ಮಡಿಕೇರಿ, ಫೆ.೧೭ : ಮೇಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ೪೧ ಟ್ರಾö್ಯಕ್ ಸೂಟ್‌ಗಳನ್ನು ವಿತರಿಸಲಾಯಿತು.

ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್. ಕೇಶವ್ ಶಾಲಾ ಸಭಾಂಗಣದಲ್ಲಿ ಶಾಲೆಯ ೪೧ ವಿದ್ಯಾರ್ಥಿಗಳಿಗೆ ಟ್ರಾö್ಯಕ್ ಸೂಟ್ ವಿತರಿಸಿದರು. ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆದ ಶಾಲೆಯನ್ನು ಸದಾ ಯೋಚನೆಯಲ್ಲಿರಿಸಿಕೊಂಡು ಉತ್ತಮ ಸ್ಥಾನ ಪಡೆದ ಬಳಿಕ ಆ ಶಾಲೆಗೆ ಸೂಕ್ತ ನೆರವು ನೀಡುವ ಮೂಲಕ ಮಾದರಿಗಳಾಗಬೇಕೆಂದು ಕಿವಿಮಾತು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್ . ಎಸ್. ಸಂಪತ್‌ಕುಮಾರ್, ರೋಟರಿ ಮಿಸ್ಟಿ ಹಿಲ್ಸ್ ಪ್ರಮುಖರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ, ಅನಿತಾಪೂವಯ್ಯ, ಪೊನ್ನಚ್ಚನ ಮಧುಸೂದನ್, ನಮಿತಾರೈ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಅನಿತಾ, ಶಾಲಾ ಮುಖ್ಯ ಶಿಕ್ಷಕಿ ಸಬಿತ, ಗ್ರಾ.ಪಂ. ಸದಸ್ಯರಾದ ಹನೀಫ್, ಮುತ್ತಮ್ಮ, ಪಿಡಿಓ ಶ್ರೀಧರ್, ಶಿಕ್ಷಕಿಯರಾದ ಲಾವಣ್ಯ, ಶ್ರೀಲತಾ, ರೇಖಾ, ಪೋಷಕರು ಹಾಜರಿದ್ದರು.