ಐಗೂರು, ಫೆ. ೧೬: ಹರದೂರು ಗ್ರಾಮ ಪಂಚಾಯಿತಿ ವತಿಯಿಂದ ಅಮೃತ ಗ್ರಾಮ ಯೋಜನೆ ಯಡಿಯಲ್ಲಿ ಸ್ಥಳೀಯ ಹೊಸತೋಟ ಸ.ಹಿ.ಪ್ರಾ. ಶಾಲೆಗೆ ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರನ್ನು ಕೊಡುಗೆಯಾಗಿ ನೀಡಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಮುಖ್ಯ ಶಿಕ್ಷಕಿ ಪವಿತ್ರ ಮಾತನಾಡಿದರು. ಶಾಲೆಯ ಕಟ್ಟಡದ ಮೇಲ್ಚಾವಣಿಯು ದುರಸ್ತಿ ಕಾರ್ಯ ಆಗಬೇಕಾಗಿದ್ದು, ಸರಿಪಡಿಸಿಕೊಡಲು ಪಂಚಾಯಿತಿ ಅಧ್ಯಕ್ಷೆ ಉಷಾ ಅವರಲ್ಲಿ ಮನವಿ ಮಾಡಿದ್ದರು. ಈಗಾಗಲೇ ಕ್ರೀಡಾ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆ, ಕಂಪ್ಯೂಟರ್ ಕೊಠಡಿಯನ್ನು ನಿರ್ಮಿಸಿಕೊಟ್ಟಿರುತ್ತೇವೆ.

ಅನುದಾನದ ಲಭ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷರು ಮತ್ತು ಪಿ.ಡಿ.ಓ. ಪೂರ್ಣಿಮಾ ಸಭೆಗೆ ತಿಳಿಸಿದರು.

ಉಪಾಧ್ಯಕ್ಷರಾದ ಸಲೀಂ, ಪಿ.ಡಿ.ಓ. ಪೂರ್ಣಿಮಾ, ಶಿಕ್ಷಕ ಉಮ್ಮರ್, ಶಿಕ್ಷಕಿಯರಾದ ಅಂಜಲಿಕ, ಹೇಮಾವತಿ, ಸವಿತ, ದೀಪಿಕಾ, ನಂದಿತ ಉಪಸ್ಥಿತರಿದ್ದರು.