ಮಡಿಕೇರಿ, ಫೆ. ೧೫: ಇತ್ತೀಚೆಗೆ ಬೆಂಗಳೂರಿನ ಭಾರತಯೀಯ ಕ್ರೀಡಾ ಪ್ರಾಧಿಕಾರ(ಸಾಯಿ)ದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಸಾಯಿ ಹಾಕಿ ಪಂದ್ಯಾವಳಿ-೨೦೨೪ ರಲ್ಲಿ ಮಡಿಕೇರಿ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ)ದ ೧೯ ವಿದ್ಯಾರ್ಥಿನಿಯರು ಪಾಲ್ಗೊಂಡು ಚಿನ್ನದ ಪದಕ ಪಡೆದಿದ್ದಾರೆ.

ಇವರನ್ನು ಅಭಿನಂದಿಸುವ ಕಾರ್ಯಕ್ರಮವು ತಾ.೧೯ ರಂದು ಸಂಜೆ ೪.೩೦ ಗಂಟೆಗೆ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ವಿದ್ಯಾರ್ಥಿ ನಿಲಯದಲ್ಲಿ ನಡೆಯಲಿದೆ ಎಂದು ಸಾಯಿ ಮೇಲ್ವಿಚಾರಕಿ ಮಿನಿ ಉಣ್ಣಿರಾಜ್ ತಿಳಿಸಿದ್ದಾರೆ.