರ್ಯದರ್ಶಿ ಎಂ ಎನ್ ಚಂದ್ರಮೋಹನ್, ಸಹ ಕಾರ್ಯದರ್ಶಿ ಡಿ ಆರ್ ಸೋಮಶೇಖರ್, ವಿವಿಧ ದೇವಾಲಯಗಳ ಅಧ್ಯಕ್ಷರು, ಪ್ರತಿನಿಧಿಗಳು, ಒಕ್ಕೂಟದ ಸದಸ್ಯರುಗಳು ಇದ್ದರು.