ಬೆಂಗಳೂರು, ಫೆ ೧೧ : ವಾಹನಗಳಿಗೆ ಹೆಚ್ಎಸ್ಆರ್ಪಿ ಫಲಕ ಅಳವಡಿಸಲು ತಾ. ೧೭ ರವರೆಗೆ ಗಡುವು ನೀಡಲಾಗಿದೆ. ಆದರೆ, ಇದುವರೆಗೆ ೧೨ ಲಕ್ಷ ವಾಹನಗಳು ಮಾತ್ರ ಅಳವಡಿಸಿಕೊಂಡಿವೆ. ಇನ್ನೂ ೧.೮೮ ಕೋಟಿ ವಾಹನಗಳಿಗೆ ಎಚ್ಎಸ್ಆರ್ಪಿ ಫಲಕ ಅಳವಡಿಸುವುದು ಬಾಕಿ ಇದೆ. ೨೦೧೯ರ ಏಪ್ರಿಲ್ ೧ಕ್ಕೂ ಮುನ್ನ ನೋಂದಣಿಯಾದ ವಾಹನಗಳಿಗೆ ಕಡ್ಡಾಯವಾಗಿ ಅತಿ ಹೆಚ್ಚು ಭದ್ರತೆಯುಳ್ಳ ನಂಬರ್ ಪ್ಲೇಟ್ (ಹೆಚ್ಎಸ್ಆರ್ಪಿ) ಅಳವಡಿಸುವಂತೆ ಸಾರಿಗೆ ಇಲಾಖೆ ಸೂಚಿಸಿತ್ತು. ೨೦೨೩ರ ನವೆಂಬರ್ ೧೭ ರವರೆಗೆ ಕಾಲಾವಕಾಶ ನೀಡಿತ್ತು.
ಜನ ಸ್ಪಂದಿಸದ ಕಾರಣ ಹಳೆ ಫಲಕ ಬದಲಿಸಲು ಫೆಬ್ರವರಿ ೧೭ ರವರೆಗೆ ಗಡುವು ವಿಸ್ತರಿಸಲಾಗಿತ್ತು. ರಾಜ್ಯದಲ್ಲಿ ೨೦೧೯ರ ಏಪ್ರಿಲ್ ೧ ಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು ೨ ಕೋಟಿಯಷ್ಟಿದೆ. ಈ ವಿಷಯವಾಗಿ ವಾಹನ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿರುವುದು ಒಂದೆಡೆ ಫಲಕ ಬದಲಾವಣೆಗೆ ಆಸಕ್ತಿ ತೋರಿದರೂ ಸರ್ವರ್ ಡೌನ್ ಎಂಬ ಕಾರಣದಿಂದ ನೋಂದಣಿ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ಸಾಕಷ್ಟು ಕಾಲಾವಕಾಶ ನೀಡಿದರೂ ವಾಹನ ಮಾಲೀಕರು ಆಸಕ್ತಿ ತೋರದೆ ಕೊನೆ ಹಂತದಲ್ಲಿ ನೋಂದಣಿಗೆ ಮುಂದಾಗುತ್ತಿದ್ದಾರೆ. ಇದರಿಂದ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ.
ಯಾವುದೇ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಮುನ್ನ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು ೨ ಕೋಟಿಯಷ್ಟಿದೆ. ಈ ವಿಷಯವಾಗಿ ವಾಹನ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿರುವುದು ಒಂದೆಡೆ ಫಲಕ ಬದಲಾವಣೆಗೆ ಆಸಕ್ತಿ ತೋರಿದರೂ ಸರ್ವರ್ ಡೌನ್ ಎಂಬ ಕಾರಣದಿಂದ ನೋಂದಣಿ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ಸಾಕಷ್ಟು ಕಾಲಾವಕಾಶ ನೀಡಿದರೂ ವಾಹನ ಮಾಲೀಕರು ಆಸಕ್ತಿ ತೋರದೆ ಕೊನೆ ಹಂತದಲ್ಲಿ ನೋಂದಣಿಗೆ ಮುಂದಾಗುತ್ತಿದ್ದಾರೆ. ಇದರಿಂದ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ.
ಯಾವುದೇ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹಾಲೋಗ್ರಾಮ್, ಐಎನ್ಡಿ ಮಾರ್ಕ್, ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ ಹೆಚ್ಎಸ್ಆರ್ಪಿ ಒಂದೇ ರೀತಿಯ ಪ್ಲೇಟ್ಗಳು, ಸ್ಮಾರ್ಟ್ ನಂಬರ್ ಪ್ಲೇಟ್ಗಳನ್ನು ಅಳವಡಿಸುವಂತಿಲ್ಲ. ಅವುಗಳು ನಕಲಿ ಪ್ಲೇಟ್ಗಳಾಗಿರುತ್ತವೆ. ಅಧಿಕೃತ ಹೆಚ್ಎಸ್ಆರ್ಪಿ ನಂಬರ್ಪ್ಲೇಟ್ ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ. ಹೆಚ್ಎಸ್ ಆರ್ಪಿ ಅಳವಡಿಕೆಗೆ ನೀಡಲಾಗಿದ್ದ ಗಡುವು ೩ನಾಲ್ಕನೇ ಪುಟಕ್ಕೆ
ಹೆಚ್ಎಸ್ಆರ್ಪಿ ಫಲಕ ಅಳವಡಿಕೆ
(ಮೊದಲ ಪುಟದಿಂದ) ಇನ್ನೊಂದು ವಾರದಲ್ಲಿ ಮುಗಿಯಲಿದೆ. ಆದರೆ, ನಿಗದಿಯಷ್ಟು ವಾಹನಗಳು ಹೆಚ್ಎಸ್ಆರ್ಪಿ ಅಳವಡಿಕೆ ಮಾಡಿಕೊಂಡಿಲ್ಲದ ಕಾರಣ ಮತ್ತೊಮ್ಮೆ ಗಡುವು ವಿಸ್ತರಿಸುವ ಕುರಿತು ಅಧಿಕಾರಿ ಗಳು ಚರ್ಚಿಸುತ್ತಿದ್ದಾರೆ. ಒಂದು ವೇಳೆ ಗಡುವು ವಿಸ್ತರಿಸದಿದ್ದರೆ ತಾ. ೧೭ ರಿಂದ ವಾಹನಗಳಿಗೆ ೧ ಸಾವಿರ ರೂಪಾಯಿ ಯಿಂದ ೨ ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ.