ಕುಶಾಲನಗರ, ಫೆ. ೧೫: ಕುಶಾಲನಗರ ಚೌಡೇಶ್ವರಿ ದೇವಸ್ಥಾನ, ದೇವಾಂಗ ಸಂಘದ ಸಮಿತಿಯ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವೀರಭದ್ರ ಗುಡಿ ಲೋಕಾರ್ಪಣೆ ಹಾಗೂ ದೇವರ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಕಾವೇರಿ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸಿ ನಂತರ ಕಳಸ ಮೆರವಣಿಗೆ ಮೂಲಕ ಮಂಗಳವಾದ್ಯಗಳೊAದಿಗೆ ದೇವಾಲಯದ ಆವರಣಕ್ಕೆ ಆಗಮಿಸಲಾಯಿತು.

ವಿಶೇಷ ಪೂಜಾ ಕಾರ್ಯಕ್ರಮಗಳ ನಂತರ ಕುಂಭ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ, ನಂತರ ತತ್ವಾಧಿಮಾಸ ಹೋಮ, ದುರ್ಗಾ ಹೋಮ ಕಲಶ ಅಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಭಟ್ ಸೇರಿದಂತೆ ಶೃಂಗೇರಿಯ ಫಣಿತ್ ತಂಡದವರಿAದ ಹೋಮ ಹವನಗಳು ನಡೆದವು.

ಮಹಾಮಂಗಳಾರತಿ ಪ್ರಸಾದ ವಿನಿಯೋಗ ಸೇರಿದಂತೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭ ದೇವಾಲಯದ ಸಮಿತಿಯ ಅಧ್ಯಕ್ಷ ಡಿ.ವಿ. ರಾಜೇಶ್, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ವಿ. ಚಂದ್ರು (ರಾಕಿ), ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣ ಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಹ ಕಾರ್ಯದರ್ಶಿ ಡಿ.ವಿ. ಚಂದ್ರಶೇಖರ, ಸಂಘಟನಾ ಡಿ.ವಿ. ವಿನೋದ್, ಗೌರವ ಸಲಹೆಗಾರರಾದ ಡಿ.ಎಸ್. ಜಗದೀಶ್, ಡಿ.ಕೆ. ತಿಮ್ಮಪ್ಪ, ಡಿ.ಟಿ. ನಾಗೇಂದ್ರ, ಕೆ.ಎಸ್. ಮೇಘರಾಜ್, ಡಿ.ಸಿ. ಜಗದೀಶ್, ಸಂಚಾಲಕರಾದ ಶಶಿ, ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಮಹೇಶ್, ಯುವಕ ಸಂಘದ ಅಧ್ಯಕ್ಷ ಯತಿರಾಜ್ ಕುಮಾರ್ ಸೇರಿದಂತೆ ಸಮಿತಿಯ ಪ್ರಮುಖರು, ದೇವಾಂಗ ಸಂಘದ ಕುಲಬಾಂಧವರು ಪಾಲ್ಗೊಂಡಿದ್ದರು.