ಕಡಂಗ, ಫೆ. ೧೫: ಕಡಂಗ-ಅರಪಟ್ಟು ಗ್ರಾಮಕ್ಕೆ ಸೇರಿರುವ ಪುರಾತನ ಶ್ರೀ ಉಮಾಮಹೇಶ್ವರ ದೇವಾಲಯದ ದೇವರ ವಾರ್ಷಿಕ ಉತ್ಸವ ತಾ. ೧೩ ರಂದು ಕುಂಭ ಸಂಕ್ರಮಣದ ದಿನ ವಿಜೃಂಭಣೆಯಿAದ ನಡೆಯಿತು. ಉತ್ಸವದ ಅಂಗವಾಗಿ ಮುಂಜಾನೆ ಗಣಪತಿ ಹೋಮ ನಡೆಸಲಾಯಿತು. ನಂತರ ಸಾಮೂಹಿಕ ರುದ್ರಾಭಿಷೇಕ, ಎತ್ತು ಪೋರಾಟ ನಡೆದು ಆನಂತರ ಮಹಾಪೂಜೆ ನಡೆಯಿತು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿಸಲಾಯಿತು. ದೇವಾಲಯದ ಅಧ್ಯಕ್ಷರಾದ ನೆರಪಂಡ ಚಿತ್ರ ಬೆಳ್ಯಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.