ಮಡಿಕೇರಿ, ಫೆ. ೧೬: ಸ್ವಸ್ಥ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಪೋಷಕರಿಗಾಗಿ ವಿಶೇಷಚೇತನರ ಪಿತ್ರಾರ್ಜಿತ ಆಸ್ತಿ ಮೇಲಿನ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಜಿಲ್ಲೆಯ ನ್ಯಾಯಾಧೀಶರಾದ ಕೆ.ಬಿ. ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾಹಿತಿ ಒದಗಿಸಿದರು.

ಭಾರತ ಸಂವಿಧಾನದAತೆ ಹಾಗೂ ವಿಶ್ವದ ೯೫ ರಾಷ್ಟçಗಳು ಸೇರಿ ಮಾಡಿಕೊಂಡAತಹ ಒಡಂಬಡಿಕೆಯಲ್ಲಿ ಮಕ್ಕಳ ಹಕ್ಕುಗಳು ರಕ್ಷಣೆ, ನ್ಯಾಯ ಪ್ರಮುಖವಾಗಿದ್ದು, ವಿಶೇಷ ಮಕ್ಕಳಿಗೂ ಒಳಪಡುತ್ತದೆ. ಮಕ್ಕಳ ಕಾನೂನು ಕಾಯ್ದೆಯಡಿಯಲ್ಲಿ ಪೋಷಕರು ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಕಾನೂನಿನ ಅರಿವು ಒಂದು ಪ್ರಮುಖವಾದ ವಿಷಯವಾಗಿದೆ. ಇದನ್ನು ಅರಿತುಕೊಂಡು ಅದರ ವ್ಯಾಪ್ತಿಯೊಳಗೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಯಾವುದೇ ಒಬ್ಬ ವ್ಯಕ್ತಿಯೂ ಕಾನೂನಿನಿಂದ ಹೊರಗೆ ಉಳಿದುಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗಾಗಿ ಬಾಲ ನ್ಯಾಯಾಲಯ ವ್ಯವಸ್ಥೆ ಇದ್ದು, ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

೨೦೧೬ ರಲ್ಲಿ ರಾಜ್ಯ ಸರಕಾರದ ನಡಾವಳಿ ೨೦೧೯ ರಲ್ಲಿ ಒಂದು ಪ್ರಾಧಿಕಾರ ರಚಿಸಿ ನಿರ್ದೇಶನಾಲಯ, ಆಯುಕ್ತಾಲಯದ ಮೂಲಕ ಕಾರ್ಯಕ್ರಮವನ್ನು ಆಯೋಜಿಸಿ ನ್ಯಾಯ ಒದಗಿಸುತ್ತಿದೆ. ಕೇಂದ್ರ ಸರಕಾರವು ಕೂಡ ಬಿಗಿ ಕ್ರಮ ಕೈಗೊಳ್ಳುತ್ತಿದೆ. ಪೋಕ್ಸೊ ಕಾಯ್ದೆ ಜೆಜೆ ಕಾಯ್ದೆಗಳ ಮೂಲಕ ಮಹಿಳೆಯರಿಗೆ ಹೆಣ್ಣು ಮಕ್ಕಳಿಗೆ ರಕ್ಷಣೆ ನ್ಯಾಯ ಒದಗಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ ಕೂರ್ಗ್ ಫೌಂಡೇಶನ್ ಟ್ರಸ್ಟಿ ಎ.ಎಸ್. ಮುತ್ತಣ್ಣ ಮಾತನಾಡಿ, ೨೦ ವರ್ಷದಿಂದ ನಮ್ಮ ಸಂಸ್ಥೆ ಹಲವಾರು ರೀತಿಯ ಅರಿವು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇತ್ತೀಚೆಗೆ ಕಾನೂನಿನ ಅರಿವು ಕಾರ್ಯದ ಆಯೋಜನೆ ಪೋಷಕರಿಗೆ ತುಂಬಾ ಉಪಯುಕ್ತಕಾರಿಯಾಗಿದೆ. ಇದರ ಸದುಪಯೋಗ ಪಡೆದುಕೊಂಡು ವಿಶೇಷಚೇತನ ಮಕ್ಕಳಿಗೆ ಅವರ ಹಕ್ಕು ಕಾಯ್ದಿರಿಸಿರುವುದು ಪೋಷಕರ ಜವಾವ್ದಾರಿಯಾಗಿದೆ ಎಂದು ಹೇಳಿದರು.

ಮತ್ತೋರ್ವ ಅತಿಥಿ ಗಂಗಾ ಚಂಗಪ್ಪ ಮಾತನಾಡಿ, ಮಕ್ಕಳ ಉತ್ತಮ ಏಳಿಗೆಗಾಗಿ ಕಾನೂನಿನ ಅರಿವು ಪಡೆಯುವುದು ಪೋಷಕರ ಪ್ರಮುಖ ಕರ್ತವ್ಯ ಎಂದರು. ಪೋಷಕರು ಈ ನಿಟ್ಟಿನಲ್ಲಿ ಕಾಳಜಿ ವಹಿಸಬೇಕೆಂದರು. ಸಂಪನ್ಮೂಲ ವ್ಯಕ್ತಿಗಳಾದ ವಕೀಲ ಹೆಚ್.ಕೆ. ಸುರೇಶ್ ಮಾತನಾಡಿ, ಮಗುವನ್ನು ತಾಯಿಯ ಗರ್ಭದಿಂದ ಘೋರಿಯವರೆಗೂ ಕಾನೂನು ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು. ಇಲಾಖೆಯಡಿಯಲ್ಲಿ ಹಲವಾರು ಸೌಲಭ್ಯಗಳು ವಿಶೇಷಚೇತನರಿಗಾಗಿ ಕಾಯ್ದಿರಿಸಲಾಗಿದೆ. ಇಲಾಖೆಯಲ್ಲಿ ಹಲವಾರು ಸಿಬ್ಬಂದಿಗಳಿದ್ದು, ಇವರು ವಿಶೇಷಚೇತನರ ಮಕ್ಕಳ ಸೌಲಭ್ಯವನ್ನು ಒದಗಿಸುವಲ್ಲಿ ಕಾರ್ಯನಿರತರಾಗಿದ್ದಾರೆ ಎಂದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ಸಮುದಾಯ, ಸಮಾಜ ಹಾಗೂ ಪೋಷಕರು ತಮ್ಮ ವಿಶೇಷ ಮಕ್ಕಳ ಹಕ್ಕುಗಳನ್ನು ಮಕ್ಕಳಿಗೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಪೋಷಕರ ಪಾತ್ರ ತುಂಬಾ ಮುಖ್ಯವಾದದ್ದು. ಸಮುದಾಯ ಹಾಗೂ ಸಮಾಜ ಈ ನಿಟ್ಟಿನಲ್ಲಿ ಪೋಷಕರ ಜೊತೆಗೆ ಕೈಜೋಡಿಸಿದರೆ ತಾರತಮ್ಯವಿಲ್ಲದೆ ಸಮಾನತೆಯ ಸಮಾಜವನ್ನು ನಿರ್ಮಿಸುವಲ್ಲಿ ನಾವು ಯಶಸ್ವಿಯಾಗಬಹುದು ಎಂದರು.