ಕೂಡಿಗೆ, ಫೆ. ೧೬: ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಮರ್ಪಕವಾಗಿ ಮಳೆ ಬರದ ಹಿನ್ನೆಲೆಯಲ್ಲಿ ಮತ್ತು ಅತಿಯಾದ ಬಿಸಿಲಿನ ತಾಪದಿಂದ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬರುವ ಅನೇಕ ಕೆರೆಕಟ್ಟೆಗಳಲ್ಲಿ ನೀರಿನ ಮಟ್ಟ ದಿನ ಕಳೆದಂತೆ ಬಾರಿ ಕುಸಿತವಾಗುತ್ತಿರುವುದು ಕಂಡುಬರುತ್ತಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೦ ಕೂ ಹೆಚ್ಚು ವಿವಿಧ ಗ್ರಾಮಗಳಲ್ಲಿರುವ ವಿವಿಧ ಹೆಸರಿನ ಕೆರೆಗಳು ನೀರಿನ ಕುಸಿತದಿಂದಾಗಿ ಒಣಗುವ ಹಂತದಲ್ಲಿವೆ. ಇದರಿಂದಾಗಿ ಈ ವ್ಯಾಪ್ತಿಯಲ್ಲಿರುವ ಅನೇಕ ರೈತರು ಹೈನುಗಾರಿಕೆ ಉದ್ದೇಶದಿಂದ ಹೆಚ್ಚು ಹಸುಗಳನ್ನು ಸಾಕಿರುತ್ತಾರೆ, ಆದರೆ ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದಾಗಿ ಸಮಸ್ಯೆಗಳು ಈಗಾಗಲೇ ಉದ್ಭವವಾಗುತ್ತಿದೆ.

ಕುಶಾಲನಗರದ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ೪೫ ವರ್ಷಗಳಿಂದಲೂ ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮುಂಗಾರು ಬೆಳೆಗೆ ನೀರು ಒದಗಿಸುವ ಹಾರಂಗಿ ಅಣೆಕಟ್ಟೆಯಲ್ಲಿಯೂ ದಿನ ಕಳೆದಂತೆ ನೀರಿನ ಮಟ್ಟದಲ್ಲಿ ಕುಸಿತ ಕಂಡುಬರುತ್ತದೆ, ಆದರೆ ಹಾರಂಗಿ ನೀರಾವರಿ ಇಲಾಖೆಯ ವತಿಯಿಂದ ಬೇಸಿಗೆ ಸಂದರ್ಭ ಈ ವ್ಯಾಪ್ತಿಯ ರೈತರ ಬೇಡಿಕೆಯ ಅನುಗುಣವಾಗಿ ಮುಖ್ಯ ನಾಲೆಯಲ್ಲಿ ಕಡಿಮೆ ಪ್ರಮಾಣದ ನೀರನ್ನು ಹರಿಸಲಾಗುತ್ತಿತು, ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಸಂಗ್ರಹದಿAದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿತು, ಜೊತೆಯಲ್ಲಿ ರೈತರ ಕೊಳವೆ ಬಾವಿಯ ಅಂತರ್ಜಲದ ಮಟ್ಟವು ಸಹ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿ ಮಳೆಗಾಲ ಆರಂಭವಾಗುವವರೆಗೆ ಅನುಕೂಲವಾಗುತ್ತಿತ್ತು.

ಆದರೆ ಈ ಬಾರಿ ಸರಕಾರ ಹಾರಂಗಿ ಮುಖ್ಯ ನಾಲೆಯ ಸಂಪೂರ್ಣ ದುರಸ್ತಿಗೆ ಅನುದಾನವನ್ನು ನೀಡಿದ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದಲ್ಲಿ ನಾಲೆಯಲ್ಲಿ ಸೋರಿಕೆಯ ನೀರು ಸಹ ಹರಿಯದಂತೆ ಮಾಡಿ ಕಾಮಗಾರಿಯನ್ನು ಆರಂಭ ಮಾಡಿರುತ್ತಾರೆ. ಇದರಿಂದಾಗಿ ಈ ವ್ಯಾಪ್ತಿಯ ಅಂತರ್ಜಲ ಕುಸಿತದಿಂದಾಗಿ ಕೆರೆಕಟ್ಟೆಗಳಲ್ಲಿ ನೀರಿನ ಮಟ್ಟ ಬಾರಿ ಕುಸಿತಗೊಂಡಿದೆ.

ಕೂಡುಮAಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಾರಂಗಿ ಅಣೆಕಟ್ಟೆಯ ವ್ಯಾಪ್ತಿಯ ಕೆರೆಗಳು ಹಾರಂಗಿಗೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಸ್ವಲ್ಪ ಪ್ರಮಾಣದಲ್ಲಿರುವುದರಿಂದಾಗಿ ಅಲ್ಲಿಂದ ಕೆರೆ ಕಟ್ಟೆಗಳಲ್ಲಿ ನೀರು ಪೈಪ್‌ಗಳ ಮೂಲಕ ಹರಿಸಿ ತುಂಬುವ ವ್ಯವಸ್ಥೆಯನ್ನು ಸಂಬAಧಿಸಿದ ಇಲಾಖೆಯವರು ಮಾಡಬೇಕೆಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಸೇರಿದಂತೆ ರೈತರ ಒತ್ತಾಯವಾಗಿದೆ.