ನಾಪೋಕ್ಲು, ಫೆ. ೧೬: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯುಷ್ಮಾನ್ ಇಲಾಖೆ ವತಿಯಿಂದ ಯೋಗ ತರಬೇತಿ ಕಾರ್ಯಗಾರ ಜರುಗಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯೋಗ ಗುರು ಕೌಶಿಕ್ ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿ ಯೋಗದ ಮಹತ್ವ ಹಾಗೂ ಪ್ರಯೋಜನದ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭ ವೈದ್ಯಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.