ಚೆಟ್ಟಳ್ಳಿ, ಫೆ. ೧೮: ಕಾಫಿ ಕುಯಿಲು ಮುಗಿಯುತ್ತಿರುವಂತೆ ಕೊಡಗಿನ ಕಾಫಿ ತೋಟಗಳಲ್ಲಿ ಕೃತಕ ಹೂಮಳೆಗೆ ಸಿದ್ಧತೆ ನಡೆಯತ್ತಿದೆ.

ಹಲವೆಡೆ ಕೆರೆತೊರೆಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಕಾಫಿ ತೋಟಗಳಿಗೆ ಹಾಯಿಸುವ ಪ್ರಯತ್ನ ಕಂಡುಬರುತ್ತಿದೆ. ಬಿಸಿಲತಾಪಕ್ಕೆ ಈಗಾಗಲೇ ಕೆಲವೆಡೆ ಕಾಫಿ ಹೂಗಳು ಅರಳಿ ಶ್ವೇತ ಸುಂದರಿಯAತೆ ಕಂಗೊಳಿಸುವ ಮೂಲಕ ಘಮ ಘಮಿಸುತ್ತಿದೆ. ರೋಬಸ್ಟಾ ಕಾಫಿಯು ಮಳೆಗೆ ಸ್ಪಂದಿಸುವ ಬೆಳೆಯಾದ್ದರಿಂದ ಸಾಮಾನ್ಯವಾಗಿ ರೋಬಸ್ಟಾ ತೋಟಗಳಲ್ಲಿ ಫೆಬ್ರವರಿ ೧೫ ರಿಂದ ಮಾರ್ಚ್ ತಿಂಗಳ ೧೫ ರ ಒಳಗೆ ಮೊಗ್ಗುಗಳು ಪ್ರೌಢಾವಸ್ಥೆಗೆ ಬರುತ್ತವೆ. ಈ ಸಮಯದಲ್ಲೇ ಮಳೆಯಾಗಬೇಕು. ಈ ಸಮಯದಲ್ಲೇ ಕೃತಕ ನೀರಾವರಿಯನ್ನು ಮಾಡುವುದರಿಂದ ಹೂವು ಅರಳುವುದು ನಂತರ ಹೂಬಿಟ್ಟ ೧೫ ರಿಂದ ೨೦ ದಿನಗಳ ಒಳಗೆ ಹಿಮ್ಮಳೆ (ಬ್ಯಾಕಿಂಗ್) ನೀಡಬೇಕು. ನೀರಾವರಿಯ ಸಮಯದಲ್ಲಿ ಗೊಬ್ಬರ ಹಾಕುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ.

ಕಳೆದ ಜನವರಿಯ ಮೊದಲ ವಾರದಲ್ಲಿ ಅಕಾಲಿಕ ಮಳೆಯಾದ ಪರಿಣಾಮ ಕಾಫಿ ಕುಯಿಲಿಗಿಂತ ಮೊದಲೇ ಶೇ. ೬೦ರಷ್ಟು ಕಾಫಿ ಹೂವು ಅರಳಿದವು. ಈಗಿನ ಬಿಸಿಲ ತಾಪಮಾನದ ಹಿನ್ನೆಲೆ ಕಾಫಿ ಕುಯಿಲು ಆಗುತಿದ್ದಂತೆ ಬೆಳೆಗಾರರು ತೋಟಗಳಿಗೆ ನೀರು ಹಾಯಿಸಲು ನೀರಾವರಿ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ ಬಾರಿ ಮಳೆ ಕಡಿಮೆ ಹಾಗೂ ಅಂತರ್ಜಲ ಕುಸಿತದ ಹಿನ್ನೆಲೆ ಈ ಬಾರಿ ಕಾಫಿ ತೋಟಗಳಿಗೆ ನೀರಾಯಿಸಲು ನೀರಿನ ಕೊರತೆ ಎದುರಾಗಲಿದ್ದೆನ್ನುತ್ತಾರೆ ಕೆಲ ಕಾಫಿ ಬೆಳೆಗಾರರು.

ಹವಾಮಾನದ ವೈಪರಿತ್ಯ, ಮುಂದಿನ ದಿನಗಳಲ್ಲಿ ನೀರಿನ ಅಭಾವ, ಕಾರ್ಮಿಕರ ಕೊರತೆ ಹಿನ್ನೆಲೆ ಕೆಲವಡೆ ತ್ವರಿತವಾಗಿ ಅವಧಿಗೂ ಮುನ್ನ ಕಾಫಿ ತೋಟಗಳಲ್ಲಿ ನೀರು ಹಾಯಿಸಲು ಬೆಳೆಗಾರರು ಮುಂದಾಗಿದ್ದಾರೆ ಎಂದು ಕಾಫಿ ಮಂಡಳಿ ಅಧಿಕಾರಿ ಡಾ. ಚಂದ್ರಶೇಖರ್ ಹೇಳಿದ್ದಾರೆ.

ಬಿಸಿಲ ತಾಪಮಾನ ಏರುತ್ತಿದ್ದು ಸ್ಪಿçಂಕಲರ್ ಮಾಡಲು ಸಿದ್ಧತೆ ನಡೆಸುತಿದ್ದೇವೆ ಎಂದು ಬೆಳೆಗಾರ ಅಮೃತ್ ಕುಮಾರ್ ತಿಳಿಸಿದ್ದಾರೆ.

- ಕರುಣ್ ಕಾಳಯ್ಯ