ಬೆAಗಳೂರು, ಫೆ. ೧೩: ವಿಶ್ವಾದ್ಯಂತ ಕಾಫಿಯ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತಿದ್ದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಕಾಫಿ ಕ್ಷೇತ್ರದಲ್ಲಿ ನುರಿತ ವೃತ್ತಿಪರರಿಗೆ ಉದ್ಯೋಗಾವಕಾಶ ಹೆಚ್ಚುತ್ತಿದೆ. ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ ೭೦ ರಷ್ಟು ಪಾಲು ಹೊಂದಿರುವದು ರಾಜ್ಯದ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿಯು ಬೆಂಗಳೂರಿನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕಾಫಿ’ ಎಂಬ ಕೇಂದ್ರವನ್ನು ಸ್ಥಾಪಿಸಲು ಸಜ್ಜಾಗಿದೆ. ಈ ಕುರಿತು ಭಾರತೀಯ ಕಾಫಿ ಮಂಡಳಿ ಇಂಥದ್ದೊAದು ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕಾಫಿ’ಯಲ್ಲಿ ಕಾಫಿ ಕುರಿತ ಮತ್ತಷ್ಟು ಕಿರು ಅವಧಿ ಕೋರ್ಸ್ಗಳನ್ನು ಆರಂಭಿಸಲು ಕೂಡ ಕಾಫಿ ಮಂಡಳಿ ಉದ್ದೇಶಿಸಿದೆ.

ಈ ಕುರಿತು ಮಾಹಿತಿ ನೀಡಿದ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಡಾ.ಕೆ.ಜಿ. ಜಗದೀಶ್ ಅವರು, ಪ್ರಸ್ತುತ ಕಾಫಿ ಗುಣಮಟ್ಟ ನಿರ್ವಹಣೆಯಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸುತ್ತಿದ್ದೇವೆ. ಇದಕ್ಕೆ ಬಹಳ ಬೇಡಿಕೆ ಇದೆ. ಬೆಂಗಳೂರಿನ ಕಾಫಿ ಕ್ವಾಲಿಟಿ ಇನ್ಸಿ÷್ಟಟ್ಯೂಟ್‌ನಲ್ಲಿ ಈ ಕೋರ್ಸ್ ನಡೆಸಲಾಗುತ್ತಿದೆ. ವಿದ್ಯಾರ್ಥಿ ಗಳು ಚಿಕ್ಕಮಗಳೂರಿನಲ್ಲಿರುವ ಸೆಂಟ್ರಲ್ ಕಾಫಿ ರಿಸರ್ಚ್ ಇನ್ಸಿ÷್ಟಟ್ಯೂಟ್‌ಗೆ ಮೂರು ತಿಂಗಳ ಭೇಟಿ ನೀಡಿ ಕಲಿಯಬಹುದು. ಕೆಫೆಗಳಿಗೆ ಹೋಗುವುದು, ರೋಸ್ಟರಿಗಳನ್ನು ಅರಿಯುವುದು, ಕಾಫಿ ಪ್ಯಾಕೇಜಿಂಗ್ ಮಾಡುವುದು, ಕಾಫಿ ಮಾರುಕಟ್ಟೆ ಪ್ರಚಾರ ಇತ್ಯಾದಿ ಔದ್ಯಮಿಕ ಅನುಭವಗಳನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸದ್ಯ ನಡೆಸಲಾಗುತ್ತಿರುವ ಸ್ನಾತಕೋತ್ತರ ಕಾಫಿ ಗುಣಮಟ್ಟ ನಿರ್ವಹಣಾ ಡಿಪ್ಲೊಮಾ ಕೋರ್ಸ್ಗೆ (Posಣ gಡಿಚಿಜuಚಿಣe ಜiಠಿಟomಚಿ ಛಿouಡಿse iಟಿ quಚಿಟiಣಥಿ mಚಿಟಿಚಿgemeಟಿಣ) ಬಹಳ ಬೇಡಿಕೆ ಇದೆ. ಆದರೆ, ಒಂದು ಕೋರ್ಸ್ನಲ್ಲಿ ೧೫ ಮಂದಿ ವಿದ್ಯಾರ್ಥಿಗಳಿಗಷ್ಟೇ ಕಲಿಕೆಗೆ ಅವಕಾಶ ಇರಲಿದೆ. ಈ ಕೋರ್ಸ್ ಸೇರ್ಪಡೆಗೆ ದೇಶದ ವಿವಿಧ ಭಾಗಗಳಿಂದ ೫೦೦ಕ್ಕೂ ಆಸಕ್ತರು ಅರ್ಜಿ ಸಲ್ಲಿಸುತ್ತಾರೆ. ಆದರೆ ಸಂದರ್ಶನ ನಡೆಸಿ ೧೫ ಜನರನ್ನು ಮಾತ್ರ‍್ರ ಆಯ್ಕೆ ಮಾಡಲಾಗುತ್ತದೆ ಎಂದು ಜಗದೀಶ್ ತಿಳಿಸಿದರು.

ಕಾಫಿ ಗುಣಮಟ್ಟ ನಿರ್ವಹಣೆಯ ಪಿಜಿ ಡಿಪ್ಲೊಮಾ ಕೋರ್ಸ್ ಸೇರಬಯಸುವ ಅಭ್ಯರ್ಥಿಗಳು ಸಸ್ಯಶಾಸ್ತç, ಪ್ರಾಣಿಶಾಸ್ತç, ಆಹಾರ ವಿಜ್ಞಾನ, ಜೈವಿಕ ವಿಜ್ಞಾನ ಅಥವಾ ಕೃಷಿ ವಿಜ್ಞಾನ ವಿಷಯಗಳಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು. ಅವರ ಶೈಕ್ಷಣಿಕ ಸಾಧನೆ ಉತ್ತಮವಾಗಿರಬೇಕು. ಸಂದರ್ಶನ ಇತ್ಯಾದಿಯಲ್ಲಿ ಅಭ್ಯರ್ಥಿಗಳ ಸಾಧನೆಯನ್ನು ಪರಿಶೀಲಿಸಿ ಆ ಬಳಿಕ ಅವರಿಗೆ ಕೋರ್ಸ್ಗೆ ಸೇರಲು ಅವಕಾಶ ನೀಡಲಾಗುತ್ತದೆ. ಪಿಜಿ ಡಿಪ್ಲೊಮಾ ಕೋರ್ಸ್ ಮುಗಿಸುವ ಅಭ್ಯರ್ಥಿಗಳಿಗೆ ಕೆಲವೇ ದಿನಗಳಲ್ಲಿ ಬಹುರಾಷ್ಟಿçÃಯ ಕಂಪೆನಿಗಳಲ್ಲಿ ಉದ್ಯೋಗ ಅವಕಾಶ ಸಿಗುತ್ತದೆ. ಕೆಲವರು ಮಧ್ಯ ಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಗಿಟ್ಟಿಸುತ್ತಾರೆ. ಕಾಫಿಯ ಮಾರುಕಟ್ಟೆ ಬೆಳೆಯುತ್ತಿ ರುವುದರಿಂದ ಈ ಕೋರ್ಸ್ಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೀಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕಾಫಿ ಮಂಡಳಿ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಈ ಕೋರ್ಸ್ನ ಸೀಟ್‌ಗಳ ಸಂಖ್ಯೆಯನ್ನು ಕನಿಷ್ಟ ೧೦೦ ಅಭ್ಯರ್ಥಿಗಳಿಗೆ ವಿಸ್ತರಿಸಬೇಕು ಎನ್ನುವ ಪ್ರಸ್ತಾಪವನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗ ಕಾಫಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆಗೆ ಮಂಡಳಿ ಪ್ರಸ್ತಾಪ ಮಾಡಿದೆ. ವಿಶೇಷ ಕಾಫಿ ಕೇಂದ್ರ ಹಾಗೂ ಕಾಫಿ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ ಕಾಫಿ ಮಂಡಳಿಯ ಎಕ್ಸೆ÷್ಪಂಡಿಚರ್ ಫೈನಾನ್ಸ್ ಕಮಿಟಿ ಪ್ರಸ್ತಾಪಿಸಿದೆ.

ಮುಂದಿನ ಐದು ವರ್ಷದಲ್ಲಿ ಕೌಶಲ್ಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ಕಾಫಿ ಮಂಡಳಿ ಹಮ್ಮಿಕೊಳ್ಳುತ್ತಿದೆ. ಇದರಲ್ಲಿ ಸ್ವಸಹಾಯ ಸಂಘ ಮತ್ತು ಗ್ರಾಮೀಣ ಭಾಗದಿಂದ ಒಂದು ಲಕ್ಷ ಮಹಿಳೆಯರಿಗೆ ಕಾಫಿ ತಯಾರಿಸುವ ಸರಿಯಾದ ವಿಧಾನದ ಕುರಿತು ತರಬೇತಿ ನೀಡಲು ಯೋಜಿಸಲಾಗಿದೆ.

ಕಾಫಿ ಉದ್ಯಮದಲ್ಲಿ ಬ್ಯಾರಿಸ್ಟಾಗಳ (ಕಾಫಿ ತಯಾರಿಸುವವರು) ಕೊರತೆ ಇದೆ. ಮುಂದಿನ ಮೂರು ವರ್ಷದಲ್ಲಿ ಒಂದು ಸಾವಿರ ಬ್ಯಾರಿಸ್ಟಾಗಳಿಗೆ ತರಬೇತಿ ನೀಡಲು ಯೋಜನೆ ಹಾಕಲಾಗಿದೆ. ಇಲ್ಲಿಯವರೆಗೆ ೧೫೦ ಮಂದಿಗೆ ತರಬೇತಿ ನೀಡಲಾಗಿದೆ ಎಂದು ಕಾಫಿ ಮಂಡಳಿ ಸಿಇಓ ಜಗದೀಶ ಹೇಳಿದ್ದಾರೆ. ಕಾಫಿ ಮಂಡಳಿ ಈಗ ಒಂದು ವರ್ಷದ ಕಾಫಿ ಶಾಸ್ತç ಹೆಸರಿನ ಕಿರು ಅವಧಿ ಕೋರ್ಸನ್ನು ನಡೆಸುತ್ತಿದೆ. ಮಾರ್ಚ್ ೧೮ರಿಂದ ೨೨ರವರೆಗೆ ಈ ಕೋರ್ಸ್ಗೆ ಪ್ರವೇಶಾವಕಾಶ ಇದೆ. ಕಾಫಿ ರೋಸ್ಟಿಂಗ್ ಹೊಸ ತಂತ್ರಜ್ಞಾನ ಬಗ್ಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸುವುದು ಈ ಕೋರ್ಸ್ ಉದ್ದೇಶ. ಸದ್ಯ ಇದು ಪ್ರಾಯೋಗಿಕವಾಗಿ ಮಾತ್ರ ಇದೆ. ಯಶಸ್ವಿಯಾದಲ್ಲಿ ಮುಂದಿನ ವರ್ಷಗಳಲ್ಲಿ ಈ ಕೋರ್ಸ್ ಮುಂದುವರಿಯಬಹುದು.

ನಾವು ೫,೦೦೦ ಪದವೀಧರರಿಗೆ ಎಸ್ಪೆçಸೊ ಕಾಫಿಯನ್ನು ಹೇಗೆ ತಯಾರಿಸಬೇಕೆಂದು ತರಬೇತಿ ನೀಡಲಿದ್ದೇವೆ ಮತ್ತು ಕಾಫಿ ವ್ಯಾಪಾರದಲ್ಲಿನ ಅವಕಾಶಗಳನ್ನು ಅನ್ವೇಷಿಸಲು ಅವರಿಗೆ ಸಹಾಯ ಮಾಡಲಿದ್ದೇವೆ" ಎಂದು ಜಗದೀಶ್ ಹೇಳಿದರು.

ಕಾಫಿ ಉತ್ಸಾಹಿಗಳಿಗೆ ‘ಕಾಫಿ ಶಾಸ್ತç' ಎಂದು ಕರೆಯಲ್ಪಡುವ ಅಲ್ಪಾವಧಿಯ ಕೋರ್ಸ್ ಅನ್ನು ಮುಂದಿನ ಮಾರ್ಚ್ ೧೮-೨೨ (ವಿಶೇಷ ಬ್ಯಾಚ್‌ಗಳು)ಕ್ಕೆ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಈ ಕೋರ್ಸ್ ಸೇರಲು ಆಸಕ್ತರು ಕಾಫಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಪರಿಶೀಲನೆ ನಡೆಸಬಹುದಾಗಿದೆ. ಕಾಫಿ ರೋಸ್ಟಿಂಗ್‌ನಲ್ಲಿ ಇತ್ತೀಚಿನ ತಂತ್ರಜ್ಞಾನಗಳಿಗೆ ಸಂಬAಧಿಸಿದ ಕೌಶಲ್ಯಗಳನ್ನು ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.