ವೀರಾಜಪೇಟೆ, ಫೆ. ೧೫: ವೀರಾಜಪೇಟೆಯ ಸರ್ಕಾರಿ ಬಿ.ಸಿ. ಪ್ರೌಢಶಾಲೆ ದೇವಣಗೇರಿಯಲ್ಲಿ ಜಸ್ಟ್ ರೊಬೋಟಿಕ್ಸ್ ಹಾಗೂ ಓಜಸ್ವಿ ಫೌಂಡೇಶನ್ ಸಹಭಾಗಿತ್ವದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ೮ನೇ ತರಗತಿಯ ರೋಬೋಟಿಕ್ ಸೈನ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಓಜಸ್ವಿ ಚೈತನ್ಯ ಎಂಬ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಾವೇರಿ ಶಾಲೆ ಅಧ್ಯಕ್ಷ ಸುದೇಶ್ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಮಾತನಾಡಿದರು.

ಓಜಸ್ವಿ ಟ್ರಸ್ಟಿ ಕವಿತಾ ಹಾಗೂ ಜಸ್ಟ್ ರೋಬೋಟಿಕ್ಸ್ ಸಿ.ಇ.ಓ. ಬ್ರಿಜೇಶ್ ಹೊಸ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳ ಊಹೆಗೂ ಮೀರಿದ ಕುತೂಹಲಕಾರಿಯಾದ ವಿಷಯಗಳನ್ನು ಪ್ರಸ್ತಾಪಿಸಿದರು.

ನಂತರ ಕಾವೇರಿ ಶಾಲೆಯ ವಿದ್ಯಾರ್ಥಿಗಳು ತಾವು ಕಲಿತ ಮೋಟಾರ್ ಕಾರು ತಯಾರಿಸುವ ಹಾಗೂ ಚಲಾಯಿಸುವ ವಿಧಾನವನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಆಸಕ್ತದಾಯಕವಾಗಿ ಕಲಿಸಿ, ಆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ಈ ಸಂದರ್ಭ ಸರಕಾರಿ ಬಿ.ಸಿ. ಪ್ರೌಢಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸರಸ್ವತಿ, ಕಾವೇರಿ ಶಾಲೆಯ ಕಾರ್ಯದರ್ಶಿ ವಿನೋದ್ ಪಿ.ಎನ್., ಬಿ.ಸಿ. ಪ್ರೌಢಶಾಲೆಯ ಸಹಶಿಕ್ಷಕರು, ಕಾವೇರಿ ಶಾಲೆಯ ದೈಹಿಕ ಶಿಕ್ಷಕಿ ಮೋನಿಕಾ, ಸಹ ಶಿಕ್ಷಕಿ ತುಳಸಿ ಹಾಜರಿದ್ದರು.