ಮಡಿಕೇರಿ, ಫೆ. ೧೫: ಹೊದ್ದೂರು ಗ್ರಾಮದ ಶ್ರೀ ಶಾಸ್ತ-ಈಶ್ವರ ದೇವರ ೩ನೇ ವರ್ಷದ ವಾರ್ಷಿಕ ಉತ್ಸವ ತಾ. ೧೭ರಂದು ನಡೆಯಲಿದೆ. ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ದೇವರ ತೂಚಂಬಲಿ ನೃತ್ಯ, ೧೦ ಗಂಟೆಗೆ ವಾರ್ಷಿಕ ಉತ್ಸವ ಪೂಜೆ, ಮಹಾ ಮಂಗಳಾರತಿ, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪ ಗಂಟೆಗೆ ಕಾವೇರಿ ಹೊಳೆಯಲ್ಲಿ ದೇವರ ಜಳಕ, ಚಂಡೆ ಮದ್ದಳೆಯೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ನೃತ್ಯ, ಸಂಪ್ರೋಕ್ಷಣೆ, ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ತೋಯತ ತೆರೆ ನಡೆಯಲಿದೆ. ತಾ. ೧೮ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಕೋಲ, ಬಾರಣಿ ಹಾಗೂ ಶುದ್ಧ ಕಳಸ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ತಿಳಿಸಿದ್ದಾರೆ.