ಮುಳ್ಳೂರು/ ಶನಿವಾರಸಂತೆ, ಫೆ. ೧೩: ಒಗ್ಗಟಿನಿಂದ ಎಲ್ಲಾರೂ ಸೇರಿ ದೇವಾಲಯ ನಿರ್ಮಿಸಿದರೆ ಊರಿಗೆ ನೆಮ್ಮದಿ ಇರುತ್ತದೆ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.

ಅವರು ದೊಡ್ಡಭಂಡಾರ ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ದೇವಸ್ಥಾನದ ಉದ್ಘಾಟನೆ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿ, ಮನುಷ್ಯ ಸುಖ ಸಂತೋಷದಲ್ಲಿರುವಾಗಲೂ ದೇವರನ್ನು ಮರೆಯಬಾರದು. ಶಾಂತಿ-ನೆಮ್ಮದಿಗಾಗಿ ಸದಾ ದೇವರನ್ನು ಪ್ರಾರ್ಥಿಸಬೇಕು. ಹುಟ್ಟೂರನ್ನು ಮರೆತರೆ ತನ್ನ ತಂದೆ-ತಾಯಿಯನ್ನು ಮರೆತಂತೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತನ್ನ ಹುಟ್ಟೂರಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವಸ್ವಾಮೀಜಿ ಮಾತನಾಡಿ, ರಾಜರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನಕ್ಕೆ ಶಕ್ತಿ ಇದೆ. ಮನುಷ್ಯ ನೆಮ್ಮದಿಯಲ್ಲಿ ಬದುಕಬೇಕಾದರೆ ಧರ್ಮದ ತಳಹದಿಯಲ್ಲಿ ಜೀವನ ನಡೆಸಬೇಕು. ವಿಜ್ಞಾನ ತಂತ್ರಜ್ಞಾನದಿAದ ಅನುಕೂಲವಾಗುತ್ತಿದ್ದರೂ ನೆಮ್ಮದಿಯ ಜೀವನಕ್ಕೆ ಧಾರ್ಮಿಕ ಕೇಂದ್ರಗಳ ಅವಶ್ಯಕತೆ ಇದೆ ಎಂದರು.

ಕಲ್ಲುಮಠದ ಶ್ರೀ ಮಹಂತಸ್ವಾಮೀಜಿ, ಶ್ರೀ ತಪೋವನ ಮನೆಹಳ್ಳಿ ಮಠಾಧೀಶ ಶ್ರೀ ಮಹಂತಶಿವಲಿAಗ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಶೇಷೇಗೌಡ, ಉಪಾಧ್ಯಕ್ಷ ಜವರೇಗೌಡ, ಬೆಸೂರು ಗ್ರಾ.ಪಂ. ಉಪಾಧ್ಯಕ್ಷ ಡಿ.ಆರ್. ಹರೀಶ್ ಪ್ರಮುಖರಾದ ಶಿವರಾಮ್, ಹರೀಶ್, ಡಿ.ಎಲ್. ಮೂರ್ತಿ ಹಾಜರಿದ್ದರು. ಈ ಸಂದರ್ಭದಲ್ಲಿ ವಿಗ್ರಹ ಕೆತ್ತನೆ ಮಾಡಿದ ಶಿಲ್ಪಿ ಹೆಚ್.ಎಸ್. ವರಪ್ರಸಾದ್ ಅವರನ್ನು ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.