೭.೫ ಲಕ್ಷ ಮನೆಗಳಿಗೆ ಕುಡಿಯುವ ನೀರು - ಘನ ತ್ಯಾಜ್ಯ ಸಂಸ್ಕರಣೆಗೆ ಒತ್ತು

ನಗರ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಮೃತ್ ೨.೦ ಕೇಂದ್ರ ಪುರಸ್ಕೃತ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಲ್ಲಿ ರಾಜ್ಯದ ಪಾಲು ರೂ.೪,೬೧೫ ಕೋಟಿಯಾಗಿದೆ. ಕಳೆದ ವರ್ಷ ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರೂ.೩೨೦ ಕೋಟಿ ಅನುದಾನ ಒದಗಿಸಿದ್ದು, ಈ ವರ್ಷ ರೂ. ೨೦೦ ಕೋಟಿ ಒದಗಿಸಿ, ೭.೫ ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದೇವೆ.

ಕೇAದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ೨.೦ ಅಡಿಯಲ್ಲಿ ದ್ರವ ಹಾಗೂ ಘನ ತ್ಯಾಜ್ಯ ಸಂಸ್ಕರಣೆಗೆ ಕೇಂದ್ರ ಸರ್ಕಾರದ ಪಾಲು ರೂ. ೨,೧೮೫ ಕೋಟಿ ಒಳಗೊಂಡAತೆ ಒಟ್ಟು ರೂ. ೫,೦೭೨ ಕೋಟಿ ವೆಚ್ಚ ಮಾಡಲಾಗುತ್ತಿದೆ.ಬಜೆಟ್ ವಿರೋಧಿಸಿ ವಿಪಕ್ಷ ಬಿಜೆಪಿ ಶಾಸಕರು ಬಹಿಷ್ಕರಿಸಿದರು. ಬಜೆಟ್ ಮಂಡನೆ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು “ಏನಿಲ್ಲಾ ಏನಿಲ್ಲಾ.. ಬುರುಡೆ ಬುರುಡೆ” ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ನಂತರ ಗಾಂಧಿ ಪ್ರತಿಮೆ ಎದುರು ಬಿ.ಜೆ.ಪಿ ಹಾಗೂ ಜೆ.ಡಿಎಸ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಅಲ್ಪಸಂಖ್ಯಾತರ ಕಲ್ಯಾಣ

ಡಿ ೫೦ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧಾರ.

ಡಿ ೧೦೦ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ನಿರ್ಧಾರ.

ಡಿ ೧೦೦ ಹೊಸ ಮೌಲಾನಾ ಆಜಾದ್ ಶಾಲೆಗಳನ್ನು ತೆರೆಯಲಾಗುವುದು.

ಡಿ ಸ್ವಂತ ಕಟ್ಟಡವನ್ನು ಹೊಂದಿರುವ ೨೫ ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಾರಂಭ.

ಡಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ರೂ. ೨೦೦ ಕೋಟಿ ಅನುದಾನ.

ಡಿ ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಲು ಅನುದಾನ.

ಡಿ ಸಿಖ್ ಲಿಗಾರ್ ಸಮುದಾಯದವರ ಸಬಲೀಕರಣಕ್ಕಾಗಿ ರೂ. ೨ ಕೋಟಿ ಅನುದಾನ.

ಡಿ ಬೀದರ್‌ನಲ್ಲಿರುವ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗೆ ರೂ. ೧ ಕೋಟಿ ಅನುದಾನ.

ಡಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ೨೦೨೪-೨೫ನೇ ವರ್ಷದಲ್ಲಿ ಒಟ್ಟಾರೆಯಾಗಿ ರೂ. ೩೯೩ ಕೋಟಿ ವೆಚ್ಚದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ.

ಬಿಯರ್ ಪ್ರಿಯರಿಗೆ ಸಂಕಟ

ಈ ಬಾರಿಯ ಬಜೆಟ್ ಮದ್ಯ ಪ್ರಿಯರಿಗೆ ಮತ್ತಷ್ಟು ಸಂಕಟ ತಂದೊದಗಿದೆ. ರಾಜ್ಯ ಸರಕಾರ ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಬಳಿಕವೇ ಬಿಯರ್‌ಗೆ ದರ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಬಿಯರ್ ದರವನ್ನು ಹೆಚ್ಚಿಸಲು ರಾಜ್ಯ ಸರಕಾರ ಚಿಂತಿಸಿದೆ. ನೆರೆ ರಾಜ್ಯಗಳ ಬಿಯರ್ ಬೆಲೆಗೆ ಅನುಗುಣವಾಗಿ ದರವನ್ನು ಪರಿಷ್ಕರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

೨,೦೦೦ ಶಾಲೆಗಳು ದ್ವಿಭಾಷಾ ಶಾಲೆಗಳಾಗಿ ಪರಿವರ್ತನೆ

ಶಾಲೆಗಳ ಮೂಲಸೌಲಭ್ಯಗಳ ಅಭಿವೃದ್ಧಿಯೊಂದಿಗೆ ಮಕ್ಕಳ ಕಲಿಕಾ ಮಟ್ಟದಲ್ಲಿಯೂ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯದಲ್ಲಿನ ೨,೦೦೦ ಸರಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಶಾಲೆಗಳಾಗಿ(ಕನ್ನಡ ಹಾಗೂ ಇಂಗ್ಲಿಷ್) ಪರಿವರ್ತಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಸರಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಕಯಂತ್ರ ಲ್ಯಾಬ್‌ಗಳ ನಿರ್ಮಾಣಕ್ಕಾಗಿ ರೂ.೫೦ ಕೋಟಿ ಕಲ್ಪಿಸಲಾಗುವುದು. ೬ ಹಾಗೂ ೭ನೇ ತರಗತಿಯಲ್ಲಿನ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಕಲಿಕಾ ಉತ್ತೇಜನಕ್ಕಾಗಿ ಮರುಸಿಂಚನಾ ಯೋಜನೆ ಅಡಿ ರೂ.೧೦ ಕೋಟಿ ವೆಚ್ಚ ಮೀಸಲಿಡಲಾಗುವುದು.