ಪೊನ್ನಂಪೇಟೆ, ಫೆ. ೧೪: ವೀರಾಜಪೇಟೆ ಸಮೀಪದ ಅಂಬಟ್ಟಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶೇಕ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಜಾತಿ, ಮತ ಭೇದವಿಲ್ಲದೆ ವರ್ಷಂಪ್ರತಿ ನಡೆಯುವ ಅಂಬಟ್ಟಿ ಮಖಾಂ ಉರೂಸ್ (ಅಂಬಟ್ಟಿ ನೇರ್ಚೆ) ತಾ.೧೬ ರಿಂದ ೨೦ ರವರೆಗೆ ನಡೆಯಲಿದೆ.

ತಾ. ೧೬ರಂದು ಜುಮಾ ನಮಾಜಿನ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಅಂಬಟ್ಟಿ ಜಮಾಅತಿನ ಅಧ್ಯಕ್ಷ ಎ.ಎಚ್. ಶಾದುಲಿ ಧ್ವಜಾರೋಹಣ ನೆರವೇರಿ ಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಮಖಾಂ ಆವರಣದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನೆಗೆ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ರಫೀಕ್ ಸಅದಿ ನೇತೃತ್ವ ನೀಡಲಿದ್ದಾರೆ. ಅಂದು ರಾತ್ರಿ ೭ ಗಂಟೆಗೆ ಉರೂಸಿನ ಆಕರ್ಷಣೆಯಾದ ಅಂಬಟ್ಟಿ ಮಖಾಂ ಅಲಂಕಾರ ಮತ್ತು ಸಂದಲ್ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾ.೧೭ರಂದು ಸಂಜೆ ೭ ಗಂಟೆಗೆ ಕೇರಳದ ಇರಿಕ್ಕೂರಿನ ವಿಧ್ವಾಂಸ ಸೈಯದ್ ಸಹದ್ ಅಲ್ ಹೈದ್ರೋಸಿ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕೋತ್ಸವ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ರಜಾಕ್ ಸಖಾಫಿ, ಇಸ್ಮಾಯಿಲ್ ಮುಸ್ಲಿಯಾರ್, ಮುನೀರ್ ಸಖಾಫಿ, ಇಬ್ರಾಹಿಂ ಮದನಿ, ಮುತ್ತಲಿಬ್ ಅಲ್ ಅಮಾನಿ, ಅಬ್ದುಲ್ ರಹಿಮಾನ್ ಅನ್ವಾರಿ, ಷಂಶು ದ್ದೀನ್, ಅಪ್ಸಲ್, ಶಹಬಾತ್, ಮಹಮ್ಮದ್ ಅಲಿ, ಬಶೀರ್ ಹಾಜಿ ಮೊದಲಾ ದವರು ಭಾಗವಹಿಸಲಿದ್ದಾರೆ. ತಾ. ೧೮ರಂದು ರಾತ್ರಿ ೮ ಗಂಟೆಗೆ ಕೇರಳದ ಕೊಲ್ಲಂನ ವಿಧ್ವಾಂಸ ವಹಾಬ್ ನಯೀಮಿ ಅವರಿಂದ ವಿಶೇಷ ಧಾರ್ಮಿಕ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಅಕ್ಕಳತಂಡ ಎಸ್. ಮೊಯ್ದು, ಮುಬಸ್ಸಿರ್ ಅಹ್ಸನಿ, ಮೊಹಮ್ಮದ್ ರವೂಫ್ ಹುದವಿ, ಅಬ್ದುಲ್ಲಾ ಖಾಸಿಮಿ, ಇಲ್ಯಾಸ್ ಅಮ್ಜದಿ, ನೌಶಾದ್ ಝಹರಿ, ಮೊಹಮ್ಮದ್ ಹಾಜಿ, ರಶೀದ್ ಹಾಜಿ, ಫಕ್ರುದ್ದೀನ್, ಮಮ್ಮಿ ಹಾಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ತಾ. ೧೯ರಂದು ಮಧ್ಯಾಹ್ನ ೨ ಗಂಟೆಗೆ ಅಂಬಟ್ಟಿ ಮಖಾಂ ಉರೂಸ್‌ನ ಪ್ರಧಾನ ಸಮಾರಂಭದ ಅಂಗವಾಗಿ ಸಾರ್ವಜನಿಕ ಸೌಹಾರ್ದ ಸಮ್ಮೇಳನ ನಡೆಯ ಲಿದೆ. ಅಂಬಟ್ಟಿ ಜಮಾಅತ್‌ನ ಅಧ್ಯಕ್ಷ ಎ.ಎಚ್. ಸಾದುಲಿ ಅವರ ಅಧ್ಯಕ್ಷತೆ ಯಲ್ಲಿ ನಡೆಯುವ ಸಮಾರಂಭವನ್ನು ವಿರಾಜಪೇಟೆಯ ಅನ್ವಾರುಲ್ ಹುದಾ ಕೇಂದ್ರದ ಪ್ರಾಂಶುಪಾಲ ಅಶ್ರಫ್ ಅಹ್ಸನಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎ.ಎಸ್. ಪೊನ್ನಣ್ಣ, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪಿ.ಎಂ. ಹಕೀಮ್, ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಹೆಚ್.ಎ. ಹಂಸ, ಅರವಿಂದ ಕುಟ್ಟಪ್ಪ, ಲತೀಫ್ ಸುಂಟಿಕೊಪ್ಪ, ರಂಜಿ ಪೂಣಚ್ಚ, ಪಿ.ಎ. ಹನೀಫ್, ಕೋಳುಮಂಡ ರಫೀಕ್, ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ, ಸದಸ್ಯರಾದ ಚಂಗೇಟ್ಟಿರ ರಾಜ ಸೋಮಯ್ಯ, ನಾಯಡ ಸವಿನ್ ಬೋಪಣ್ಣ, ವಕೀಲ ಕೊಕ್ಕಂಡ ಜಿ. ಅಪ್ಪಣ್ಣ, ಆಟ್ರಂಗಡ ಲೋಹಿತ್, ಜುಬೇರ್ ಅಹಮದ್, ಪೊಲೀಸ್ ಅಧಿಕಾರಿ ಆರ್. ಮೋಹನ್ ಕುಮಾರ್, ಬಿ.ಎಸ್. ಶಿವರುದ್ರ, ಸಿ. ಸಿ. ಮಂಜುನಾಥ್, ವಕ್ಫ್ ಮಂಡಳಿ ಅಧಿಕಾರಿ ಮೊಹಮ್ಮದ್ ಇರ್ಫಾನ್ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಧಾರ್ಮಿಕ ಪ್ರವಚನಕಾರ ನೌಫಲ್ ಸಖಾಫಿ ಕಳಸ ಪ್ರಧಾನ ಭಾಷಣ ಮಾಡಲಿದ್ದಾರೆ. ಸಾರ್ವಜನಿಕ ಸೌಹಾರ್ದ ಸಮ್ಮೇಳನದ ನಂತರ ಸಂಜೆ ೪ ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ. ಇದಕ್ಕೂ ಮೊದಲು ಅಂಬಟ್ಟಿ ದರ್ಗಾ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ರಾತ್ರಿ ೭ ಗಂಟೆಗೆ ಬುರ್ದಾ ಮಜ್ಲೀಸ್ ಆಯೋಜಿಸಲಾಗಿದೆ. ತಾ.೨೦ರಂದು ಮಧ್ಯಾಹ್ನ ಅಂಬಟ್ಟಿ ಗ್ರಾಮವಾಸಿಗಳ ಸಂಗಮದ ನಂತರ ಉರೂಸಿಗೆ ತೆರೆ ಬೀಳಲಿದೆ ಎಂದು ಅಂಬಟ್ಟಿ ಜುಮ್ಮಾ ಮಸೀದಿ ಹಾಗೂ ಅಂಬಟ್ಟಿ ಮಖಾಂ ಉರೂಸ್ ಆಯೋಜನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.