ಹೆಬ್ಬಾಲೆ, ಫೆ. ೧೬: ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಸಂವಿದಾನ ಜಾಗೃತಿ ಜಾಥಾಕ್ಕೆ ಹೆಬ್ಬಾಲೆಯಲ್ಲಿ ಅದ್ದೂರಿ ಸ್ವಾಗತವನ್ನು ಕೋರಲಾಯಿತು.

ನಂತರ ಇಲ್ಲಿನ ಕೆನರಾ ಬ್ಯಾಂಕ್‌ನ ವೃತ್ತದಿಂದ ಪ್ರಾರಂಭವಾದ ಜಾಥಾದಲ್ಲಿ ಪೂರ್ಣಕುಂಭ ಹಿಡಿದ ಮಹಿಳೆಯರು. ಅಂಬೇಡ್ಕರ್ ಮತ್ತು ರೈತ ವೇಷ ಧರಿಸಿದ ವಿದ್ಯಾರ್ಥಿಗಳು ಚಂಡೆ ವಾದ್ಯ ಮತ್ತು ಕುರುಬ ಜನಾಂಗದ ಕುಣಿತ. ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣಕುಮಾರಿ, ಸದಸ್ಯರಾದ ಚಂದ್ರಶೇಖರ್, ಜೋಗಿ, ಪರಮೇಶ, ವಿವಿಧ ಸ್ತಿçà ಶಕ್ತಿ ಸಂಘದ ಮಹಿಳೆಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣಕುಮಾರಿ ವಹಿಸಿದ್ದರು. ಹೆಬ್ಬಾಲೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಜಾನಕಿ ಮತ್ತು ಪುಷ್ಪಾ ತಂಡ ಪ್ರಾರ್ಥಿಸಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಸ್ವಾಗತಿಸಿದರು. ನಾಡಗೀತೆಯನ್ನು ಸೆಕ್ರೇಟ್ ಹಾರ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ರಾಷ್ಟç ಗೀತೆಯನ್ನು ಎ.ಆರ್. ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹಾಡಿದರು. ಹೆಬ್ಬಾಲೆ ಪ್ರೌಢಶಾಲೆಯ ಮಕ್ಕಳು ಸಂವಿಧಾನ ಪೂರ್ವ ಪೀಠಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದರು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ದೇಶ ಭಕ್ತಿಯನ್ನು ಸಾರುವ ನೃತ್ಯವನ್ನು ಪ್ರದರ್ಶಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರದೀಪ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್. ಭಾಗ್ಯಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ, ತಾಲೂಕು ಮಟ್ಟದ ಅಧಿಕಾರಿ ಸಿದ್ದೇಗೌಡ, ವಿವಿಧ ಸಂಘಟನೆಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಶಾಲಾ ಮಕ್ಕಳು ಹಾಜರಿದ್ದರು. ಸಂವಿಧಾನದ ಮಹತ್ವ ಕುರಿತು ಉಪನ್ಯಾಸಕ ವೆಂಕಟನಾಯಕ್ ಮಾತನಾಡಿದರು. ಸಿ.ಡಿ. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ವೆಂಕಟೇಶ ವಂದಿಸಿದರು.