ವರದಿ: ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ, ಫೆ. ೧೭ : ನಾಗರಹೊಳೆ ರಾಷ್ಟಿçÃಯ ಉದ್ಯಾನವನ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಸಂಭವಿಸುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಂಕಿ ರೇಖೆ (ಫೈಯರ್ ಲೈನ್)ಯನ್ನು ರಚಿಸಿದೆ.

ಕಾಡ್ಗಿಚ್ಚು ನಿಯಂತ್ರಣಕ್ಕೆ ನೂತನ ತಂತ್ರಜ್ಞಾನದೊAದಿಗೆ ಅರಣ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು ನಿರಂತರ ಕಣ್ಗಾವಲಿಗೆ ೪೦೦ ವಾಚರ್‌ಗಳ ನೇಮಕ ಮಾಡಲಾಗಿದೆ.

ನಾಗರಹೊಳೆ, ಕಲ್ಲಳ್ಳ, ಅಂತರಸAತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು, ವಲಯಗಳು ಸೇರಿದಂತೆ ಎಂಟು ವಲಯಗಳಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಅಗ್ನಿರೇಖೆ (ಫೈರ್ ಲೈನ್) ಗುರುತಿಸುವ ಕಾರ್ಯ ನಡೆದಿದೆ. ಮುಖ್ಯವಾಗಿ ಬೆಂಕಿ ಬೀಳುವ ಪ್ರದೇಶಗಳನ್ನು ಗುರುತಿಸಿ ಅರಣ್ಯದಿಂದ ಹಾದುಹೋಗುವ ಹೆದ್ದಾರಿ ಸೇರಿದಂತೆ ಅರಣ್ಯದೊಳಗೆ ಹಾದುಹೋಗುವ ರಸ್ತೆಗಳ ಹತ್ತು ಮೀಟರ್ ಅಗಲದಲ್ಲಿ ಕುರುಚಲು ಕಾಡು, ಒಣ ಎಲೆಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಮೂಲಕ ಅಗ್ನಿರೇಖೆಯನ್ನು ಗುರುತಿಸಲಾಗಿದೆ.

ಅರಣ್ಯ ಸಿಬ್ಬಂದಿಗಳಿಗೆ ತರಬೇತಿ

ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದ ವೇಳೆ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬುದರ ಬಗ್ಗೆ ಅರಣ್ಯ ಸಿಬ್ಬಂದಿಗೆ ಅಧಿಕಾರಿಗಳಿಂದ ಹಾಗೂ ಅಗ್ನಿಶಾಮಕ ಅಧಿಕಾರಿ ಮೂಲಕ ಕಳೆದ ಎರಡು ದಿನಗಳ ಹಿಂದೆ ತರಬೇತಿ ಕಾರ್ಯಾಗಾರಗಳು ನಡೆಸಿ ಪ್ರಾಯೋಗಿಕವಾಗಿಯೂ ತರಬೇತಿ ನೀಡಲಾಗಿದೆ. ಜೊತೆಗೆ ಪ್ರತಿ ವಲಯಕ್ಕೊಂದರAತೆ ಜೀಪ್ ಮೌಂಟೆಡ್ ಟ್ಯಾಂಕರ್, ಸ್ಪೆçÃಯರ್, ಪವರ್ ಕಟ್ಟಿಂಗ್ ಯಂತ್ರ ಮತ್ತು ಕ್ಯೂಆರ್‌ಟಿ ವಾಹನ ಹೀಗೆ ಎಲ್ಲವನ್ನು ಬೇಸಿಗೆಯ ದಿನಗಳಲ್ಲಿ ಸಜ್ಜಾಗಿರಿಸಿಕೊಂಡು ನಾಗರಹೊಳೆ ಅರಣ್ಯವನ್ನು ಕಾಯಲಾಗುತ್ತಿದೆ. ಹೀಗಾಗಿ ಕಾಡ್ಗಿಚ್ಚಿನಿಂದ ಯಾವುದೇ ಅನಾಹುತಗಳು ನಡೆಯದಂತೆ ಕಣ್ಗಾವಲು ಹಾಕಲಾಗಿದೆ.

ಅಗ್ನಿರೇಖೆ ಕಾರ್ಯ ಪೂರ್ಣ

ಈ ಬಾರಿಯೂ ಅರಣ್ಯ ಇಲಾಖೆ ಕಾಡ್ಗಿಚ್ಚಿನಿಂದ ಯಾವುದೇ ಅನಾಹುತ ಸಂಭವಿಸದAತೆ ಈಗಿನಿಂದಲೇ ಕಾರ್ಯಪ್ರವೃತ್ತವಾಗಿದ್ದು, ೮೪೭.೯ ಚದರ ಕಿ.ಮೀ. ವಿಸ್ತೀರ್ಣದ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ೮ ವಲಯಗಳಲ್ಲಿ ಅಗ್ನಿರೇಖೆ ಕೆಲಸವನ್ನು ಆರಂಭಿಸಲಾಗಿದೆ. ಇದಕ್ಕಾಗಿ ನೇಮಕ ಮಾಡಲಾದ ೪೦೦ ವಾಚರ್‌ಗಳು ಜನವರಿ ೧೫ ರಿಂದ ಏಪ್ರಿಲ್ ೧೫ರವರೆಗೆ ಸೇವೆ ಸಲ್ಲಿಸಲಿದ್ದು ಬೇಸಿಗೆಯು ಇನ್ನೂ ಮುಂದುವರಿದರೆ ಕೆಲಸ ಮುಂದುವರೆಸುತ್ತಾರೆ. ಈಗಾಗಲೇ ಬೆಂಕಿ ರೇಖೆಗಳ ಕಾರ್ಯ ಮುಗಿದಿದ್ದು ಸುಮಾರು ೨೫೩೯ ಕಿಲೋ ಮೀಟರ್ ಅಗ್ನಿರೇಖೆ ನಿರ್ಮಿಸಿದ್ದು, ಸಾಧನ ಸಲಕರಣೆಗಳ ಖರೀದಿ ಇತರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಬೆಂಕಿ ಆಕಸ್ಮಿಕ ತಡೆಯಲು ಸನ್ನದ್ಧರಾಗಿದ್ದಾರೆ.

ವಾಚ್ ಟವರ್ ಡ್ರೋನ್, ಕ್ಯಾಮರಾ ಕಣ್ಗಾವಲು

ಈ ಹಿಂದೆ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಆವರಿಸಿ ಅರಣ್ಯಗಳು ಬೆಂಕಿಗಾಹುತಿಯಾಗಿದ್ದವು. ಅಂತಹ ಘಟನೆಗಳು ಮರುಕಳಿಸದಂತೆ ಅತೀ ಸೂಕ್ಷö್ಮ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲ್ಲಿ ಕ್ಯಾಮರಾ ಹಾಗೂ ಡ್ರೋನ್‌ಗಳ ಬಳಕೆ ಮಾಡಲಾಗುತ್ತಿದೆ. ಡ್ರೋನ್ ಹಾಗೂ ಕ್ಯಾಮರಾಗಳು ಅರಣ್ಯ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಸಂದೇಶವನ್ನು ರವಾನಿಸಲಿದ್ದು ತಕ್ಷಣವೇ ಕಾರ್ಯಪ್ರವೃತ್ತರಾಗಲು ಅನುಕೂಲವಾಗುವಂತೆ ನೂತನ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ವಾಚ್ ಟವರ್‌ಗಳ ಮೂಲಕ ಸಿಬ್ಬಂದಿಗಳು ಹಗಲಿರುಳು ಕಣ್ಣಿಟ್ಟಿರುತ್ತಾರೆ.

ಬೇಸಿಗೆ ತಿಂಗಳು ಮುಗಿಯುವವರೆಗೂ ಅಗ್ನಿಶಾಮಕ ವಾಹನ ನಾಗರಹೊಳೆ ಮೀಸಲು ಅರಣ್ಯದೊಳಗೆ ಕಾಡ್ಗಿಚ್ಚು

(ಮೊದಲ ಪುಟದಿಂದ) ಹರಡದಂತೆ ಸಿದ್ಧರಾಗಿರುತಿತ್ತು. ಆದರೆ ಈ ಬಾರಿ ಅಗ್ನಿ ಶಾಮಕ ಇಲಾಖೆಯಲ್ಲಿ ಅಗ್ನಿಶಾಮಕ ವಾಹನದ ಕೊರತೆ ಇರುವುದರಿಂದ ಇನ್ನೂ ಅಗ್ನಿಶಾಮಕ ವಾಹನ ಒದಗಿಸಲು ಸಾಧ್ಯವಾಗಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಕಾರ್ಯ ಪ್ರವೃತ್ತರಾಗಲಿದೆ.

ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು

ಬಿಸಿಲ ಬೇಗೆಯ ನಡುವೆ ಸಿಬ್ಬಂದಿಗಳು ಅರಣ್ಯದ ರಕ್ಷಣಾ ಕಾರ್ಯದ ನಡುವೆ ಅರಣ್ಯದೊಳಗಿನ ವನ್ಯಜೀವಿಗಳಿಗೆ ನೀರಿನ ಕೊರತೆಯಾಗದಂತೆ ಬತ್ತಿರುವ ಕೆರೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸುವ ಕಾರ್ಯದಲ್ಲಿ ಅರಣ್ಯ ಸಿಬ್ಬಂದಿಗಳು ನಿರತರಾಗಿದ್ದಾರೆ.