ಕುಶಾಲನಗರ, ಫೆ. ೧೩ : ಕುಶಾಲನಗರ ತಾಲೂಕು ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಅಕ್ರಮ ಇಸ್ಪೀಟ್ ಅಡ್ಡೆಗಳು ನಡೆಯುತ್ತಿರುವುದಾಗಿ ಸ್ಥಳೀಯ ಪ್ರಮುಖರಾದ ವಿಪಿ ಶಶಿಧರ್ ಆರೋಪಿಸಿದರು.

ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂರಾರು ಕುಟುಂಬಗಳನ್ನು ಬೀದಿಪಾಲು ಮಾಡಿರುವಂತಹ ದಂಧೆ ಅಕ್ರಮವಾಗಿ ರಾಜಾರೋಷವಾಗಿ ನಡೆಯುತ್ತಿದೆ. ಅಕ್ರಮ ಇಸ್ಪೀಟು ಶಾಶ್ವತವಾಗಿ ಬೀಗ ಜಡಿಯದಿದ್ದರೆ ಕುಶಾಲನಗರ ಡಿ.ವೈ.ಎಸ್.ಪಿ. ಕಚೇರಿ ಮುಂಭಾಗದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಪ್ರತಿ ಪಂಚಾಯಿತಿಗೆ ಒಂzತಲೆಎತ್ತಿವೆ. ಮನೋರಂಜನೆ ಹಾಗೂ ವಿವಿಧ ಒಳಾಂಗಣ ಕ್ರೀಡೆಗಳನ್ನು ನಡೆಸಲು ಸ್ಥಳೀಯವಾಗಿ ಪರವಾನಿಗೆ ಪಡೆಯುವುದು. ನಂತರ ದಿನಗಳಲ್ಲಿ ಇಸ್ಪೀಟು ದಂಧೆಯನ್ನು ನಡೆಸುತ್ತಿರುವ ಬಗ್ಗೆ ಆರೋಪ ವ್ಯಕ್ತಪಡಿಸಿದರು.

ದಿನಕ್ಕೆ ಲಕ್ಷಾಂತರ ರೂಪಾಯಿಗಳ ವಹಿವಾಟು ಇಸ್ಪೀಟ್ ಕ್ಲಬ್‌ಗಳಲ್ಲಿ ನಡೆಯುತ್ತಿದ್ದು, ಜೂಜಿಗೆ ದಾಸರಾದ ಕೆಲವು ಕುಟುಂಬದ ಯಜಮಾನರು ತಮ್ಮನ್ನು ನಂಬಿರುವAತಹ ಕುಟುಂಬದ ಸದಸ್ಯರನ್ನು ಬೀದಿಪಾಲು ಮಾಡುತ್ತಿದ್ದಾರೆ ಎಂದರು.

ÀರAತೆ ಅನಧಿಕೃತವಾಗಿ ಕ್ಲಬ್‌ಗಳು ಇಂತಹ ಅಕ್ರಮ ಚಟುವಟಿಕೆಗಳನ್ನು ಕಡಿವಾಣ ಹಾಕಬೇಕಾಗಿರುವ ಪೊಲೀಸ್ ಇಲಾಖೆ ಅದರಲ್ಲೂ ಪ್ರಾಮಾಣಿಕ ಅಧಿಕಾರಿ ಆಗಿರುವ ಡಿ.ವೈ.ಎಸ್.ಪಿ. ರವರ ಮೂಗಿನ ಕೆಳಗೆ ಈ ದಂಧೆಗಳು ನಡೆಯುತ್ತಿರುವುದು ದುರದೃಷ್ಟಕರ. ಹಲವು ಬಾರಿ ಪೊಲೀಸ್ ಇಲಾಖೆ ಇಂತಹ ಅಕ್ರಮ ಜೂಜು ಕೇಂದ್ರಕ್ಕೆ ದಾಳಿ ಮಾಡುವ ಸಂದರ್ಭದಲ್ಲಿ ಮುಂಚಿತವಾಗಿ ದಂಧೆ ನಡೆಸುವರಿಗೆ ಮಾಹಿತಿಯನ್ನು ನೀಡುವ ಕೆಲವು ಭ್ರಷ್ಟ ಕಾನೂನು ಪಾಲಕರು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಶಶಿಧರ್ ಗಂಭೀರ ಆರೋಪ ಮಾಡಿದರು.

ಇಂತಹ ಜೂಜು ಕೇಂದ್ರಗಳಲ್ಲಿ ಹಣದ ಬದಲು ಬಣ್ಣ ಬಣ್ಣದ ಬಿಲ್ಲೆಗಳನ್ನು ಬಳಸುತ್ತಿದ್ದು ನಗರದ ಪ್ರಮುಖ ಕೆಲವು ಅಂಗಡಿಗಳಲ್ಲಿ ಈ ಬಿಲ್ಲೆಯನ್ನು ನೀಡಿ ಹಣ ಪಡೆಯುವ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಾಹಿತಿ ಇದ್ದರೂ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮೌನ ವಹಿಸಿದ್ದಾರೆ. ಕೂಡಲೇ ಕುಶಾಲನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಎಲ್ಲಾ ಅಕ್ರಮ ಜೂಜು ಕೇಂದ್ರಗಳನ್ನು ಶಾಶ್ವತವಾಗಿ ಬಂದ್ ಮಾಡದಿದ್ದರೆ ಪ್ರಜ್ಞಾವಂತ ನಾಗರಿಕ ವೇದಿಕೆಯ ಅಡಿಯಲ್ಲಿ ಊರಿನ ಸಮಾನ ಮನಸ್ಕರ ಜೊತೆಯಲ್ಲಿ ಡಿವೈಎಸ್‌ಪಿ ಕಚೇರಿ ಮುಂಭಾಗದಲ್ಲಿ ೨೪ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕುಶಾಲನಗರ ಪುರಸಭೆ ಸದಸ್ಯರಾದ ವಿ.ಎಸ್. ಆನಂದ್ ಕುಮಾರ್, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎಂ.ಇ. ಮುಸ್ತಫಾ, ಚಂದನ್ ಕುಮಾರ್, ಎಸ್.ಎನ್. ರಾಜೇಂದ್ರ ಇದ್ದರು.