ಮಡಿಕೇರಿ, ಫೆ. ೧೫: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಅರೆಭಾಷಿಕ ಗೌಡ ವಧು-ವರರ ಸಮಾವೇಶ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಂಗಾರು ಲಿಂಗರಾಜು ಅವರು, ಕೆಲವು ಸಂದರ್ಭಗಳಲ್ಲಿ ಎಲ್ಲಾ ನಿಯಮ ಗಳನ್ನು ಪಾಲಿಸಲು ಸಾಧ್ಯವಾಗು ವುದಿಲ್ಲ.

ಹೊಂದಾಣಿಕೆಯೇ ಜೀವನವಾಗಿದ್ದು, ಸಂಸಾರದಲ್ಲಿ ಸುಖ, ಸಂತೋಷ ಸಹಬಾಳ್ವೆಯನ್ನು ನಡೆಸಲು ಎಲ್ಲರೂ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅವರು ಸ್ವಾಗತಿಸಿದರು. ಉಳುವಾರನ ರೋಶನ್ ಕಾರ್ಯಕ್ರಮ ನಿರೂಪಿಸಿ, ವಧು-ವರರ ಮಾಹಿತಿ ನೀಡಿದರು.

ನಿರ್ದೇಶಕಿ ಕೂಡಕಂಡಿ ಉಮಾ ದೇವಿ ಪ್ರಾರ್ಥಿಸಿ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ ವಂದಿಸಿದರು.

ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಕರ್ಣಯ್ಯನ ನಾಗೇಶ್, ಜಂಟಿ ಕಾರ್ಯದರ್ಶಿ ಅತ್ತೇರಿ ಕೃಷ್ಣಪ್ಪ, ನಿರ್ದೇಶಕರಾದ ಪೊನ್ನಚ್ಚನ ಸೋಮಣ್ಣ, ಬೈತಡ್ಕ ಬೆಳ್ಯಪ್ಪ, ದಂಬೆಕೋಡಿ ಆನಂದ, ಕುದುಪಜೆ ಶಾರದ, ತಳೂರು ಕಾಳಪ್ಪ, ಕುಯ್ಯಮುಡಿ ವಸಂತ, ಹೊಸೊಕ್ಲು ಟಿ. ಪೊನ್ನಪ್ಪ, ಗೋದೆಟ್ಟಿರ ರಾಮಯ್ಯ, ಕುಲ್ಲಚೆಟ್ಟಿ ಪೂವಯ್ಯ ಉಪಸ್ಥಿತರಿದ್ದರು.

ವಧು-ವರರ ಸಮಾವೇಶದಲ್ಲಿ ೯೦ಕ್ಕೂ ಹೆಚ್ಚು ವಧು-ವರರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.