ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳಿಗೆ ಬಳಸಲ್ಪಡಲಾಗುತಿತ್ತು. ಇದು ತನ್ನದೇ ಆದ ಐತಿಹ್ಯವನ್ನು ಹೊಂದಿದೆ.

ಧಾರ್ಮಿಕ ಆಚರಣೆಯ ಭಾಗ

ಕೊಡಗಿನಲ್ಲಿ ಈ ಹಿಂದೆ ಬೇಟೆಯಾಡಲ್ಪಟ್ಟ ಹಾಗೂ ಸಹಜ ಸಾವಿಗೀಡಾದ ಕಡವೆ, ಜಿಂಕೆ, ಕಾಡುಕೋಣ, ಕಾಡುಕುರಿಯ ಮಾಂಸವನ್ನು ಸೇವಿಸಿದ ಬಳಿಕ ಅದರ ಕೋಡುಗಳನ್ನು (ಕೊಂಬು) ದೇವರಿಗೆ ಅರ್ಪಿಸುವ ಪ್ರತೀತಿ ಇತ್ತು. ಜೊತೆಗೆ ಮನೆಗಳಲ್ಲಿ ಜೋಪಾನವಾಗಿಡಲಾಗುತಿತ್ತು. ಮರದ ಕೃತಕ ಮುಖಗಳನ್ನು ತಯಾರಿಸಿ ಅದಕ್ಕೆ ಕೋಡುಗಳನ್ನು ಅಳವಡಿಸಿ ಅಲಂಕಾರಿಕ ವಸ್ತುಗಳಾಗಿ ಮಾರ್ಪಾಡು ಮಾಡಿ ಐನ್‌ಮನೆ, ವಾಸದ ಮನೆಗಳ ಗೋಡೆ, ಪ್ರವೇಶ ಧ್ವಾರಗಳಲ್ಲಿ ಅಳವಡಿಸಲಾಗುತಿತ್ತು. ಕ್ಷೇತ್ರಪಾಲ, ಭಗವತಿ ಸನ್ನಿಧಿಗಳಿಗೆ ಅರ್ಪಿಸಿದ ಕೊಂಬುಗಳನ್ನು ಬಳಸಿಕೊಂಡು ಕೊಂಬಾಟ್ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆ ಇಂದಿಗೂ ಜಿಲ್ಲೆಯ ಅದೆಷ್ಟೋ ದೇವಾಲಯಗಳಲ್ಲಿ ಮುಂದುವರೆಯುತ್ತಾ ಸಾಗಿದ್ದು, ಜನರ ಭಾವನೆಯೊಂದಿಗೆ ಮಿಶ್ರಿತವಾಗಿದೆ. ಈ ಕಾಯಿದೆಯಿಂದ ಆಚರಣೆ ಸ್ಥಗಿತಗೊಳ್ಳುವ ಆತಂಕ ಮನೆಮಾಡಿದೆ.

ಅದೇ ರೀತಿ ನವಿಲುಗರಿಯನ್ನು ಬಳಸಿಕೊಂಡು ದೇವಾಲಯಗಳಲ್ಲಿ ‘ಪೀಲಿಯಾಟ್’ ನಡೆಸಲಾಗುತ್ತದೆ. ಆದರೆ, ವನ್ಯಜೀವಿ ಸಂರಕ್ಷಣೆ ಕಾಯಿದೆಯಲ್ಲಿ ನವಿಲುಗರಿ ಇಟ್ಟುಕೊಳ್ಳಲು ಅವಕಾಶವಿರುವುದರಿಂದ ಪೀಲಿಯಾಟ್ ಆಚರಣೆಗೆ ಯಾವುದೇ ಅಡಚಣೆ ಇರುವುದಿಲ್ಲ. ಇದಲ್ಲದೆ ಹಲವು ಪುರಾತನ ಮನೆಗಳಲ್ಲೂ (ಐನ್‌ಮನೆ ರೀತಿ) ವನ್ಯಜೀವಿ ಉತ್ಪನ್ನಗಳ ಸಂಗ್ರಹವಿದೆ.

ಚರ್ಮಗಳಿಗೂ ಪ್ರಾತಿನಿಧ್ಯ

ಹುಲಿ, ಜಿಂಕೆ, ಕಾಡು ಕುರಿ ಚರ್ಮಗಳು ಬಳುವಳಿಯಾಗಿ ಪಾರಂಪರಿಕವಾಗಿ ಇಂದಿನ ಪೀಳಿಗೆಗೆ ಹಸ್ತಾಂತರವಾಗಿದೆ.

ಹಿಂದಿನ ಕಾಲದಲ್ಲಿ ಈ ಚರ್ಮಗಳಲ್ಲಿ ಮಕ್ಕಳನ್ನು ಮಲಗಿಸಲು, ಅಕ್ಕಿ, ಗೋದಿ ಸೇರಿದಂತೆ ಇನ್ನಿತರ ಹಿಟ್ಟನ್ನು ಶೇಖರಿಸಲು, ಗದ್ದೆ ಕೆಲಸದ ಸಮಯದಲ್ಲಿ ಮಣ್ಣನ್ನು ಹೊತ್ತೊಯ್ಯಲು ಇದರ ಬಳಕೆ ಹೆಚ್ಚಿತ್ತು. ಅದೇ ರೀತಿ ಆನೆಹಲ್ಲು, ದಂತ, ಹುಲಿ ಉಗುರುಗಳು ಕೂಡ ಬಳುವಳಿಯಾಗಿ ಬಂದಿವೆ. ಆನೆಹಲ್ಲನ್ನು ಗಂಟಲು ಬಾಹು (ಮಮ್ಸ್) ಸಮಸ್ಯೆಗೆ ಔಷಧಿಯಾಗಿಯೂ ಬಳಸಲಾಗುತಿತ್ತು.

ಟ್ರೋಫಿಯೂ ಹಿಂದಿರುಗಿಸಬೇಕು

ರಾಜರ ಹಾಗೂ ಬ್ರಿಟಿಷರ ಕಾಲದಲ್ಲಿ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ನಿಷ್ಠೆ ತೋರುವವರಿಗೆ ವನ್ಯಜೀವಿಯ ಅಂಗಾAಗಗಳಿAದ ಮಾಡಿದ ಟ್ರೋಫಿಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುತಿತ್ತು. ಅಂತಹ ವಸ್ತುಗಳಿದ್ದಲ್ಲು ಇದೀಗ ಹಿಂದಿರುಗಿಸಬೇಕಾಗಿದೆ.

ಮೊದಲು ಪೀಚೆಕತ್ತಿ, ಒಡಿಕತ್ತಿಯಲ್ಲೂ ಆನೆದಂತದ ಬಳಕೆಯಾಗುತಿತ್ತು. ಈ ಕ್ರಮದಿಂದ ಸಾಂಪ್ರದಾಯಿಕ ವಸ್ತುಗಳನ್ನು ಹಿಂದಿರುಗಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಈ ರೀತಿ ಪಾರಂಪರಿಕವಾಗಿ ಜೊತೆಗಿದ್ದ ವನ್ಯಜೀವಿ ವಸ್ತುಗಳನ್ನು ಹಿಂದಿರುಗಿಸಲು ನೀಡಿರುವ ಗಡುವು ಜನರ ವಿರೋಧಕ್ಕೆ ಕಾರಣವಾಗಿದ್ದು, ಜಿಲ್ಲೆಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆ ಇದೆ. ಆದರೆ, ಸರಕಾರದ ಮಟ್ಟದಲ್ಲಿ ಈ ಕುರಿತು ಯಾವುದೇ ಪ್ರಸ್ತಾವನೆಗಳಿಲ್ಲದ ಕಾರಣ ಸರಕಾರಕ್ಕೆ ಹಿಂದಿರುಗಿ ಸುವುದೊಂದೆ ಉಳಿದ ಮಾರ್ಗವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಪಾರಂಪರಿಕ ವಸ್ತು ಇಟ್ಟುಕೊಳ್ಳುವುದು ಅಪರಾಧವಲ್ಲ ಜಿಲ್ಲೆಯ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದರು. ಇದೀಗ ಅವರು ಸರಕಾರದ ಸಚಿವ ಸಂಪುಟ ದರ್ಜೆ ಹೊಂದಿರುವ ಕಾರಣ ಸರಕಾರದ ಗಮನ ಸೆಳೆಯಬೇಕೆಂಬ ಒತ್ತಾಯ ಜನರಿಂದ ವ್ಯಕ್ತವಾಗಿದೆ.