ಕೂಡಿಗೆ, ಫೆ. ೧೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗರಿ ಗ್ರಾಮದಲ್ಲಿರುವ ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಸಿದ್ಧಗೊಂಡು ಈಗಾಗಲೇ ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ರೂ. ೩.೨೧ ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕದಲ್ಲಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ಸಂಬAಧಿಸಿದAತೆ ಹಣವು ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟೆಂಡರ್ ಪ್ರಕ್ರಿಯೆಯು ನಡೆದಿದೆ. ಇದೀಗ ವಿವಿಧ ಹಂತಗಳ ಕಾಮಗಾರಿಗಳು ಆರಂಭಗೊAಡಿವೆ. ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಪೂರಕವಾದ ವಿವಿಧ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ಹಣವು ಹಂತ ಹಂತವಾಗಿ ಬಿಡುಗಡೆಗೊಂಡು ಭುವನಗರಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನೂತನವಾಗಿ ಕಸ ವಿಲೇವಾರಿಗೆ ಸಂಬAಧಿಸಿದ ಶೆಡ್ ನಿರ್ಮಾಣ ಮತ್ತು ಒಣ ಕಸ ಮತ್ತು ಹಸಿಕಸಗಳ ಬೇರ್ಪಡಿಸುವ ನೂತನ ತಂತ್ರಜ್ಞಾನದ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಬೃಹತ್ ನಗರಗಳಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ಅಳವಡಿಕೆ ಮಾಡಲಾಗಿರುವ ವಿವಿಧ ವಿನ್ಯಾಸ ಆಧುನಿಕ, ಅಂರ‍್ರಾಷ್ಟಿçÃಯ ತಂತ್ರಜ್ಞಾನದ ಯಂತ್ರಗಳ ಅಳವಡಿಸುವ ಯೋಜನೆಗೆ ಪೂರಕವಾಗಿ ವಿವಿಧ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಅದರ ಅನುಗುಣವಾಗಿ ಕಾಮಗಾರಿಗಳು ಭುವನಗರಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನಡೆಯುತ್ತಿವೆ.

ಕುಶಾಲನಗರ ಪುರಸಭೆಯ ಮಾಸಿಕ ಸಭೆಯ ತೀರ್ಮಾನದಂತೆ ನೂತನ ಕಸ ವಿಲೇವಾರಿ ಯಂತ್ರಗಳ ಜೋಡಣೆಮತ್ತು ಒಣ ಕಸವನ್ನು ಸಿಮೆಂಟ್ ಕಾರ್ಖಾನೆಗಳಿಗೆ ಸಾಗಾಟ ಮಾಡುವ ಮತ್ತು ಕಸದಿಂದ ಸ್ಥಳೀಯ ಗ್ರಾಮಸ್ಥರಿಗೆ ಯಾವುದೆ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ದೃಷ್ಟಿಯಿಂದ ಸರಕಾರದ ಹೊಸ ಯೋಜನೆಯ ಅನುಗುಣವಾಗಿ ಕಾಮಗಾರಿಗಳ ಕ್ರಿಯಾ ಯೋಜನೆ ಅನುಗುಣವಾಗಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಪ್ರಮುಖವಾಗಿ ಕಳೆದ ೧೫ ವರ್ಷಗಳ ಹಿಂದೆ ಗುಡ್ಡೆ ಹಾಕುತ್ತಿದ್ದ ಕಸದ ಜಾಗದಲ್ಲಿರುವ ಪಾರಂಪರಿಕ ಕಸವನ್ನು ಬೇರ್ಪಡಿಸಿ ನೂತನ ಯಂತ್ರಗಳ ಪ್ಲಾಸ್ಟಿಕ್ ಅನ್ನು ನೀರಿನ ರೂಪ ಮಾಡುವ ಮೂಲಕ ಹೊಸ ಪ್ಲಾಸ್ಟಿಕ್ ಹೊದಿಕೆ ತಯಾರಿಸುವ ಯೋಜನೆ ಮೂಲಕ ಈಗಾಗಲೇ ಕೇಂದ್ರದಲ್ಲಿ ವಿವಿಧ ಹಂತದ ಕಾಮಗಾರಿಗಳ ಜೊತೆಯಲ್ಲಿ ಕಾರ್ಮಿಕರ ಕೊಠಡಿ, ಶೌಚಾಲಯ, ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ಶೇಡ್ ನಿರ್ಮಾಣ, ಸೇರಿದಂತೆ ಅನೇಕ ಕಾಮಗಾರಿಗಳು ಪ್ರಗತಿಯಂತ ಸಾಗುತ್ತಿವೆ. ಈಗಾಗಲೇ ನೂತನ ಕಸ ವಿಲೇವಾರಿ ಯಂತ್ರಗಳ ಅಳವಡಿಸಲು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ, ಮುಂದಿನ ದಿನಗಳಲ್ಲಿ ಆಧುನಿಕ, ನೂತನ ಮಾದರಿಯ ಯಂತ್ರಗಳ ಅಳವಡಿಸುವ ಕಾರ್ಯದೊಂದಿಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಕೃಷ್ಣ ಪ್ರಸಾದ್ ಮಾಹಿತಿ ನೀಡಿರುತ್ತಾರೆ.