ಮಡಿಕೇರಿಯ ತನಲ್ ಆಶ್ರಮದಲ್ಲಿ ಎಲ್ಲಿಂದಲೋ ಬಂದ , ಊರು ವಿಳಾಸ ತಿಳಿಯದ, ಅದೆಷ್ಟೋ ನಿರಾಶ್ರಿತರನ್ನು ತನಲ್‌ನಲ್ಲಿ ಆಶ್ರಯ ನೀಡಿ ಕಾಯಿಲೆಗೆ ಸೂಕ್ತ ಚಿಕೆತ್ಸೆ ನೀಡಿ ಚೇತರಿಸಿಕೊಂಡ ನಂತರ ಅವರ ಊರು ಕುಟುಂಬ ವಿವರ ಪಡೆದು ಅವರ ವಿಳಾಸ ಮತ್ತು ಕುಟುಂಬವನ್ನು ಪತ್ತೆ ಹಚ್ಚಿ ಕಳುಹಿಸಿ ಕೊಡಲಾಗುತ್ತದೆ. ಸಾವಿರಕ್ಕಿಂತಲೂ ಅಧಿಕ ಕಿಲೋಮೀಟರ್ ದೂರವಿರುವ ದೆಹಲಿ, ಹರಿಯಾಣ, ರಾಜಸ್ಥಾನ ಹಾಗೂ ತಮಿಳುನಾಡಿನಂತಹ ರಾಜ್ಯಗಳಿಂದ ದಾರಿತಪ್ಪಿ ಬಂದವರನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿರುವ ಉದಾಹರಣೆಗಳು ಅದೆಷ್ಟೋ...

ಉಸಿರು ನಿಂತ ಮೇಲೆ

ಕಳೆದ ವರ್ಷ ಜೂನ್ ತಿಂಗಳ ಮಳೆಯ ವಾತಾವರಣದ ಸಂದರ್ಭ ಮಡಿಕೇರಿ ನಗರದ ಅಲ್ಲಲ್ಲಿ ತಿರುಗಾಡುತ್ತಾ, ಏನೋ ಬಡ ಬಡಿಸುತ್ತಾ ಕೆಲವೊಮ್ಮೆ ಅಳುತ್ತಿದ್ದ ಮಹಿಳೆಯೊಬ್ಬಳನ್ನು ಯಾರೋ ಪೊಲೀಸ್ ಠಾಣೆಗೆ ನೀಡಿದ ಮಾಹಿತಿಯನ್ನರಸಿ ಮಹಿಳಾ ಪೊಲೀಸ್ ಪಿಎಸ್‌ಐ ಹಾಗೂ ಸಿಬ್ಬಂದಿ ತನಲ್‌ಗೆ ದಾಖಲಿಸಿದ್ದರು. ಅಲ್ಪ ಪ್ರಮಾಣದ ಮಾನಸಿಕ ಅಸ್ವಸ್ತರಾಗಿದ್ದ ಇವರು ಚಿಕಿತ್ಸೆ ಪಡೆದು ಅಲ್ಪ ಪ್ರಮಾಣದಲ್ಲಿ ಗುಣಮುಖರಾಗಿದ್ದರು. ಈ ಸಂದರ್ಭದಲ್ಲಿ ಆಕೆಯೊಂದಿಗೆ ಊರು ಮತ್ತು ಕುಟುಂಬದ ಬಗ್ಗೆ ವಿಚಾರಿಸಲು ತುಂಬಾ ಶ್ರಮಪಟ್ಟರೂ ಹೆಸರು ಮಾತ್ರ ರೇಖಾ ಎಂಬುದು ತಿಳಿಯಿತು. ಮಧ್ಯೆ ಮಧ್ಯೆ ವೀರಾಜಪೇಟೆಯ ಹೆಸರನ್ನು ಮಾತ್ರ. ಪ್ರಸ್ತಾಪಿಸಿದನ್ನು ಬಿಟ್ಟರೆ ಇತರ ಯಾವುದೇ ಮಾಹಿತಿ ಕೊನೆಯವರೆಗೂ ನೀಡಲಿಲ್ಲ ಎಂದು ತನಲ್ ವ್ಯವಸ್ಥಾಪಕ ಮೊಹಮ್ಮದ್ ಹೇಳುತ್ತಾರೆ.

ಊoತಿ ಂಡಿe ಥಿou?

ಆಶ್ರಮದಲ್ಲಿ ಸಂದರ್ಶನಕ್ಕಾಗಿ ಯಾರೇ ಬಂದರೂ ಅವರೊಂದಿಗೆ ಮಾತಾಡಿಸುತ್ತಿದ್ದವರು, ಮೊದಲು ಊoತಿ ಚಿಡಿe ಥಿou ಎಂದು ಹೇಳುತ್ತಿದ್ದವರು ಆಕೆ. ಸದಾ ಲವಲವಿಕೆಯಿಂದ ಇರುತ್ತಿದ್ದ ಆಶ್ರಮ ವಾಸಿಗಳೊಂದಿಗೆ ಏನಾದರೊಂದು ತಮಾಷೆ, ಹಾಸ್ಯ ಭರಿತ ಮಾತುಗಳಿಂದ ಎಲ್ಲರಿಗೂ ಒಂದು ರೀತಿಯಲ್ಲಿ ಪ್ರೀತಿ ಪಾತ್ರರಾಗಿದ್ದರು..

ಆಶ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಏರ್ಪಡಿಸುತ್ತಿದ್ದ. ಮನೋರಂಜನೆ ಹಾಡು ಹಾಗೂ ಕುಣಿತಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ರೇಖಾ ರೋಗಿಯಾಗಿ ಮಲಗಿದ್ದು ಬಹಳ ಕಡಿಮೆ...

ಬೆವರಿದ ಜೀವ ದಿಢೀರ್ ಎಚ್ಚರ

ಎಂದಿನAತೆ ಮುಂದಿನ ದಿನ ರಾತ್ರಿ ಊಟ ಮುಗಿಸಿದ ನಂತರ ಪಾರ್ವತಿ ಆಂಟಿ ಮತ್ತು ಇನ್ನಿತರರೊಂದಿಗೆ ಎಂದಿಗಿAತ ಸ್ವಲ್ಪ ಹೆಚ್ಚಾಗಿ ತಮಾಷೆಯ ಮಾತನ್ನಾಡುತ್ತಿದ್ದ ರೇಖಾ, ರಾತ್ರಿ ಮಲಗಿದ್ದವರು ತಾ. ೧೧ರ ಬೆಳಗಿನ ಜಾವ ೫ ಗಂಟೆ ಹೊತ್ತಿಗೆ ಎದ್ದು ತುಂಬಾ ಸೆಕೆ ಆಗುತ್ತಿದೆ ಎಂದು ಫ್ಯಾನ್ ಆನ್ ಮಾಡಿದ್ದಾರೆ. ನಂತರ ಕೆಲ ಸಮಯ ಕುರ್ಚಿಯಲ್ಲಿ ಕುಳಿತಿದ್ದವರಿಗೆ ಪ್ರಾಣ ಹಾರಿಹೋಗಿದೆ...

ಆಶ್ರಮದಲ್ಲಿರುವ ಎಲ್ಲರ ಕಣ್ಣಲ್ಲಿ ನೀರು.. ತಕ್ಷಣ ಅಲ್ಲಿನ ಸೇವಕಿಯರು ವ್ಯವಸ್ಥಾಪಕರಿಗೆ ವಿಷಯವನ್ನು ತಿಳಿಸುತ್ತಾರೆ.

ವಿಷಯ ಅರಿತ ವ್ಯವಸ್ಥಾಪಕ ಮೊಹಮ್ಮದ್ ಮತ್ತು ಅವರ ಪತ್ನಿ ತಕ್ಷಣ ತಲುಪಿ ಮೃತ ಶರೀರವನ್ನು ಸ್ನಾನ ಮಾಡಿಸಲು ವ್ಯವಸ್ಥೆ ಮಾಡಿಕೊಡುತ್ತಾರೆ.

ಸಂಸ್ಥೆಯ ನಿಯಮದಂತೆ ಮಡಿಕೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅದಕ್ಕಾಗಿ ಸಮಿತಿಯ ಇತರರ ಸಹಕಾರದಿಂದ ಅದನ್ನು ಮುಗಿಸಿ ಅಂತಿಮ ಸಂಸ್ಕಾರದ ವ್ಯವಸ್ಥೆ ಆಗುತ್ತಿದೆ.

ಶವ ಸಂಸ್ಕಾರ ಸಂದೀಪ್ ಸಹಕಾರ

ಮಡಿಕೇರಿಯ ಹಿಂದೂ ರುದ್ರ ಭೂಮಿಯಲ್ಲಿ ಆಕೆಯ ಅಂತ್ಯಕ್ರಿಯೆ ನೆರವೇರಿಸಲು ಸದಾ ಸಹಕರಿಸುವ ಸಂದೀಪ್‌ರವರನ್ನು ಮನವಿ ಮಾಡಿದ ಮೇರೆಗೆ ತಕ್ಷಣವೇ ಸ್ಪಂದಿಸಿದ ಅವರು ಆಂಬುಲೆನ್ಸ್ ಮುಖಾಂತರ ಶರೀರವನ್ನು ಸಾಗಿಸಿ ಹಿಂದೂ ರುದ್ರಭೂಮಿಯಲ್ಲಿ ೧೧ ಗಂಟೆಗೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ.

ಕೊನೆಯ ತನಕ ರೇಖಾ ಅವರ ಊರು ಕುಟುಂಬಗಳು ಯಾರು ಎಂಬುದು ಕಗ್ಗಂಟಾಗಿಯೇ ಉಳಿಯಿತು. ? ಅಬ್ದುಲ್ಲಾ ಮಡಿಕೇರಿ