ಮಡಿಕೇರಿ, ಫೆ. ೧೬: ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಆಯೋಜಿಸಿರುವ ರಾಷ್ಟಿçÃಯ ಯುವ ಸಂಸತ್ತು-೨೦೨೪ ಪ್ರಯುಕ್ತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. (i)ಒಚಿಞiಟಿg Iಟಿಜiಚಿ ಚಿ gಟobಚಿಟ ಐeಚಿಜeಡಿ ii) ಈಡಿom ಂಣmಚಿಟಿiಡಿbhಚಿಡಿ ಣo ಗಿiಞsiಣ ಃhಚಿಡಿಣ iii) ಇmಠಿoತಿeಡಿiಟಿg ಣhe ಜಿuಣuಡಿe) ಕುರಿತಾದ ವಿಷಯವನ್ನು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಮಾತನಾಡ ಬಹುದಾಗಿದೆ. (ಕನ್ನಡ ಭಾಷೆಯು ರಾಜ್ಯಮಟ್ಟದವರೆಗೆ ಮಾತ್ರ ಸೀಮಿತವಾಗಿರುತ್ತದೆ.) ಜಿಲ್ಲಾಮಟ್ಟದ ಸ್ಪರ್ಧೆಯು ವರ್ಚುವಲ್ ಮುಖಾಂತರ ನಡೆಯುತ್ತದೆ. ವಿಜೇತರಾದ ಇಬ್ಬರು ಅಭ್ಯರ್ಥಿಗಳು ರಾಜ್ಯ ಮಟ್ಟದಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿ ವಿಜೇತರಾದವರು ರಾಷ್ಟçಮಟ್ಟದಲ್ಲಿ ಸಂಸತ್ತಿನಲ್ಲಿ ಮಾತನಾಡಲು ಆಯ್ಕೆಯಾಗುತ್ತಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರವನ್ನು ಮಾತ್ರ ನೀಡಲಾಗುವುದು. ರಾಷ್ಟçಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುವಾನ ೨,೦೦,೦೦೦/-, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ೧,೫೦,೦೦೦/- ಹಾಗೂ ೧,೦೦,೦೦೦/- ಮತ್ತು ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ೫೦,೦೦೦/- ರೂಗಳನ್ನು ನೀಡಲಾಗುವುದು. ಭಾಗವಹಿಸುವ ಅಭ್ಯರ್ಥಿಗಳ ವಯಸ್ಸು ೧೮ ರಿಂದ ೨೫ ವರ್ಷವಾಗಿರಬೇಕು. ಕೊಡಗು ಜಿಲ್ಲೆಯವರಿಗೆ ಮಾತ್ರ ಅವಕಾಶ, ಭಾಗವಹಿಸುವ ಅಭ್ಯರ್ಥಿಗಳು ನನ್ನ ಭಾರತ್ (ಒಙ ಃhಚಿಡಿಣ) ಪೋರ್ಟ್ಲ್‌ನಲ್ಲಿ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಸಿಕೊಳ್ಳತಕ್ಕದ್ದು. ಹೆಸರನ್ನು ನೊಂದಾಯಿಸಿಕೊಳ್ಳಲು ಕೊನೆ ದಿನಾಂಕ ೧೮.೦೨.೨೦೨೪. ಹೆಚ್ಚಿನ ಮಾಹಿತಿಗಾಗಿ ೦೮೨೭೨-೨೨೫೪೭೦ಮತ್ತು ೯೭೩೧೧೦೮೧೫೪, ೯೫೯೧೩೦೩೬೦೪ ಸಂಪರ್ಕಿಸಬಹುದು.