ಮಡಿಕೇರಿ, ಫೆ. ೧೮: ಭಾರತೀಯ ಚಿತ್ರರಂಗದಲ್ಲಿ ಪ್ರಖ್ಯಾತಿ ಗಳಿಸುತ್ತಿರುವ ‘ನ್ಯಾಷನಲ್ ಕ್ರಶ್’ ಎಂದು ಕರೆಸಿಕೊಳ್ಳುವ ಕೊಡಗಿನ ರಶ್ಮಿಕಾ ಮಂದಣ್ಣ ಅವರ ಹಿರಿಮೆಗೆ ಮತ್ತೊಂದು ಗರಿಮೆ ಸೇರ್ಪಡೆ ಗೊಂಡಿದೆ. ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅಂತರರಾಷ್ಟಿçÃಯ ಮನ್ನಣೆಯುಳ್ಳ ಫೋರ್ಬ್ಸ್ ಪ್ರತಿವರ್ಷದಂತೆ ಈ ವರ್ಷವೂ ಭಾರತದ ಸಾಧಕರ ಪಟ್ಟಿ ಬಿಡುಗಡೆ ಮಾಡಿದ್ದು ಆ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ಇಂಡಿಯಾ ಭಾರತದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೩೦ ವರ್ಷದ ಒಳಗಿನ ೩೦ ಜನರ ಪಟ್ಟಿಯನ್ನು (೩೦ ಅಂಡರ್ ೩೦) ಬಿಡುಗಡೆ ಮಾಡಿದ್ದು, ಮನರಂಜನಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣರ ಹೆಸರಿದೆ.

ಕೃಷಿ ತಂತ್ರಜ್ಞಾನ, ಕಲೆ, ಉದ್ಯಮ, ಪರಿಸರ ಸಂರಕ್ಷಣೆ, ಫ್ಯಾಷನ್, ಸಂಗೀತ, ಕಂಟೆAಟ್ ಕ್ರಿಯೇಷನ್, ಶಿಕ್ಷಣ, ಕ್ರೀಡೆ, ಉತ್ಪಾದನೆ, ಮಾರುಕಟ್ಟೆ, ಸಮಾಜ ಸೇವೆ, ಆರೋಗ್ಯ ಸೇವೆ, ಹಣಕಾಸು ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮಿಂಚುತ್ತಿರುವ ೩೦ಕ್ಕಿಂತಲೂ ಕಡಿಮೆ ವಯಸ್ಸಿನ ಸಾಧಕರನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸಿದೆ ಫೋರ್ಬ್ಸ್ ಇಂಡಿಯಾ.