ಮಡಿಕೇರಿ, ಫೆ. ೧೬: ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೧೯ರ ಸೋಮವಾರದಿಂದ ಆರಂಭ ಗೊಳ್ಳಲಿದ್ದು, ತಾ. ೨೯ರ ತನಕ ಜರುಗಲಿದೆ.

ತಾ. ೧೯ರಂದು ಬೆಳಿಗ್ಗೆ ೬ ಗಂಟೆಗೆ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರಿಂದ ೧೨ ತಳಿಯತಕ್ಕಿ ಬೊಳ್‌ಚ ದುಡಿಕೊಟ್ಟ್ಪಾಟ್ ನೊಂದಿಗೆ ಹಬ್ಬಕ್ಕೆ ಚಾಲನೆ ಕೊಡುವ ಕಾರ್ಯಕ್ರಮ, ೬.೩೦ರಿಂದ ಊರಿನ ಪರವಾಗಿ ಶತರುದ್ರಾಭಿಷೇಕ, ಪ್ರಸಾದ ವಿತರಣೆ ಹಾಗೂ ಅದೇ ದಿನ ರಾತ್ರಿ ೮ ಗಂಟೆಗೆ ಆರಿದ್ರ ನಕ್ಷತ್ರದ ಶುಭ ಮುಹೂರ್ತದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಈ ಬಾರಿಯ ವಾರ್ಷಿಕ ಉತ್ಸವ ಆರಂಭವಾಗಲಿದೆ.

ತಾ.೨೦ರಿAದ ಎಲ್ಲಾ ದಿನಗಳಲ್ಲೂ ವಿವಿಧ ಪೂಜಾ ಕೈಂಕರ್ಯಗಳು, ನಿತ್ಯಪೂಜೆ ಜರುಗಲಿದೆ. ಉತ್ಸವದ ಅವಧಿಯಲ್ಲಿ ನಿಗದಿತ ದಿನಗಳಲ್ಲಿ ಇರುಬಳಕು, ತುಲಾಭಾರ ತೂಚಂಬಲಿ, ಉತ್ಸವ ಮೂರ್ತಿ ದರ್ಶನದಂತಹ ಕೈಂಕರ್ಯಗಳು ಜರುಗಲಿವೆ.

ತಾ.೨೮ರಂದು ಬೆಳಿಗ್ಗೆ ೫ ಗಂಟೆಗೆ ಇರುಬಳಕು, ಹರಕೆಬಳಕಿನ ಪ್ರಸಾದ ವಿತರಣೆ, ೧೧ ಗಂಟೆಗೆ ನಿತ್ಯಪೂಜೆ, ತುಲಾಭಾರ, ಸಂಜೆ ೫ ಗಂಟೆಗೆ ನೆರಪು, ರಾತ್ರಿ ೮ಕ್ಕೆ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ, ಪ್ರಸಾದ ವಿತರಣೆಯೊಂದಿಗೆ ಊಟದ ವ್ಯವಸ್ಥೆಯಿದೆ.

ತಾ.೨೯ರಂದು ಬೆಳಿಗ್ಗೆ ೧೦ರಿಂದ ನಿತ್ಯಪೂಜೆ, ತುಲಾಭಾರ, ಅಪರಾಹ್ನ ೩ಕ್ಕೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಂಜೆ ೫ಕ್ಕೆ ಉತ್ಸವ ಮೂರ್ತಿ ದರ್ಶನ, ದೇವರ ಅವಭೃತ ಸ್ನಾನ, ರಾತ್ರಿ ೮.೩೦ಕ್ಕೆ ಉತ್ಸವಮೂರ್ತಿ ಯನ್ನು ಊರಿನ ಪ್ರತೀ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ತಳಿಯತಕ್ಕಿ ಬೊಳಕ್ ಸಹಿತವಾಗಿ ಸ್ವಾಗತಿಸುವುದು, ಬಳಿಕ ಉತ್ಸವಮೂರ್ತಿ ದರ್ಶನ, ವಸಂತ ಪೂಜೆ ಕೈಂಕರ್ಯ ಜರುಗಲಿದೆ. ಇದೇ ದಿನ ಸಂಜೆ ೬ರಿಂದ ೮.೩೦ರ ತನಕ ಶ್ರೀನಿವಾಸ್ ತಂಡದಿAದ ಭಕ್ತಿಗೀತೆ ಕಾರ್ಯಕ್ರಮವಿದೆ.

ಮಾ.೧ರಂದು ಕೊಡಿಮರ ಇಳಿಯುವ ಮೂಲಕ ಈ ವರ್ಷದ ವಾರ್ಷಿಕ ಉತ್ಸವ ಸಂಪನ್ನಗೊಳ್ಳಲಿದೆ ಎಂದು ತಕ್ಕಮುಖ್ಯಸ್ಥರು, ಆಡಳಿತ ಮಂಡಳಿಯವರು ತಿಳಿಸಿದ್ದಾರೆ.