ಮಡಿಕೇರಿ, ಫೆ. ೧೩: ರೈತರಿಂದ ಅಕ್ಕಿಯನ್ನು ಖರೀದಿಸಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಭಾರತ್ ರೈಸ್’ ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ರಾಜ್ಯದ ಕೆಲವೆಡೆ ಇದು ಜಾರಿಗೆ ಬಂದಿದ್ದರೂ ಕೊಡಗಿನಲ್ಲಿ ಪ್ರಚಾರದ ಕೊರತೆ ಕಂಡು ಬಂದಿದೆ.

೨೯ ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯಂತೆ ಗ್ರಾಹಕರಿಗೆ ನೀಡುವ ಯೋಜನೆ ಇದಾಗಿದ್ದು, ಐದು ಅಥವಾ ಹತ್ತು ಕೆ.ಜಿ.ಯ ಬ್ಯಾಗ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು ಮತ್ತಿತರ ಕಡೆಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ. ಅನ್‌ಲೈನ್ ಮೂಲಕ ಈ ಅಕ್ಕಿಯನ್ನು ಕಾಯ್ದಿರಿಸಿ ಪಡೆದುಕೊಳ್ಳಲು ಅವಕಾಶ ಇರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತಾದರೂ ಅನ್‌ಲೈನ್ ವ್ಯವಸ್ಥೆ ಇದುವರೆಗೂ ಚಾಲನೆಗೊಂಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಕೋಲಾರ, ತುಮಕೂರು ಮತ್ತಿತರ ಕಡೆಗಳಲ್ಲಿ ಟಾಟಾ ಏಸ್‌ನಂತಹ ವಾಹನಗಳ ಮೂಲಕ ಅಕ್ಕಿಯನ್ನು ಕೊಂಡೊಯ್ದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಅರ್ಧ ಗಂಟೆಗಳಲ್ಲಿ ಒಂದೊAದು ಲೋಡ್ ಅಕ್ಕಿ ಮಾರಾಟವಾಗುತ್ತಿದೆ. ಇದನ್ನು ಖರೀದಿಸಲು ಬಿಪಿಎಲ್, ಎಪಿಎಲ್ ಎಂಬ ಯಾವುದೇ ನಿಬಂಧನೆಗಳಿಲ್ಲವಾದ್ದರಿAದ ಅಕ್ಕಿ ಖರೀದಿಗೆ ಜನ ಅಲ್ಲಲ್ಲಿ ಮುಗಿಬೀಳುತ್ತಿರುವುದಾಗಿ ಮಾಹಿತಿ ದೊರೆತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಇದುವರೆಗೂ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಂದAತಿಲ್ಲ. ಜಿಲ್ಲೆಯ ಒಂದೆರೆಡು ಸೂಪರ್ ಮಾರ್ಕೆಟ್‌ಗಳಿಗೆ ಈ ಅಕ್ಕಿ ಸರಬರಾಜಾಗುತ್ತಿದ್ದು, ಮಾರಾಟವೂ ಭರದಿಂದ ಸಾಗಿದೆ. ಆದರೆ ಈ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಅಲ್ಲದೇ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರವೂ ಆಗುತ್ತಿಲ್ಲ. ಈ ಕಾರಣದಿಂದಾಗಿ ಸೂಪರ್ ಮಾರ್ಕೆಟ್‌ಗಳನ್ನು ಅವಲಂಬಿಸಿರುವ ಮಂದಿಗೆ ಮಾತ್ರ ಈ ಯೋಜನೆ ಸೀಮಿತ ಎಂಬAತಾಗಿದ್ದು, ಸಾರ್ವಜನಿಕವಾಗಿ ಮಾರಾಟ ವ್ಯವಸ್ಥೆ ಇಲ್ಲವಾದ್ದರಿಂದ ಬಹಳಷ್ಟು ಮಂದಿ ಈ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯ ಆಹಾರ ಇಲಾಖೆಗೂ ಈ ಯೋಜನೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಎನ್‌ಸಿಸಿಎಫ್ (ನ್ಯಾಷನಲ್ ಕೋ-ಆಪರೇಟಿವ್ ಕಂಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್) ಇದರ ಮೂಲಕ ಈ ಅಕ್ಕಿ ಸರಬರಾಜಾಗುತ್ತಿದೆ.

ಸಂಬAಧಿಸಿದವರು ಗಮನ ಹರಿಸಬೇಕಿದೆ.