ಗೋಣಿಕೊಪ್ಪಲು, ಫೆ.೧೬: ಕಳೆದ ನಾಲ್ಕು ತಿಂಗಳಿನಿAದ ಹಲವು ನೆಪಗಳನ್ನು ನೀಡುತ್ತ ನಿಗದಿತ ಸಮಯದಲ್ಲಿ ನಡೆಯಬೇಕಾದ ಚುನಾವಣೆಯನ್ನು ಮುಂದೂಡುತ್ತ ಬಂದಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಈಗಾಗಲೇ ನಿಗದಿಪಡಿಸಿರುವ ಗೋಣಿಕೊಪ್ಪಲು, ಫೆ.೧೬: ಕಳೆದ ನಾಲ್ಕು ತಿಂಗಳಿನಿAದ ಹಲವು ನೆಪಗಳನ್ನು ನೀಡುತ್ತ ನಿಗದಿತ ಸಮಯದಲ್ಲಿ ನಡೆಯಬೇಕಾದ ಚುನಾವಣೆಯನ್ನು ಮುಂದೂಡುತ್ತ ಬಂದಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಈಗಾಗಲೇ ನಿಗದಿಪಡಿಸಿರುವ ರಿಟರ್ನಿಂಗ್ ಆಫೀಸರ್ಗಳಾದ ಬಿ.ಕೆ. ವಿಜಯೇಂದ್ರ, ಚುನಾವಣಾ ದಿನಾಂಕವನ್ನು ನಿಗದಿಪಡಿಸಿ ಆದೇಶ ನೀಡಿದ್ದರು. ಆದರೆ ಅಧಿಕಾರಿಗಳು ನೀಡಿದ ದಿನಾಂಕದAದು ಚುನಾವಣೆ ನಡೆಸಬಾರದೆಂಬ ರಾಜಕೀಯ ರಿಟರ್ನಿಂಗ್ ಆಫೀಸರ್ಗಳಾದ ಬಿ.ಕೆ. ವಿಜಯೇಂದ್ರ, ಚುನಾವಣಾ ದಿನಾಂಕವನ್ನು ನಿಗದಿಪಡಿಸಿ ಆದೇಶ ನೀಡಿದ್ದರು. ಆದರೆ ಅಧಿಕಾರಿಗಳು ನೀಡಿದ ದಿನಾಂಕದAದು ಚುನಾವಣೆ ನಡೆಸಬಾರದೆಂಬ ರಾಜಕೀಯ (ಮೊದಲ ಪುಟದಿಂದ) ಸೂಚನಾ ಫಲಕದಲ್ಲಿ ಚುನಾವಣೆಗೆ ಸಂಬAಧಿಸಿದ ನೋಟೀಸನ್ನು ಪ್ರಕಟಿಸುವಲ್ಲಿ ಯಶಸ್ವಿಯಾದರು.
ಬಳಿಕ ಸ್ಥಳೀಯ ಕೊಡವ ಸಮಾಜದಲ್ಲಿ ಸಭೆ ಸೇರಿದ ಸಂಘದ ನೂರಾರು ಸದಸ್ಯರು ಈ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಸಂಘದ ಸದಸ್ಯರಾದ ಅಜ್ಜಿಕುಟ್ಟಿರ ಪ್ರವೀಣ್ ಮಾತನಾಡಿ ಕಳೆದ ನಾಲ್ಕು ತಿಂಗಳಿನಿAದ ಸಂಘಕ್ಕೆ ಚುನಾವಣೆ ನಡೆಯದೆ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಗೊಂದಲ ನಿವಾರಣೆಯಾಗಿದ್ದು ಸಂಬAಧಿಸಿದ ಅಧಿಕಾರಿಗಳು ಚುನಾವಣಾ ದಿನಾಂಕವನ್ನು ನಿಗದಿಪಡಿಸಿ ಆದೇಶ ಮಾಡಿದ್ದಾರೆ. ಮಾರ್ಚ್ ೧ ರಂದು ಚುನಾವಣೆ ನಡೆಯಲಿದೆ. ಇಂದಿನಿAದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ತಡವಾದರೂ ಸಂಘದ ಚುನಾವಣೆ ನಿಗಧಿಯಾಗಿರುವುದು ಸ್ವಾಗತಾರ್ಹ. ಸಂಘದ ಮೇಲೆ ಕೆಲವು ವ್ಯಕ್ತಿಗಳು ಆಪಾದನೆಗಳನ್ನು ಮಾಡುತ್ತ ಸಂಘದ ಚಟುವಟಿಕೆಗೆ ಹಿನ್ನಡೆ ತರುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ.
ಇದೀಗ ಇವರ ಆರೋಪಗಳಿಗೆ ಹಿನ್ನಡೆಯಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಸಂಘದಲ್ಲಿ ಸದಸ್ಯರ ಪಾಲುಬಂಡವಾಳದಿAದ ಉತ್ತಮ ಲಾಭಾಂಶದಲ್ಲಿ ಮುಂದುವರೆಯುತ್ತಿದೆ. ೨೭೦೦ ಸದಸ್ಯರಿಗೆ ಯಾವುದೇ ಕೊರತೆಯು ಇಲ್ಲಿ ತನಕ ಆಗಿರುವುದಿಲ್ಲ, ಉತ್ತಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಂಘವು ಮುನ್ನಡೆಯುತ್ತಿದೆ. ಕೆಲವರು ವೈಯಕ್ತಿಕ ವಿಚಾರವನ್ನು ಸಂಘದ ವಿಚಾರಕ್ಕೆ ತಾಳೆ ಹಾಕುವ ಮೂಲಕ ಚುನಾವಣೆಯನ್ನು ಮುಂದೂಡುತ್ತ ಬಂದಿದ್ದಾರೆ. ಅಲ್ಲದೆ ಕ್ಷೇತ್ರದ ಶಾಸಕರಿಗೆ ಸಂಘದ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತ ಬಂದಿದ್ದಾರೆ.
ಪರೋಕ್ಷವಾಗಿ ಒತ್ತಡ ತರುವ ಕೆಲಸವು ನಡೆದಿದೆ. ಈ ಚುನಾವಣೆಯನ್ನು ಮುಂದೂಡುವುದು ಇದರ ಮೂಲ ಉದ್ದೇಶವಾಗಿತ್ತು. ಇದೀಗ ಚುನಾವಣಾ ಅಧಿಕಾರಿಯು ದಿನಾಂಕವನ್ನು ನಿಗಧಿಪಡಿಸಿ ಆದೇಶ ಮಾಡಿದ್ದಾರೆ. ನಿಗದಿಪಡಿಸಿದ ಚುನಾವಣೆಯನ್ನು ರದ್ದುಪಡಿಸುವ ವಿಚಾರದಲ್ಲಿ ಕಾಣದ ಕೈಗಳು ಒತ್ತಡ ತಂತ್ರವನ್ನು ಅಧಿಕಾರಿಗಳ ಮೇಲೆ ಹೇರುವ ಪ್ರಯತ್ನ ನಡೆದಿದೆ. ಬ್ಯಾಂಕಿನ ಸದಸ್ಯರೆಲ್ಲರು ಒಂದಾಗಿ ವಿಚಾರಣೆ ಮಾಡಿದಾಗ ಇದು ಬೆಳಕಿಗೆ ಬಂದಿದೆ. ನಾವುಗಳು ಬ್ಯಾಂಕಿನ ಸಿಇಓ ಮೂಲಕ ನಿಗದಿಪಡಿಸಿದ ದಿನಾಂಕದಲ್ಲಿ ಚುನಾವಣೆ ನಡೆಸುವಂತೆ ಸಂಬAಧಿಸಿದ ಸುತ್ತೋಲೆಗಳನ್ನು ಸೂಚನಾ ಫಲಕದಲ್ಲಿ ಅಳವಡಿಸಿದ್ದೇವೆ ಎಂದರು.
ಬ್ಯಾAಕಿನ ಮಾಜಿ ಅಧ್ಯಕ್ಷ ಕೇಚ್ಚೆೆಟ್ಟಿರ ಅರುಣ್ ಮಾತನಾಡಿ ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳು ಸಂಘದಲ್ಲಿದ್ದ ಕಾರ್ಯನಿರ್ವಾಣಾಧಿಕಾರಿಗಳನ್ನು ಯಾವುದೇ ನೋಟೀಸು ನೀಡದೆ ಅಮಾನತುಗೊಳಿಸಿರುವುದು ಸರಿಯಲ್ಲ. ಇಂತಹ ಕ್ರಮಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಕೂಡಲೇ ಅಧಿಕಾರಿಯ ಅಮಾನತು ರದ್ದುಗೊಳಿಸಿ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಬ್ಯಾಂಕಿನ ಆವರಣದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಚೇಂದಿರ ರಘು ತಿಮ್ಮಯ್ಯ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು. -ಹೆಚ್.ಕೆ.ಜಗದೀಶ್