ಅಮ್ಮತ್ತಿ, ಫೆ. ೧೬: ಜೆಸಿಬಿಯಲ್ಲಿ ಮಣ್ಣು ಕೆಲಸ ನಿರ್ವಹಿಸುತಿದ್ದ ಸಂದರ್ಭ ಜೆಸಿಬಿ ಯಂತ್ರಕ್ಕೆ ಸಿಲುಕಿ ಗಾಯಗೊಂಡು ನರಳುತಿದ್ದ ನಾಗರ ಹಾವನ್ನು ಅಮ್ಮತ್ತಿಯ ಸ್ನೇಕ್ ರೆಸ್ಕೂö್ಯ ತಂಡದವರು ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ.

ಸಿದ್ದಾಪುರ ಸಮೀಪದ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಸಿಬಿ ಯಂತ್ರದಿAದ ಮಣ್ಣು ತೆಗೆಯುತ್ತಿದ್ದ ಸಂದರ್ಭ ನಾಗರಹಾವೊಂದು ಯಂತ್ರದ ಅಡಿಯಲ್ಲಿ ಸಿಲುಕಿದೆ. ಇದನ್ನು ಗಮನಿಸಿದ ಜೆಸಿಬಿ ಚಾಲಕ ಕೂಡಲೇ ಅಮ್ಮತ್ತಿಯ ಸ್ನೇಕ್ ರೆಸ್ಕೂö್ಯ ತಂಡದ ರೋಷನ್ ಹಾಗೂ ರಾಜೇಶ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಅಲ್ಲಿಗೆ ತೆರಳಿದ ತಂಡದವರು ಯಂತ್ರದ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡು ನರಳುತಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ತಂದು ಅಮ್ಮತ್ತಿಯ ಪಶು ವೈದ್ಯ ಆಸ್ಪತ್ರೆಯಲ್ಲಿ ವೈದ್ಯರಾದ ನವೀನ್ ಕುಮಾರ್‌ರವರಿಂದ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜೇಶ್ ನಾಗರ ಹಾವಿನ ಕೆಲವು ಕಡೆಗಳಲ್ಲಿ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ವೈದ್ಯರ ಸಲಹೆಯಂತೆ ಒಂದು ದಿನದವರೆಗೆ ನನ್ನ ಮನೆಯಲ್ಲಿರಿಸಿ ನಂತರ ಮಾಲ್ದಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗುವುದು ಎಂದಿದ್ದಾರೆ. ನಾಗರಹಾವನ್ನು ರಕ್ಷಿಸುವ ಸಂದರ್ಭ ರೆಸ್ಕೂö್ಯ ತಂಡದ ಸಜೀರ್ ಮತ್ತು ಪವಿತ್ರ ಇದ್ದರು.