ಮಡಿಕೇರಿ, ಫೆ. ೧೮: ಚೆಟ್ಟಳ್ಳಿ ಸಮೀಪದ ಕಂಡಕರೆ ಎಸ್.ಕೆ.ಎಸ್.ಎಸ್.ಎಫ್ ೨೦೨೪-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿ.ಕೆ. ಷಂಶುದ್ದೀನ್, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಬಾಖವಿ ಹಾಗೂ ಕೋಶಾಧಿಕಾರಿಯಾಗಿ ವಿ.ಪಿ ಹಂಸ ಅವಿರೋಧ ಆಯ್ಕೆಯಾಗಿದ್ದಾರೆ. ಎಸ್.ಕೆ.ಎಸ್.ಎಸ್.ಎಫ್ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಕೆ.ಎಂ ಅವರ ಅಧ್ಯಕ್ಷತೆಯಲ್ಲಿ, ಕಂಡಕರೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಪ್ರತಿನಿಧಿ ಆರಿಫ್ ಫೈಝಿ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಮೊಹಮ್ಮದ್ ಸಹಾದತ್ ಸಿ.ಎ, ಉಪಾಧ್ಯಕ್ಷರಾಗಿ ಸಿದ್ದೀಖ್ ಅಜ್ಹರಿ, ಮುಸ್ತಫಾ ಮೌಲವಿ ವಿ.ಪಿ, ಸಹ ಕಾರ್ಯದರ್ಶಿಗಳಾಗಿ ಝೈನುದ್ದೀನ್ ಫೈಜಿ ಕೆ.ಎಂ, ಉಸ್ತಾದ್ ರಹ್ಮಾನ್ ಶಾಫಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಮೊಹಮ್ಮದ್ ಕೆ.ಎಂ, ಉಸೈನ್ ಅಜ್ಹರಿ ಪಿ.ಎಂ, ಹುಸೇನ್ ಕೆ.ಎ, ಯೂಸುಫ್ ಪಿ.ಕೆ, ಹಸನ್ ಕುಟ್ಟಿ, ಅಶ್ರಫ್ ಕೆ.ಎಂ, ಆಯ್ಕೆಯಾಗಿದ್ದಾರೆ. ಕೌನ್ಸಿಲರ್‌ಗಳಾಗಿ ಯೂಸುಫ್ ಪಿ.ಕೆ, ಹುಸೈನ್ ಅಝ್ಹರಿ ಪಿ.ಎಂ, ಯೂಸುಫ್ ಪಿ.ಎ ಆಯ್ಕೆಯಾಗಿದ್ದಾರೆ.