ಮಡಿಕೇರಿ, ಫೆ. ೧೮: ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮರ ಕಡಿಯಲು ಪ್ರಸ್ತಾವನೆ ಇದ್ದು, ಆಕ್ಷೇಪಣೆ ಇದ್ದಲ್ಲಿ ಅರ್ಜಿ ಸಲ್ಲಿಸಲು ಅರಣ್ಯ ಇಲಾಖೆ ತಿಳಿಸಿದೆ.

ಶನಿವಾರಸಂತೆ ಹೋಬಳಿ, ದುಂಡಳ್ಳಿ ಗ್ರಾಮದ ಮಾರ್ಗವಾಗಿ ತೋಯಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಅಡಚಣೆಯಾಗುವ ವಿವಿಧ ಕಾಡುಜಾತಿ ೭೦ ಮರಗಳು ಹಾಗೂ ೧ ಬೀಟೆ ಮರವನ್ನು ಶಿರಹ ಗ್ರಾಮದ ಧರ್ಮಣ್ಣ ಎಂಬವರ ಮನೆಯಿಂದ ದೊಡ್ಡಬಿಳಹ ಗ್ರಾಮದ ಮುಳ್ಳುಗೇಟ್‌ತನಕ ೮೫ ವಿವಿಧ ಕಾಡುಜಾತಿಯ ಮರಗಳು ಮತ್ತು ೩ ಬೀಟೆ ಮರಗಳನ್ನು ಕ್ಯಾತೆ ಗ್ರಾಮದ ಪ್ರೇಮ್‌ಕುಮಾರ್ ಮನೆಯಿಂದ ಕೊಡ್ಲಿಪೇಟೆ ಟೌನ್ ನಿವಾಸಿ ರೇಣುಕ ಮನೆಯತನಕ ೪೫ ವಿವಿಧ ಕಾಡುಜಾತಿಯ ಮರಗಳು ಮತ್ತು ೨ ಬೀಟೆ ಮರಗಳು ಹೀಗೆ ಒಟ್ಟು ೨೦೦ ಕಾಡುಜಾತಿ ಮರಗಳು ಮತ್ತು ೬ ಬೀಟೆ ಮರಗಳನ್ನು ಕಡಿದು ಸರ್ಕಾರಿ ನಾಟಾ ಸಂಗ್ರಹಾಲಯ, ಆನೆಕಾಡುವಿಗೆ ಸಾಗಿಸಲು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ತಾ. ೨೫ ರ ಒಳಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ತಿಳಿಸಬೇಕು. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.