ಕಣಿವೆ, ಫೆ. ೧೮: ಫೆಬ್ರವರಿ ಮೂರನೇ ವಾರದಲ್ಲಿ ಸುಡುತ್ತಿರುವ ಸೂರ್ಯನ ಬಿಸಿಲ ತಾಪಕ್ಕೆ ಭೂಮಿ ಒಣಗಿ ಪತರಗುಟ್ಟುತ್ತಿದೆ.

ಜಲಚರಗಳು, ಪ್ರಾಣಿ ಪಕ್ಷಿಗಳು ಹಾಗೂ ವನ್ಯ ಪ್ರಾಣಿಗಳ ದಾಹ ನೀಗಿಸುತ್ತಿದ್ದ ಅರಣ್ಯದೊಳಗಿನ ಕೆರೆಗಳು ನೀರಿಲ್ಲದೇ ಒಣಗಲಾರಂಭಿಸಿವೆ. ಇದರಿಂದಾಗಿ ಕುಶಾಲನಗರ ತಾಲೂಕಿನ ಅತ್ಯಂತ ಪ್ರಮುಖವಾದ ಹಾಗೂ ವಿಸ್ತೃತ ವಿಸ್ತೀರ್ಣ ಹೊಂದಿರುವ ಆನೆಕಾಡು ಅರಣ್ಯದೊಳಗಿರುವ ಸರಿ ಸುಮಾರು ೨೦ ಕೆರೆಗಳ ಪೈಕಿ ಬಹುತೇಕ ಕೆರೆಗಳು ನೀರಿಲ್ಲದೇ ಖಾಲಿಯಾಗುತ್ತಿವೆ.

ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯಲ್ಲಿನ ಆನೆಕಾಡು ಅರಣ್ಯದ ಕೆರೆಯೊಂದನ್ನು ಸ್ಥಳೀಯ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು ೫ ಲಕ್ಷ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿ ವನ್ಯಪ್ರಾಣಿಗಳಿಗೆ ನೀರು ಸಂಗ್ರಹಣೆ ಮಾಡುವ ಕಾಮಗಾರಿ ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿತ್ತು.

ಆದರೆ, ಈ ಬಾರಿಯ ಆರಂಭಿಕ ಬಿಸಿಲ ಬೇಗೆಗೆ ಈ ಕೆರೆ ಬರಿದಾಗಿದ್ದು ಕೆರೆಯಲ್ಲಿನ ಜಲಚರಗಳು ಹಾಗೂ ಪಕ್ಷಿ ಸಂಕುಲಗಳಿಗೂ ನೀರಿನ ಬವಣೆ ಎದುರಾಗಿದೆ. ಕೂಡಲೇ ಅರಣ್ಯ ಇಲಾಖೆ ಟ್ಯಾಂಕರ್‌ಗಳಿAದಾದರೂ ಸರಿ ಈ ಕೆರೆಗೆ ನೀರು ತಂದು ತುಂಬಿಸುವ ಕೆಲಸವಾಗ ಬೇಕೆಂಬುದು ಪರಿಸರ ಮತ್ತು ಪ್ರಾಣಿ ಪ್ರೇಮಿಗಳ ಒತ್ತಾಯವಾಗಿದೆ.

ಆನೆಕಾಡು ಬಳಿಯ ರಾಷ್ಟಿçÃಯ ಹೆದ್ದಾರಿಯಂಚಿನ ಈ ಕೆರೆಯಲ್ಲಿ ಮಧ್ಯಾಹ್ನ ಅಥವಾ ಮುಸ್ಸಂಜೆ ವೇಳೆಯಲ್ಲಿ ಇದೇ ಕೆರೆಯಲ್ಲಿ ಕಾಡಾನೆಗಳು ಬಂದು ನೀರು ಕುಡಿಯುವ ಚಿತ್ರಣ ಹೆದ್ದಾರಿ ಹೋಕರಿಗೆ ಕಾಣುತ್ತಿತ್ತು. ಕಾಡಾನೆಯೊಂದು ಒಮ್ಮೆಗೆ ಕನಿಷ್ಟ ೮೦ ರಿಂದ ಗರಿಷ್ಠ ೧೦೦ ಲೀಟರ್ ನೀರು ಕುಡಿಯುತ್ತದೆ. ಆದರೆ ಒಣಗುತ್ತಿರುವ ಕೆರೆಗಳಿಂದಾಗಿ ಕುಡಿಯುವ ನೀರೂ ಇಲ್ಲ. ಕೆರೆಯ ನೀರೊಳಗೆ ಒದ್ದಾಡಿ ದೇಹ ತಣಿಸಿಕೊಳ್ಳುವ ಮಾತಂತೂ ಇಲ್ಲವೇ ಇಲ್ಲ.

ಹಸಿವು ನೀಗಿಸಲು ಅರಣ್ಯದಲ್ಲಿ ಆಹಾರವಿಲ್ಲದೇ ಕಾಡಾನೆಗಳು ಪರಿತಪಿಸುತ್ತಿರುವ ಈ ಹೊತ್ತಿನಲ್ಲಿ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತೆ ಎಂಬ ಗಾದೆಯಂತೆ ಕುಡಿ ಯುವ ನೀರಿಗೂ ತತ್ವಾರ ಪಡಬೇಕಿರುವ ಕಾಡಾನೆಗಳು ಹಾಗೂ ಇತರೇ ವನ್ಯ ಪ್ರಾಣಿಗಳಿಗೆ ಅರಣ್ಯ ಇಲಾಖೆ ಕೂಡಲೇ ನೆರವಾ ಗಬೇಕಿದೆ. ವರದಿ : ಕೆ.ಎಸ್. ಮೂರ್ತಿ

ಮಡಿಕೇರಿ, ಫೆ. ೧೮: ಪ್ರಸ್ತಕ ವರ್ಷ ಕರ್ನಾಟಕ ರಾಜ್ಯದಲ್ಲಿ ಬರಗಾಲದ ಛಾಯೆ ಇರುವುದು ಎಲ್ಲ ರಿಗೂ ಅರಿವಿದೆ. ರಾಜ್ಯ ಸರಕಾರ ಈಗಾಗಲೇ ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಕೂಡ ಮಾಡಿದೆ. ಈ ಪಟ್ಟಿಯಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಒಂದಾಗಿರುವ ಕೊಡಗು ಜಿಲ್ಲೆಯ ತಾಲೂಕುಗಳೂ ಸೇರ್ಪಡೆಗೊಂಡಿವೆ.

ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ನೆರೆಯ ರಾಜ್ಯಗಳಿಗೂ ನೀರುಣಿಸುವ ಮೂಲವಾದ ಕೊಡಗು ಜಿಲ್ಲೆಯೇ ಇದೀಗ ಆತಂಕದ ಪರಿಸ್ಥಿತಿಯಲ್ಲಿದೆ. ಮುಂಗಾರು ಮಳೆಯ ಸಂದರ್ಭದಲ್ಲಿ ಕೊಡಗಿನಲ್ಲಿ ಈ ಬಾರಿ ವಾಡಿಕೆ ಯಂತೆ ಮಳೆಯಾಗಿಲ್ಲ. ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಒಂದಷ್ಟು ಇದೆಯಾದರೂ ಇದು ಪ್ರಾಯೋಗಿಕವಾಗಿ ಪ್ರಾಯೋಜನಕ್ಕೆ ಬಂದAತಿಲ್ಲ. ಸೂಕ್ತ ಸಮಯದಲ್ಲಿ ಜಿಲ್ಲೆಯಲ್ಲಿ ಹಿಂದಿನ ವರ್ಷಗಳಂತೆ ಮಳೆ, ಗಾಳಿಯ ಸನ್ನಿವೇಶ ಈ ಬಾರಿ ಇರಲಿಲ್ಲ. ಇದರಿಂದಾಗಿ ವರ್ಷಂಪ್ರತಿಯAತೆ ಜಲವೂ ಉದ್ಭವ ವಾಗದಿರಿವುದು ಕಟು ಸತ್ಯ.

್ಡ ಕಾಫಿ ತೋಟಗಳಿಗೆ ನೀರು ಹಾಯಿಸುವವರು ಅಗತ್ಯಕ್ಕಿಂತ ಹೆಚ್ಚಿಗೆ ಬಳಸುವುದನ್ನು ಕಡಿಮೆ ಮಾಡಬೇಕು.

್ಡ ಕೈತೋಟ - ಉದ್ಯಾನವನ, ಹೂತೋಟಗಳಿಗೆ ನೀರಿನ ಪೂರೈಕೆಯಲ್ಲಿ ನಿಯಂತ್ರಣ ಮಾಡಬೇಕು.

್ಡ ಸಾರ್ವಜನಿಕ ನಲ್ಲಿಗಳಲ್ಲಿ ವೃಥಾ ನೀರು ಪೋಲಾಗದಂತೆ ಗಮನ ಹರಿಸಬೇಕು.

್ಡ ವಾಹನ ತೊಳೆಯುವ ಸಂದರ್ಭ ಮಿತಬಳಕೆ ಅಗತ್ಯ.

್ಡ ಸ್ಥಳೀಯ ಸಂಸ್ಥೆಗಳು ಪೈಪ್‌ಲೈನ್ ಹಾಳಾಗಿ ನೀರು ಪೋಲಾಗದಂತೆ ಗಮನ ಹರಿಸುವುದು ಅಗತ್ಯ.

್ಡ ಸ್ಥಳೀಯ ಸಂಸ್ಥೆಗಳು ಕೂಡಾ ನೀರಿನ ಶೇಖರಣಾ ಸಾಮರ್ಥ್ಯವನ್ನು ಅರಿತು ನೀರು ಸರಬರಾಜಿನಲ್ಲಿ ಮುಂಜಾಗ್ರತೆ ವಹಿಸಬೇಕು.

್ಡ ಜಿಲ್ಲಾಡಳಿತ, ಸರಕಾರದ ಉಸ್ತುವಾರಿಯಲ್ಲಿರುವ ಕೆರೆಗಳಲ್ಲಿ ಹೂಳೆತ್ತುವುದಕ್ಕೆ ಪ್ರಾಧಾನ್ಯತೆ ನೀಡಬೇಕು. ಇದರಿಂದಾಗಿ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚುವುದರೊಂದಿಗೆ ಅಂತರ್ಜಲ ಮಟ್ಟ ಏರಿಕೆಗೆ ಅನುಕೂಲವಾಗುತ್ತದೆ.

್ಡ ಹೊಟೇಲ್‌ಗಳು - ವಸತಿಗೃಹಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸುವುದರಿಂದ ಮಾಲೀಕರು ಗಮನ ಹರಿಸಬೇಕು. ವಸತಿಗೃಹಗಳಲ್ಲಿ ‘‘ನೀರನ್ನು ಮಿತವಾಗಿ ಬಳಸಿ’’ ಎಂಬ ನಾಮಫಲಕ ಹಾಕಬೇಕು.

್ಡ ಮನೆಗಳಲ್ಲಿ ಒಂದೊAದೇ ಪಾತ್ರೆಗಳಲ್ಲಿ ಶುಚಿಗೊಳಿಸುವ ಬದಲು ಹೆಚ್ಚು ಪಾತ್ರೆಗಳನ್ನು ಜೊತೆಯಲ್ಲೇ ತೊಳೆಯುವುದರಿಂದ ನೀರಿನ ಬಳಕೆ ಕಡಿಮೆಯಾಗುತ್ತದೆ.

್ಡ ಎಲ್ಲಾ ಸ್ನಾನಗೃಹ - ಶೌಚಾಲಯಗಳಲ್ಲಿ ನೀರಿನ ಸೋರುವಿಕೆ ಇಲ್ಲದಂತೆ ಕ್ರಮಕೈಗೊಳ್ಳಬೇಕು.

್ಡ ಮುಖ ತೊಳೆಯುವಾಗ - ಶೇವ್ ಮಾಡುವಾಗ ವಾಷ್‌ಬೇಸಿನ್‌ನ ನೀರನ್ನು ಬಂದ್ ಮಾಡಿ.

್ಡ ನೀರಿನ ಟ್ಯಾಂಕ್‌ಗಳು ತುಂಬಿ ನೀರು ಪೋಲಾಗದಂತೆ ಕ್ರಮವಹಿಸಬೇಕು.

್ಡ ಸ್ನಾನ ಮಾಡುವಾಗ ಮಿತ ನೀರಿನ ಬಳಕೆಯಾಗಲಿ.

್ಡ ಹೂವಿನ ಹಾಗೂ ಅಲಂಕಾರಿಕ ಗಿಡಗಳ ಸುತ್ತಲೂ ತರಗೆಲೆಗಳನ್ನು ಹಾಕಿಡಿ. ನೀರಿನ ತೇವಾಂಶ ಇರುತ್ತದೆ.

್ಡ ಅಗತ್ಯವಿರುವ ಬಟ್ಟೆಗಳನ್ನು ಮಾತ್ರ ಆಗಾಗ್ಗೆ ಒಗೆಯಿರಿ.

್ಡ ಶೆಕೆ ಎಂದು ಎರಡೆರಡು ಬಾರಿ ಸ್ನಾನ ಮಾಡಿ ನೀರು ಖರ್ಚು ಮಾಡದಿರಿ.

್ಡ ಹಣ್ಣುಗಳನ್ನು ತೊಳೆಯುವಾಗ ಪಾತ್ರೆಯಲ್ಲಿ ಹಾಕಿ ತೊಳೆಯಿರಿ; ಒಂದೊAದೇ ಹಣ್ಣನ್ನೂನಲ್ಲಿಗೆ ಹಿಡಿದು ನೀರನ್ನು ವ್ಯರ್ಥಮಾಡದಿರಿ.

್ಡ ಬೇಸಿಗೆಯಲ್ಲಿ ಬರುವ ಮಳೆ ನೀರನ್ನು ಶೇಖರಿಸಿಟ್ಟು ಅಗತ್ಯಗಳಿಗೆ ಬಳಸಿ.

ಸುಂಟಿಕೊಪ್ಪ, ಫೆ. ೧೮: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಲ್ಲಿ ಇದೀಗ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಪಟ್ಟಣದಲ್ಲಿ ಬೇಸಿಗೆ ಮುನ್ನವೆ ಇಷ್ಟೊಂದು ಕುಡಿಯುವ ನೀರಿಗೆ ಅಭಾವ ಹಿಂದೆAದೂ ಕಂಡುಬAದಿರುವುದಿಲ್ಲ. ಈಗಾಗಲೇ ಕೆಲ ಬಡಾವಣೆಗಳಲ್ಲಿ ಕುಡಿಯುವ ನೀರಿಗಾಗಿ ಹಾತೊರೆಯುತ್ತಿದ್ದು, ಪ್ರಾಣಿ - ಪಕ್ಷಿಗಳು, ಜಾನುವಾರುಗಳು ಬಿಸಿಲಿನ ಬೇಗೆಗೆ ತತ್ತರಿಸುತ್ತಿವೆ. ಸುಂಟಿಕೊಪ್ಪ ಗ್ರೇಡ್ -೧ ಗ್ರಾಮ ಪಂಚಾಯಿತಿಯಾಗಿದ್ದು, ವ್ಯಾಪ್ತಿಯಲ್ಲಿ ಅಂದಾಜು ೩ ಸಾವಿರಕ್ಕೂ ಮೀರಿ ಮನೆಗಳಿವೆ. ಸುಮಾರು ೧೩,೦೦೦ ಜನ ಸಂಖ್ಯೆಯನ್ನು ಹೊಂದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೧೭ ಕೊಳವೆ ಬಾವಿಗಳಲ್ಲಿ ೯ರಲ್ಲಿ ಮಾತ್ರ ನೀರು ಲಭಿಸುತ್ತಿದ್ದು, ನೀರು ಗಂಟಿಗಳು ೨ ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ಮೋಟಾರ್ ದುರಸ್ತಿಯಾದರೆ ೩-೪ ದಿನ ಕುಡಿಯುವ ನೀರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬಹುತೇಕ ಕೂಲಿಕಾರ್ಮಿಕರನ್ನು ಹೊಂದಿರುವ ಸುಂಟಿಕೊಪ್ಪ, ಬೇಸಿಗೆ ಮುನ್ನವೆ ಕುಡಿಯುವ ನೀರಿಗೆ ಬರ ಕಾಣುತ್ತಿದೆ. ಉಲುಗುಲಿ ೧ನೇ ವಾರ್ಡ್ನ ಸದಸ್ಯ ಪ್ರಸಾದ್ ಕುಟ್ಟಪ್ಪ ಹಾಗೂ ಅಲಿಕುಟ್ಟಿಯವರು ಕಳೆದ ೨ ದಿನಗಳಿಂದ ಇಲ್ಲಿನ ಗ್ರಾಮಸ್ಥರಿಗೆ ಕುಡಿಯುವ ನೀರು ಸಿಗದೆ ಟ್ರಾö್ಯಕ್ಟರ್ ಮೂಲಕ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ.

ನೀರನ್ನು ಮಿತವಾಗಿ ಬಳಸಿ ಎಂದು ಮನೆ ಮನೆಗಳಿಗೆ ನೀರು ಗಂಟಿಗಳು ತೆರಳಿ ಅಂಗಲಾಚುತ್ತಿದ್ದಾರೆ. ಇನ್ನೂ ಕೆಲ ತಿಂಗಳ ಬಿಸಿಲ ಬೇಗೆಯಲ್ಲಿ ಕುಡಿಯುವ ನೀರಿಗೆ ಇಲ್ಲಿನ ನಾಗರಿಕರು ಸಂಕಷ್ಟ ಎದುರಿಸುವ ಆತಂಕ ಮನೆ ಮಾಡಿದೆ. -ರಾಜು ರೈ.