ಪೋಕ್ಸೋ ಕಾಯ್ದೆಯಡಿ ನಾಲ್ವರ ಬಂಧನ

ಸೋಮವಾರಪೇಟೆ, ಫೆ. ೧೪: ಅಪ್ರಾಪ್ತ ಬಾಲಕಿಯರಿಬ್ಬರನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿಟ್ಟ ಆರೋಪದ ಮೇರೆ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು ನಾಲ್ವರನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣ ಸಮೀಪದ ಗ್ರಾಮವೊಂದರ ಅಪ್ರಾಪ್ತ ಬಾಲಕಿಯರಿಬ್ಬರನ್ನು ಕಾರಿನಲ್ಲಿ ಕರೆದೊಯ್ದು, ಅರಗಲ್ಲು ಗ್ರಾಮದ ಒಂಟಿ ಮನೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪದ ಮೇರೆ ಹಾನಗಲ್ಲು ಗ್ರಾಮದ ಬಾಬಿ ಅಲಿಯಾಸ್ ರಾಜು, ಯೋಗೇಶ್ ಅಲಿಯಾಸ್ ತೇಜು, ಅರಗಲ್ಲು ಗ್ರಾಮದ ಶ್ರೀಕಾಂತ್ ಸೇರಿದಂತೆ ಮತ್ತೋರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಮೊನ್ನೆ ರಾತ್ರಿ ಈರ್ವರು ಬಾಲಕಿಯರನ್ನು ರಾಜು ಸೇರಿದಂತೆ ನಾಲ್ವರು ಕಾರಿನಲ್ಲಿ ಕರೆದೊಯ್ದಿದ್ದು, ಬಾಣಾವರ ಬಳಿ ದಾರಿ ಬದಲಿಸಿ ಅರಗಲ್ಲು ಗ್ರಾಮದಲ್ಲಿರುವ ಶ್ರೀಕಾಂತ್ ಮನೆಗೆ ತೆರಳಿದ್ದಾರೆ. ನಂತರ ಮದ್ಯಪಾನ ಮಾಡಿ ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದು, ಮನೆಗೆ ತೆರಳಲು ಆಸ್ಪದ ನೀಡಿಲ್ಲ.

ಮಾರನೇ ದಿನ ಮನೆಗೆ ಆಗಮಿಸಿದ ಅಪ್ರಾಪ್ತೆಯರನ್ನು ವಿಚಾರಿಸಿದ ಸಂದರ್ಭ ಘಟನೆಗಳ ಬಗ್ಗೆ ತಿಳಿದುಬಂದಿದ್ದು, ಬಾಲಕಿಯರ ಸಂಬAಧಿಕರು ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ ಹಿನ್ನೆಲೆ ರಾಜು, ಶ್ರೀಕಾಂತ್, ಯೋಗೇಶ್ ಸೇರಿದಂತೆ ಮತ್ತೋರ್ವನನ್ನು ಬಂಧಿಸಲಾಗಿದೆ.

ಬAಧಿತರ ವಿರುದ್ಧ ಮೈನರ್ ಕಿಡ್ನಾö್ಯಪ್ (೩೬೩ (ಎ), ಅಕ್ರಮ ಬಂಧನ (೩೪೨) ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ರಾಜು, ಶ್ರೀಕಾಂತ್, ಯೋಗೇಶ್ ಅವರುಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೋರ್ವ ಅಪ್ರಾಪ್ತ ಬಾಲಕನನ್ನು ಮೈಸೂರಿನ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.