ನಾಪೋಕ್ಲು, ಫೆ. ೧೫: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಸಮೀಪದ ಮೋರಿ ಕಾಡು ಎಂಬಲ್ಲಿ ನಾಪೋಕ್ಲು - ಕಕ್ಕಬೆ ಮುಖ್ಯ ರಸ್ತೆಯ ಬದಿಯಲ್ಲಿ ಶ್ವಾನಗಳಿಗೆ ಆಹಾರವಾಗಿ ಕೊಳೆತು ನಾರುತ್ತಿರುವ ಧನದ ಚರ್ಮ ಗುರುವಾರ ಪತ್ತೆಯಾಗಿದೆ.

ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿ, ಮುಖ್ಯ ರಸ್ತೆಯ ಮೋರಿ ಕಾಡು ಎಂಬಲ್ಲಿ ಗೋವನ್ನು ಕೊಂದು ಚರ್ಮವನ್ನು ಎಸೆದಿದ್ದಾರೆ. ಇದರಿಂದಾಗಿ ಇಲ್ಲಿನ ಪರಿಸರ ಮತ್ತು ನೀರು ಕಲುಷಿತವಾಗಿದೆ. ಮೂರು ನಾಲ್ಕು ದಿನದ ಹಿಂದೆ ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಸಂಬAಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ .ಕೂಡಲೇ ಸಂಬAಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಮುಂದೆ ಇಂತಹ ದುಷ್ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹಿಂದೂ ಸಂಘಟನೆಯ ಪ್ರಮುಖ ಕಂಗಾAಡ ಜಾಲಿ ಪೂವಪ್ಪ ಮಾತನಾಡಿ, ಗೋಹತ್ಯೆ ಮಾಡಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿದೆ. ಪವಿತ್ರ ಗೋಮಾತೆಯನ್ನು ರಕ್ಷಿಸಬೇಕು. ಹತ್ಯೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಅಮ್ಮಂಡ ಮನು ಮಹೇಶ್ ಉಪಸ್ಥಿತರಿದ್ದರು.

-ದುಗ್ಗಳ