ಜಿಲ್ಲೆಗಳಲ್ಲಿ ಇವರು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಬಲಮುರಿ ನಿವಾಸಿ ಟಿ.ಎಸ್. ಸುದೀಪ್ (೨೩), ಎಂ.ಬಾಡಗ ನಿವಾಸಿ ಎಂ.ಎA. ನಿಶಾಂತ್ (೨೭), ನಾಪೋಕ್ಲು ಹಳೆ ತಾಲೂಕು ನಿವಾಸಿ ಇಬ್ರಾಹಿಂ (೨೯) ಬಂಧಿತ ಆರೋಪಿಗಳು.

ಸಂಪಾಜೆಯ ಕೆ.ಕೆ. ವಿಜಯ್ ಕುಮಾರ್ ಎಂಬವರ ಮನೆಯಲ್ಲಿ ತಾ. ೮ ರಂದು ಯಾರು ಇಲ್ಲದ ಸಂದರ್ಭ ಸಮಯ ಸಾಧಿಸಿದ ಕಳ್ಳರು ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ ೪೭ ಗ್ರಾಂ ತೂಕದ ಚಿನ್ನಾಭರಣ, ರೂ. ೨೦ ಸಾವಿರ ನಗದು ಕಳವು ಮಾಡಿದ್ದರು. ಈ ಸಂಬAಧ

ತಾ. ೮ ರಂದು ಯಾರು ಇಲ್ಲದ ಸಂದರ್ಭ ಸಮಯ ಸಾಧಿಸಿದ ಕಳ್ಳರು ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ ೪೭ ಗ್ರಾಂ ತೂಕದ ಚಿನ್ನಾಭರಣ, ರೂ. ೨೦ ಸಾವಿರ ನಗದು ಕಳವು ಮಾಡಿದ್ದರು. ಈ ಸಂಬAಧ

(ಮೊದಲ ಪುಟದಿಂದ) ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರನ್ನು ಬಂಧಿಸಿ ೩೦ ಗ್ರಾಂ ಚಿನ್ನಾಭರಣ, ರೂ. ೪,೮೬೦ ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭ ಕುಶಾಲನಗರ ಠಾಣಾ ವ್ಯಾಪ್ತಿಯ ಮಾದಾಪುರ ನಿವಾಸಿ ಜೀವನ್ ಎಂಬವರ ಮನೆಗೆ ನುಗ್ಗಿ ೧೦೦ ಗ್ರಾಂ ಚಿನ್ನ, ರೂ. ೧.೨೦ ಲಕ್ಷ ನಗದು ಮತ್ತು ಜಾಗ, ಜಮೀನಿನ ಮೂಲ ದಾಖಲಾತಿಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ೫೯ ಗ್ರಾಂ ಚಿನ್ನ, ರೂ. ೫,೯೯೦ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಮಂಗಳೂರು, ಹಾಸನ, ಮದ್ದೂರು, ಚನ್ನಪಟ್ಟಣ, ರಾಮನಗರ ಭಾಗಗಳಲ್ಲಿಯೂ ಕಳ್ಳತನ ಮಾಡಿರುವುದು ತನಿಖೆಯಿಂದ ಹೊರಬಿದ್ದಿದೆ. ಮಡಿಕೇರಿ ಡಿ.ವೈಎಸ್.ಪಿ. ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಯು. ಉಮೇಶ್, ಉಪನಿರೀಕ್ಷಕ ರಮೇಶ್ ಕರಕಿಟ್ಟಿ, ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.