ಮಡಿಕೇರಿ, ಫೆ. ೧೫: ನಿಟ್ಪೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗೋಣಿಕೊಪ್ಪ ಕಾಫಿ ಮಂಡಳಿ ವತಿಯಿಂದ ಇಗ್ಗುತಪ್ಪ ಸಂಘದ ಸಹಕಾರದೊಂದಿಗೆ ಮಣ್ಣು ಪರೀಕ್ಷಾ ಅಭಿಯಾನ ನಡೆಯಿತು. ಭಾಗವಹಿಸಿದ್ದ ೪೨ ಬೆಳೆಗಾರರಿಗೆ ಸ್ಥಳದಲ್ಲೇ ಸುಣ್ಣದ ಪ್ರಮಾಣದ ಶಿಫಾರಸ್ಸಿನ ಫಲಿತಾಂಶ ನೀಡಲಾಯಿತು.

ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಪುಲಾ ಕುಮಾರಿ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಿರಿಯ ಸಂಪರ್ಕ ಅಧಿಕಾರಿ ಮುಖಾರಿಬ್ ಮಾತನಾಡಿ, ಕಾಫಿ ಬೆಳೆಗಾರರಿಗೆ ಕಾಫಿ ಕಪಾತು ಮಾಡುವ ಬಗ್ಗೆ, ಕಾಫಿ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣದ ಬಗ್ಗೆ, ಸುಣ್ಣದ ಮತ್ತು ಗೊಬ್ಬರದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.

ಇಗ್ಗುತಪ್ಪ ಸಂಘದ ಅಧ್ಯಕ್ಷ ಮುಕ್ಕಾಟಿರ ಪ್ರಿನ್ಸ್ ಪೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಟ್ಪೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು ಕುಮಾರ್, ಇಗ್ಗುತಪ್ಪ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಸೋಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪೊರಂಗಡ ಪವನ್ ಚಿಟ್ಟಿಯಪ್ಪ, ಇಗ್ಗುತಪ್ಪ ಸಂಘದ ಪ್ರಮುಖರಾದ ಕಾಟಿಮಾಡ ಶಿವಪ್ಪ, ಹೊಟ್ಟೇಂಗಡ ಅಜಿತ್, ಕಾಟಿಮಾಡ ಸುಜನ್ ಉತ್ತಪ್ಪ ಹಾಜರಿದ್ದರು.