ಶನಿವಾರಸಂತೆ, ಫೆ. ೧೬: ಶಿಕ್ಷಕರ ಪರಿಶ್ರಮ, ಸಹಕಾರ ಮನೋಭಾವ ಹಾಗೂ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರಹೊಮ್ಮಿ ವಾರ್ಷಿಕೋತ್ಸವದಲ್ಲಿ ಅನಾರಣ ಗೊಳ್ಳುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಬ್ರೆöÊಟ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆದ ೬ನೇ ಬ್ರೆöÊಟ್ ಸಂಕಲ್ಪ ಫೆಸ್ಟ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಸಾಹಿತಿ ಶ.ಗ. ನಯನತಾರಾ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ರೂವಾರಿ ಗಳಾಗಿದ್ದು, ಶಿಕ್ಷಣ ಸಂಸ್ಥೆಗಳು ಜ್ಞಾನ ದೇಗುಲಗಳಾಗಿವೆ. ಮಕ್ಕಳಿಗೆ ಶಾಲೆಯಲ್ಲಿ ಕಲಿಸುವ ಶಿಕ್ಷಣದ ಜತೆಗೆ ಮನೆಯಲ್ಲಿ ಪೋಷಕರು ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣವಾಗಿದ್ದು, ಮಕ್ಕಳಲ್ಲಿ ಮೊದಲಿಗೆ ಮಾನವೀಯ ಮೌಲ್ಯಗಳ ಅರಿವು ಮೂಡಿಸಬೇಕಿದೆ ಎಂದರು. ಮುಖ್ಯ ಭಾಷಣಕಾರ ಚನ್ನರಾಯ ಪಟ್ಟಣದ ಫೋಕಸ್ ಕಾಲೇಜಿನ ಪ್ರಾಂಶುಪಾಲ ಮೋಹನ್ ಬಿ. ಪುಟ್ಟೇಗೌಡ ಮಾತನಾಡಿ, ಇಂದು ಮಕ್ಕಳ ಬಯಕೆಗಳು ಸುಲಭವಾಗಿ ಈಡೇರುತ್ತಿರುವುದರಿಂದ ಶಿಕ್ಷಣ ಹಿಂದೆ ಉಳಿದಿದೆ. ಶಿಕ್ಷಣ ಕಲಿಸುವಲ್ಲಿ ತಾಯಂದಿರ ಪಾತ್ರವೇ ಮುಖ್ಯವಾಗಿದ್ದು ಮಕ್ಕಳ ಕನಸನ್ನು ಸಾಕಾರಗೊಳಿಸಲು ಮೊಬೈಲ್ ಮತ್ತು ಟಿ.ವಿ.ಯಿಂದ ದೂರವಿಡಬೇಕು. ಶಾಲೆಯ ತಪ್ಪುಗಳನ್ನು ಮನೆಯಲ್ಲಿ ಎತ್ತಿ ತೋರಿಸಬಾರದು. ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಪೋಷಕರ ಸಹಕಾರವೇ ವಿದ್ಯಾಸಂಸ್ಥೆಯ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾಸAಸ್ಥೆಯ ಕಾರ್ಯದರ್ಶಿ ಹೇಮಾ ಪರಮೇಶ್ ಮಾತನಾಡಿ, ಪರಿಶ್ರಮದ ಹಿಂದೆ ವಿದ್ಯಾರ್ಥಿಗಳ ಪ್ರಗತಿ ಇದೆ ಎಂದರು. ವೃತ್ತ ನಿರೀಕ್ಷಕ ಮುನಿಯಪ್ಪ, ಹಾಸನ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಪ್ರಾಧ್ಯಾಪಕ ತೇಜಮೂರ್ತಿ, ಕ್ರಿಕೆಟ್ ಕ್ರೀಡಾಪಟು ಹೆಚ್.ಎಸ್. ಹರೀಶ್ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವಿಶ್ವನಾಥ್ ಮಾತನಾಡಿದರು. ಪಠ್ಯ-ಪಠ್ಯೇತರ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಾಗೂ ಕರಾಟೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ನೃತ್ಯ, ನಾಟಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಜೆ. ಪರಮೇಶ್ ವಹಿಸಿ ಮಾತನಾಡಿದರು. ನಿರ್ದೇಶಕಿ ಸೀತಮ್ಮಾ, ಮುಖ್ಯ ಶಿಕ್ಷಕಿ ಚೈತ್ರಾ, ಶಿಕ್ಷಕರು ಉಪಸ್ಥಿತರಿದ್ದರು. ಗಾನಶ್ರೀ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಟಿ.ಎನ್. ಚೈತ್ರಾ ಹಾಗೂ ಶಿಕ್ಷಕಿ ಪವಿತ್ರಾ ಪ್ರಾತ್ಯಕ್ಷಿಕೆ ಮೂಲಕ ವಾರ್ಷಿಕ ವರದಿಯನ್ನು ಮಂಡಿಸಿದರು. ಶಿಕ್ಷಕಿಯರಾದ ಯೋಗೀಶ್ವರಿ ಹೇಮಂತ್ ಮತ್ತು ರೂಪಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.