ಸುಂಟಿಕೊಪ್ಪ, ಫೆ.೧೩: ೭ನೇ ಹೊಸಕೋಟೆ ಕಲ್ಲುಕೊರೆಯಲ್ಲಿ ನೆಲೆಸಿರುವ ಭದ್ರಕಾಳಿ ದೇವಸ್ಥಾನದ ೪೭ನೇ ವಾರ್ಷಿಕೋತ್ಸವ ತಾ.೧೬ ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಭದ್ರಕಾಳಿ ದೇವಸ್ಥಾನದ ೪೭ನೇ ವಾರ್ಷಿಕೋತ್ಸವದ ಅಂಗವಾಗಿ ಭದ್ರಕಾಳಿ, ನಾಗದೇವರ ಮತ್ತು ಪರಿವಾರ ದೇವರುಗಳ ಪೂಜೆಯು ನೆರವೇರಿಸಲಾಗುವುದು. ಬೆಳಿಗ್ಗೆ ೬ ಗಂಟೆಗೆ ಶುದ್ಧಪೂಜೆ, ೬.೩೦ ಗಂಟೆಗೆ ಗಣಪತಿ ಹೋಮ, ೮ ಗಂಟೆಗೆ ನಾಗದೇವರ ಪೂಜೆ, ೯.೩೦ ಗಂಟೆಗೆ ದೇವಿಪೂಜೆ ಹಾಗೂ ದರ್ಶನ, ಮಧ್ಯಾಹ್ನ ೧೨ ಗಂಟೆಗೆ ಕುರುದಿ ಪೂಜೆ, ೧.೩೦ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ನೆರೆದಿರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂ