ಕುಶಾಲನಗರ, ಫೆ. ೧೪: ಜ್ಞಾನವ್ಯಾಪಿ ಮಂದಿರದ ವಿಚಾರದಲ್ಲಿ ರಾಮನಗರದ ವಕೀಲರೊಬ್ಬರು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದನ್ನು ವಿರೋಧಿಸಿ ಮತ್ತು ಈ ಸಂಬAಧ ವಕೀಲರುಗಳ ಮೇಲೆ ಅನಾವಶ್ಯಕ ಕೇಸು ದಾಖಲಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕುಶಾಲನಗರ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿದ ಘಟನೆ ಬುಧವಾರ ನಡೆದಿದೆ

ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಈ ಬಗ್ಗೆ ಮಾತನಾಡಿ, ಜ್ಞಾನವ್ಯಾಪಿ ಮಂದಿರದಲ್ಲಿ ಹಿಂದೂಗಳು ಪೂಜೆ ಮಾಡುವ ಅವಕಾಶವನ್ನು ಅಲ್ಲಿಯ ಹೈಕೋರ್ಟ್ ತೀರ್ಪು ನೀಡಿತ್ತು. ಆ ತೀರ್ಪಿನ ಬಗ್ಗೆ ಮಾತನಾಡುವಾಗ ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನದ ಬಗ್ಗೆ ಕೆಟ್ಟದಾಗಿ ಮಾತನಾಡಿದ ರಾಮನಗರದ ವಕೀಲರ ಮೇಲೆ ದೂರನ್ನು ಸಲ್ಲಿಸುವ ಸಂದರ್ಭಕ್ಕೆ ಪ್ರತಿ ದೂರನ್ನ ಸಲ್ಲಿಸಿ ಅಂದಾಜು ೪೫ ವಕೀಲರ ಮೇಲೆ ರಾಮನಗರದಲ್ಲಿ ಎಫ್‌ಐಆರ್ ಆಗಿದೆ. ಅದನ್ನ ಖಂಡಿಸಿ ನಾವುಗಳು ನ್ಯಾಯಾಲಯದ ಕಲಾಪದಿಂದ ದೂರ ಉಳಿದಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಎಸ್.ಕೆ. ಮಂಜುನಾಥ್, ಪಿ.ಆರ್. ರಾಬಿನ್, ಮೋಹನ್ ಕುಮಾರ್, ರವೀಂದ್ರ, ನವೀನ್, ಜಿ.ಎಲ್.ಸವಿತಾ, ಕೆ.ಎಸ್.ರಾಘವೇಂದ್ರ ಮತ್ತು ವಕೀಲರುಗಳು ಹಾಜರಿದ್ದರು.