ಮಡಿಕೇರಿ, ಫೆ. ೧೮: ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಂಬAಧಿಸಿದ ಅರ್ಜಿಗಳ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ, ತಿದ್ದುಪಡಿ ಅರ್ಜಿ ಮತ್ತು ಹೆಸರು ಸೇರ್ಪಡೆಯ ಅರ್ಜಿಗಳ ವಿಲೇವಾರಿಗಾಗಿ ತಿಂಗಳಲ್ಲಿ ಕನಿಷ್ಟ ೧೫ ದಿನಗಳನ್ನಾದರು ಮೀಸಲಿಡಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್‌ನ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳು ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಕೊಡಗಿನಲ್ಲಿ ಕಳೆದ ಒಂದು ವರ್ಷದಿಂದ ಹೊಸ ಪಡಿತರ ಚೀಟಿ ನೀಡುವುದನ್ನೇ ನಿಲ್ಲಿಸಲಾಗಿದೆ. ಪಡಿತರ ಚೀಟಿಗಳ ತಿದ್ದುಪಡಿ, ಮೃತರ ಹೆಸರು ವಜಾಗೊಳಿಸುವುದು ಹಾಗೂ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಸೇರಿದಂತೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಕಾರ್ಮಿಕ ವರ್ಗ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.

ಜಿಲ್ಲೆಯ ಬಡವರು ಹಾಗೂ ಕಾರ್ಮಿಕರಿಗಾಗಿ ಪಡಿತರ ಚೀಟಿ ಅರ್ಜಿ, ಹೆಸರು ಸೇರ್ಪಡೆ ಅರ್ಜಿಗಳ ಡಾಟಾವನ್ನು ತಿಂಗಳಲ್ಲಿ ೧೫ ದಿನಗಳಾದರೂ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಕಾಯ್ದಿರಿಸಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಸುವ ಸಂದರ್ಭ ಯೂನಿಯನ್‌ನ ಜಿಲ್ಲಾಧ್ಯಕ್ಷ ಕೆ.ಹೆಚ್. ಅಣ್ಣ ಶರೀಫ್, ಪ್ರಧಾನ ಕಾರ್ಯದರ್ಶಿ ಎಂ.ಎ. ಅಬ್ದುಲ್ ರಜಾಕ್ ಹಾಗೂ ಕೋಶಾಧಿಕಾರಿ ಕೆ.ಎಂ. ಯೂಸುಫ್ ಹಾಜರಿದ್ದರು.