*ಸಿದ್ದಾಪುರ, ಫೆ. ೧೩: ಇತ್ತೀಚೆಗೆ ಪೆರಾಜೆ ಶಾಲೆಗೆ ವರ್ಗಾವಣೆಗೊಂಡ ಅಭ್ಯತ್‌ಮಂಗಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಡೈಸಿ ಅವರನ್ನು ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಪ್ರಮುಖರು ಸನ್ಮಾನಿಸಿ ಬೀಳ್ಕೊಟ್ಟರು. ಸಮಿತಿಯ ಅಧ್ಯಕ್ಷ ಲಕ್ಷö್ಮಣ, ಮಾಜಿ ಅಧ್ಯಕ್ಷೆ ಸುಮ, ಶಾಲೆಯ ಮುಖ್ಯೋಪಾಧ್ಯಾಯಿನಿ ಲಲಿತ, ಶಿಕ್ಷಕರುಗಳಾದ ಹಸೀನ, ಮಮ್ತಾಜ್, ದಿವ್ಯ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.