೩ನೇ ಟೆಸ್ಟ್ ಕ್ರಿಕೆಟ್-ಇಂಗ್ಲೆAಡ್ ವಿರುದ್ಧ ಭಾರತಕ್ಕೆ ಜಯ

ರಾಜಕೋಟ್, ಫೆ. ೧೮: ಭಾರತ ಮತ್ತು ಇಂಗ್ಲೆAಡ್ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಂಗ್ಲರ ವಿರುದ್ಧ ೪೩೪ ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ರಾಜಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ೪೩೦ ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆAಡ್ ೧೨೨ ರನ್‌ಗಳಿಗೆ ಆಲೌಟ್ ಆಗಿದೆ. ಇಂಗ್ಲೆAಡ್ ತಂಡಕ್ಕೆ ರವೀಂದ್ರ ಜಡೇಜಾ ಮಾರಕರಾದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅವರು ೫ ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಡೇಜಾ ಅವರು ಇಂಗ್ಲೆAಡ್‌ನ ಒಲಿ ಪೋಪ್ (೩ ರನ್), ಜಾನಿ ಬೈಸ್ಟೋðವ್ (೪ ರನ್), ಜೋ ರೂಟ್ (೭ ರನ್), ಬೆನ್ ಫೋಕ್ಸ್ (೧೬ ರನ್) ಹಾಗೂ ಮಾರ್ಕ್ವುಡ್ (೩೩ ರನ್) ರನ್ನು ಔಟ್ ಮಾಡಿದರು. ಇನ್ನುಳಿದಂತೆ ಕುಲದೀಪ್ ಯಾದವ್ ೨, ಜಸ್‌ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ೧ ವಿಕೆಟ್ ಪಡೆದಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ೨-೧ ಅಂತರದಿAದ ಮುನ್ನಡೆ ಸಾಧಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯ ತಾ. ೨೩ ರಿಂದ ರಾಂಚಿಯಲ್ಲಿ ನಡೆಯಲಿದೆ.

ಲೋಕಸಭೆ ಚುನಾವಣೆಯಲ್ಲಿ ೪೦೦ ಕ್ಷೇತ್ರ ಗೆಲ್ಲಬೇಕು : ಮೋದಿ

ನವದೆಹಲಿ, ಫೆ. ೧೮: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೩೭೦ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಎನ್‌ಡಿಎ ೪೦೦ ಕ್ಷೇತ್ರಗಳಲ್ಲಿ ಗೆಲ್ಲಬೇಕು. ಈ ಗುರಿ ತಲುಪಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ರಾಷ್ಟಿçÃಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು. ೨೦೪೭ ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ರಾಷ್ಟçವು ಈಗ ದೊಡ್ಡ ಕನಸು ಮತ್ತು ನಿರ್ಣಯಗಳನ್ನು ಮಾಡಬೇಕಾಗಿದೆ. ಮುಂದಿನ ಐದು ವರ್ಷಗಳು ನಿರ್ಣಾಯಕವಾಗಲಿವೆ. ವಿಕಸಿತ ಭಾರತದ ಕಡೆಗೆ ಒಂದು ದೊಡ್ಡ ಜಿಗಿತವನ್ನು ತೆಗೆದುಕೊಳ್ಳಬೇಕಾಗಿದೆ. ಬಿಜೆಪಿಯು ಪ್ರಬಲ ಸಂಖ್ಯೆಯಲ್ಲಿ ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲ ಅನಿವಾರ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು.

ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

ಬಾಗಲಕೋಟೆ, ಫೆ. ೧೮: ಬಾಗಲಕೋಟೆಯ ಕಲಾದಗಿಯಲ್ಲಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬAಧಿಸಿದAತೆ ರಂಭಾಪುರಿ ಶ್ರೀಗಳ ವಿರುದ್ಧ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದು ಅಲ್ಲದೆ ಅವರ ಕಾರಿಗೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಉದಗಟ್ಟಿ ಗ್ರಾಮಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಶ್ರೀಗಳ ಕಾರನ್ನು ಅಡಗಟ್ಟಿದ್ದ ಭಕ್ತರು, ವಿವಾದ ಕೋರ್ಟ್ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ ಅವರಿಂದ ಮಠದ ದುರಸ್ತಿ, ಹೊಲದ ಉಳುಮೆ ಮಾಡಿದ್ದಕ್ಕೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ತಳ್ಳಾಟ, ನೂಕಾಟ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಂ. ಗಂಗಾಧರ ಸ್ವಾಮೀಜಿಯನ್ನು ನೇಮಕ ಮಾಡಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆAದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪಾಕ್ ಚುನಾವಣೆಯಲ್ಲಿ ಅಕ್ರಮ ಆರೋಪ

ಇಸ್ಲಾಮಾಬಾದ್, ಫೆ. ೧೮: ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯ ಆಯುಕ್ತ, ಮುಖ್ಯ ನ್ಯಾಯಮೂರ್ತಿ ಈಚೆಗೆ ಮುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ರಾವಲ್ಪಿಂಡಿಯ ಮಾಜಿ ಆಯುಕ್ತ ಲಿಯಾಖತ್ ಅಲಿ ಛತ್ತಾ ಆರೋಪ ಮಾಡಿದ್ದು, ಮುಖ್ಯ ನ್ಯಾಯಮೂರ್ತಿ, ಮುಖ್ಯ ಚುನಾವಣಾ ಆಯುಕ್ತ ಇದರಲ್ಲಿ ಭಾಗಿಯಾಗಿದ್ದಾರೆ. ದೇಶದ ಬೆನ್ನಿಗೆ ಇರಿಯುವುದನ್ನು ನೋಡಲಾಗುತ್ತಿಲ್ಲ. ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು. ರಾಜಕಾರಣಿಗಳಿಗಾಗಿ ಕರ್ತವ್ಯಲೋಪ ಎಸಗಬೇಡಿ ಎಂದು ಅಧಿಕಾರಿ ಸಮುದಾಯಕ್ಕೆ ಕೋರುತ್ತೇನೆ' ಎಂದು ಹೇಳಿದ್ದಾರೆ. ಆದರೆ, ಈ ಆರೋಪವನ್ನು ಚುನಾವಣಾ ಆಯೋಗವು ನಿರಾಕರಿಸಿದೆ. ಹೇಳಿಕೆ ನೀಡಿರುವ ಆಯೋಗ, ಫಲಿತಾಂಶ ಬದಲಿಸುವಂತೆ ಆಯೋಗದ ಯಾವುದೇ ಅಧಿಕಾರಿ ಯಾರೊಬ್ಬರಿಗೂ ನಿರ್ದೇಶನ ನೀಡಿಲ್ಲ ಎಂದು ಹೇಳಿದೆ. ಆದರೆ, ಅಕ್ರಮ ಸಂಬAಧ ಅಧಿಕಾರಿಯ ಆರೋಪಗಳ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

ಮೋದಿ ಭೇಟಿ ಹಿನ್ನೆಲೆ ಕಾಶ್ಮೀರದಲ್ಲಿ ಹೈಅಲರ್ಟ್

ಕಾಶ್ಮೀರ, ಫೆ. ೧೮: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜಮ್ಮುವಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಪೊಲೀಸರು ಮತ್ತು ಅರೆಸೇನಾ ಪಡೆಗಳು ನಗರ ಮತ್ತಿತರ ಕಡೆಗಳಲ್ಲಿ ವಾಹನಗಳ ತಪಾಸಣೆ ನಡೆಸುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀನಗರದ ವಿವಿಧ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ವಿಶೇಷ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಿ ಜಮ್ಮುವಿಗೆ ಭೇಟಿ ನೀಡುತ್ತಿದ್ದರೂ, ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕರು ಯಾವುದೇ ವಿಧ್ವಂಸಕ ಚಟುವಟಿಕೆಗಳನ್ನು ನಡೆಸದಂತೆ ನೋಡಿಕೊಳ್ಳಲು ಕಣಿವೆಯಲ್ಲಿ ಭದ್ರತಾ ಏಜೆನ್ಸಿಗಳನ್ನು ಅಲರ್ಟ್ ಮಾಡಲಾಗಿದೆ.

‘ದೆಹಲಿ ಚಲೋ’ ಕಾರಣಕ್ಕೆ ಇಂಟರ್‌ನೆಟ್ ಸೇವೆ ಸ್ಥಗಿತ

ಚಂಡೀಗಢ, ಫೆ. ೧೮: ರೈತರ ‘ದೆಹಲಿ ಚಲೋ’ ಜಾಥಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಸೇರಿದಂತೆ ಕೆಲವು ಪಂಜಾಬ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂಟರ್‌ನೆಟ್ ಸೇವೆಗಳ ಸ್ಥಗಿತವನ್ನು ತಾ. ೨೪ ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ತಾ. ೧೨ ರಿಂದ ೧೬ ರವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಫೆಬ್ರವರಿ ೧೬ ರ ಆದೇಶದ ಪ್ರಕಾರ, ಪಟಿಯಾಲಾದ ಶಂಭು, ಜುಲ್ಕನ್, ಪಾಸಿಯನ್, ಪತ್ರಾನ್, ಶತ್ರನಾ, ಸಮನಾ, ಘನೌರ್, ದೇವಿಗಢ್ ಮತ್ತು ಬಲ್ಭೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಮೊಹಾಲಿಯ ಲಾಲ್ರು ಪೊಲೀಸ್ ಠಾಣೆ, ಬಟಿಂಡಾದ ಸಂಗತ್ ಪೊಲೀಸ್ ಠಾಣೆ, ಫತೇಘರ್ ಸಾಹಿಬ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಲಾಗಿದೆ. ಪಂಜಾಬ್‌ನ ಈ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಕೇಂದ್ರವು ೧೮೮೫ರ ಟೆಲಿಗ್ರಾಫ್ ಆಕ್ಟ್ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಫೆಬ್ರವರಿ ೧೫ ರಂದು ಚಂಡೀಗಢದಲ್ಲಿ ಮೂವರು ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವೆ ನಡೆದ ಸಭೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು.

ಎನ್‌ಸಿಪಿ ಬಣ ವಿವಾದ : ಇಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ

ನವದೆಹಲಿ, ಫೆ. ೧೮: ಮಹಾರಾಷ್ಟçದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವನ್ನು ನೈಜ ಎನ್‌ಸಿಪಿ ಎಂದು ಚುನಾವಣಾ ಆಯೋಗವು ಪ್ರಕಟಿಸಿರುವುದನ್ನು ಪ್ರಶ್ನಿಸಿ ಶರದ್ ಪವಾರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಾ. ೧೯ ರಂದು (ಇಂದು) ನಡೆಸಲಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ, ದೀಪಾಂಕರ್ ದತ್ತಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.