ಮಡಿಕೇರಿ, ಫೆ. ೧೬: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಒಂದಷ್ಟು ಯೋಜನೆಗಳನ್ನು ಪ್ರಕಟಿಸಲಾಗಿದೆ. ರಾಜ್ಯವ್ಯಾಪಿಯಾಗಿ ಪ್ರಕಟಿತ ಕೆಲವೊಂದು ಅಂಶಗಳ ಹೊರತಾಗಿ ಕೊಡಗು ಜಿಲ್ಲೆಗೆ ಪ್ರತ್ಯೇಕವಾಗಿ ಒಂದಷ್ಟು ಕೊಡುಗೆಗಳ ಪ್ರಸ್ತಾಪ ಈ ಬಾರಿಯ ಬಜೆಟ್‌ನ ವಿಶೇಷತೆಯಾಗಿ ಕಂಡುಬರುತ್ತಿದೆ.

ಏನೇನು...?

*ವೀರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು ರೂ. ೧೨ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.

*ಮಡಿಕೇರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ - (ಉಡುಪಿ, ಚಿಕ್ಕಬಳ್ಳಾಪುರ, ನೆಲಮಂಗಲ, ಮಧುಗಿರಿ, ಹುಣಸೂರಿನೊಂದಿಗೆ ಮಡಿಕೇರಿ ಸೇರಿದಂತೆ ಅಂದಾಜು ರೂ. ೩೬ ಕೋಟಿಗಳ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣದ ಪ್ರಸ್ತಾಪವಿದೆ)

*ಪೊನ್ನಂಪೇಟೆಯಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಕ್ರೀಡಾವಸತಿ ನಿಲಯ ಕಟ್ಟಡ ನಿರ್ಮಿಸಲಾಗುವುದು ಎಂದು ಪ್ರಕಟಿಸಲಾಗಿದೆ.

*ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಕರ್ನಾಟಕದ ಪ್ರಾದೇಶಿಕ ಭಾಷೆಗಳಾಗಿದ್ದು, ಅವುಗಳ ಅಭಿವೃದ್ಧಿಗಾಗಿ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಪ್ರೋತ್ಸಾಹಿಸಲಾಗುವುದು ಎಂಬುದಾಗಿ ಘೋಷಿಸಲಾಗಿದೆ. (ಇದರಲ್ಲಿ ಕೊಡವ ಭಾಷೆ ಜಿಲ್ಲೆಗೆ ಸಂಬAಧಿಸಿದ್ದಾಗಿದೆ)

*ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಮತ್ತು ವೈರಲ್ ಸೋಂಕುಗಳನ್ನು ಪತ್ತೆಹಚ್ಚಲು ಗಿiಡಿಚಿಟ ಖeseಚಿಡಿಛಿh & ಆiಚಿgಟಿosಣiಛಿ ಐಚಿboಡಿಚಿಣoಡಿಥಿ (ಗಿಖಆಐ) ಸ್ಥಾಪನೆ ಮಾಡಲಾಗುವುದು ಎಂಬ ವಿಚಾರ ಬಜೆಟ್‌ನಲ್ಲಿ ಪ್ರಕಟವಾಗಿದೆ.

*ವಿಜ್ಞಾನ ಕೇಂದ್ರ / ತಾರಾಲಯ: ಈಗಾಗಲೇ ಅನುಮೋದನೆಗೊಂಡಿರುವ ಚಾಮರಾಜನಗರ, ಹಾಸನ, ಮಡಿಕೇರಿ, ಶಿರಸಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಧಾರವಾಡದಲ್ಲಿ ವಿಜ್ಞಾನ ಕೇಂದ್ರ/ ತಾರಾಲಯ ಕಾರ್ಯಾರಂಃಗೊಳಿಸಲಾಗುವುದು ಎಂದಿದ್ದು, ಇದರಲ್ಲಿ ಮಡಿಕೇರಿಯೂ ಒಂದಾಗಿದೆ.

*ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಪ್ರಯೋಗಾಲಯ: ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಆರೋಗ್ಯ ಪ್ರಯೋಗಾಲಯ (IPಊಐ) ನ ಉಲ್ಲೇಖವಿದೆ. ಪ್ರಸಕ್ತ ಸಾಲಿನಲ್ಲಿ ಚಿಕ್ಕಮಗಳೂರು, ವಿಜಯನಗರ, ಶಿವಮೊಗ್ಗ, ಬೆಳಗಾವಿ, ಮಂಡ್ಯ ಮತ್ತು ಹಾಸನದೊಂದಿಗೆ ಕೊಡಗು ಜಿಲ್ಲೆಯ ಹೆಸರಿದೆ.

್ಡ ವೀರಾಜಪೇಟೆಯಲ್ಲಿ ರೂ. ೧೨ ಕೋಟಿಯಲ್ಲಿ ನ್ಯಾಯಾಲಯ ಸಂಕೀರ್ಣ.

್ಡ ಮಡಿಕೇರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ.

್ಡ ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯ.

್ಡ ಕೊಡವ ಭಾಷೆಗೆ ಪ್ರೋತ್ಸಾಹ.

್ಡ ವೈದ್ಯಕೀಯ ಕಾಲೇಜಿನಲ್ಲಿ ಗಿಖಆಐ ಸ್ಥಾಪನೆ.

್ಡ ಮಡಿಕೇರಿಯಲ್ಲಿ ವಿಜ್ಞಾನ ಕೇಂದ್ರ / ತಾರಾಲಯ.

್ಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಪ್ರಯೋಗಾಲಯ.