ಮಡಿಕೇರಿ, ಫೆ. ೧೬: ರಥಸಪ್ತಮಿ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮ ನಗರದ ರಾಜಾಸೀಟ್ ಉದ್ಯಾನವನದಲ್ಲಿ ನಡೆಯಿತು.

ನಗರದ ಯೋಗ ಕೇಂದ್ರಗಳಾದ ಮಾರ್ನಿಂಗ್ ಸ್ಟರ‍್ಸ್, ಪತಂಜಲಿ ಯೋಗ ಶಿಕ್ಷಣ ಸಮಿತಿ, ಪ್ರಣವ ಯೋಗ ಹಾಗೂ ಯೋಗಭಾರತಿ ಆಶ್ರಯದಲ್ಲಿ ನಡೆದ ೧೦೮ ಸೂರ್ಯನಮಸ್ಕಾರದ ಕಾರ್ಯಕ್ರಮದಲ್ಲಿ ೯೩ ಯೋಗಾಭ್ಯಾಸಿಗಳು ಭಾಗವಹಿಸಿದ್ದರು.