ಗೋಣಿಕೊಪ್ಪಲು, ಫೆ. ೧೧: ಬೆಳ್ಳಂಬೆಳಿಗ್ಗೆ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿಯಾದ ಘಟನೆ ಗೋಣಿಕೊಪ್ಪ ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳು ಸೇರಿದಂತೆ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡುವಿನ ಸಿಯಾಬ್ ಬೆಂಗಳೂರಿನಿAದ ಕೇರಳ ರಾಜ್ಯದ ತಮ್ಮ ಮನೆಗೆ ಮಕ್ಕಳು ಹಾಗೂ ಪತ್ನಿಯೊಂದಿಗೆ ಪ್ರಯಾಣ ಬೆಳೆಸಿದ್ದರು. ಮುಂಜಾನೆ ೬-೩೦ ರ ಸುಮಾರಿಗೆ ಗೋಣಿಕೊಪ್ಪ ನಗರ ದಾಟಿದ ಕಾರು ಅನತಿ ದೂರದ ಬ್ಯಾಂಕ್ ಆಫ್ ಬರೋಡಾದ ಮುಂಭಾಗದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಕಾರಿನ ಚಾಲಕ ಸಿಯಾಬ್ ನಿದ್ರೆಗೆ ಜಾರಿದ ವೇಳೆ ಈ ಘಟನೆ ನಡೆಯಿತು ಎಂದು ತಿಳಿಸಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಗುದ್ದಿದ ರಭಸಕ್ಕೆ ಕಂಬವು ಬುಡದಿಂದಲೇ ಜಖಂಗೊAಡಿದೆ. ಕಾರಿನ ಎರಡು ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಚಕ್ರಗಳು ಚರಂಡಿಗೆ ಸಿಲುಕಿಕೊಂಡಿವೆ. ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆದ್ದರಿಂದ ಕಾರಿನಲ್ಲಿದ್ದವರಿಗೆ ದೊಡ್ಡ ಪ್ರಮಾಣದ ಗಾಯಗಳಾಗಲಿಲ್ಲ.
ಅಪಘಾತ ಸಂಭವಿಸುತ್ತಿದ್ದAತೆಯೇ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿದೆ. ಕಾರಿನ ಒಳಗೆ ಸಿಲುಕಿದ್ದ ಮಕ್ಕಳು ಹಾಗೂ ಮಹಿಳೆಯರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳ ತುಟಿಯ ಭಾಗಕ್ಕೆ ಸಣ್ಣ ಗಾಯಗಳಾಗಿವೆ. ಗೋಣಿಕೊಪ್ಪ ಪೊಲೀಸ್ ಠಾಣೆಯ ಎಸ್.ಐ. ರೂಪಾದೇವಿ ಬೀರಾದಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೆಸ್ಕ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು. -ಹೆಚ್.ಕೆ. ಜಗದೀಶ್