ಮಡಿಕೇರಿ, ಫೆ. ೧೩: ವನ್ಯಪ್ರಾಣಿಗಳ ಅಂಗಾAಗಗಳಿAದ ಮಾಡಿದ ಉತ್ಪನ್ನಗಳನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸುವAತೆ ನಾಗರಹೊಳೆ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೂಚಿಸಿದ್ದಾರೆ.

ರಾಜ್ಯ ಸರಕಾರವು ಈಗಾಗಲೇ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅನ್ವಯ ಕಾಡುಪ್ರಾಣಿಗಳ ಅಂಗಾAಗಗಳ ಪದಾರ್ಥಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧಗೊಳಿಸಿ ಅಧಿಕೃತವಾಗಿ ನಿಯಮ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಪ್ರಾಣಿಗಳ ಅಂಗಾAಗಗಳ ಪದಾರ್ಥಗಳು, ಟ್ರೋಫಿಗಳನ್ನು ಹಿಂತಿರುಗಿಸಲು ೯೦ ದಿನಗಳ ಕಾಲಾವಕಾಶ ನೀಡಲಾಗಿದೆ. ಜಿಲ್ಲೆಯ ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ವನ್ಯಜೀವಿ ಉಪವಿಭಾಗದ ವ್ಯಾಪ್ತಿಯಲ್ಲಿ ಈ ರೀತಿಯ ಉತ್ಪನ್ನಗಳಿದ್ದಲ್ಲಿ ಇಲಾಖೆ ಮೂಲಕ ನಮೂನೆ-೧ ಅರ್ಜಿ ಪಡೆದು ದ್ವಿಪ್ರತಿಯೊಂದಿಗೆ ರೂ. ೧೦೦ ಸ್ಟಾö್ಯಂಪ್ ಪೇಪರ್‌ನಲ್ಲಿ ನೋಟರಿ ಮಾಡಿಸಿ ತಾ. ೧೧.೦೪.೨೦೨೪ ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.