ಮಡಿಕೇರಿ, ಫೆ. ೧೮: ರಾಜ್ಯ ಸರ್ಕಾರ ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಅವಶ್ಯವಿರುವ ಛಾಪಾ ಕಾಗದದ (ಸ್ಟಾö್ಯಂಪ್ ಪೇಪರ್) ಮುದ್ರಾಂಕ ಶುಲ್ಕವನ್ನು ತಾ. ೬ ರಿಂದ ಹೆಚ್ಚಿಸಿ ಆದೇಶ ಹೊರಡಿಸಿರುವುದು ರೈತ ವರ್ಗಕ್ಕೆ ಹಾಗೂ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿವಿಧ ಸರ್ಕಾರಿ ಯೋಜನೆಗಳಿಗೆ ಮತ್ತು ಕೃಷಿ ಚಟುವಟಿಕೆಗೆ ಅಗತ್ಯವಿರುವ ಮುಚ್ಚಳಿಕೆ ಪತ್ರ, ಪ್ರಮಾಣಪತ್ರ ಸಹಿತ ವಿವಿಧ ರೀತಿಯ ಬಾಂಡ್‌ಗಳನ್ನು ಖರೀದಿಸಲು ದುಪ್ಪಟ್ಟು ಹಣ ಪಾವತಿಸುವ ಅನಿವಾರ್ಯ ಸ್ಥಿತಿ ಎದುರಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಸರ್ಕಾರ ಹಲವು ಸ್ಟಾö್ಯಂಪ್ ದರಗಳ ಏರಿಕೆ ಮಾಡಿದ್ದರ ಪರಿಣಾಮ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಸಮಸ್ಯೆ ಏನು? : ಕೃಷಿ, ನೀರಾವರಿ, ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಫಲಾನುಭವಿಯಾಗಲು, ಸಬ್ಸಿಡಿ ಪಡೆಯಲು ಮತ್ತು ತೋಟ-ಗದ್ದೆಯನ್ನು ಸಹೋದರ ಸಂಬAಧಿಕರ ನಡುವೆ ಇಬ್ಭಾಗ ಮಾಡಿಕೊಳ್ಳಲು ರೈತರು ವಿವಿಧ ರೀತಿಯ ವ್ಯವಹಾರಕ್ಕೆ ವಿವಿಧ ಇಲಾಖೆಗೆ ಬಾಂಡ್, ಮುಚ್ಚಳಿಕೆ ಪತ್ರ, ಪ್ರಮಾಣಪತ್ರ ಸಲ್ಲಿಸಬೇಕು. ಈ ನಡುವೆ ಸ್ಟಾö್ಯಂಪ್ ದರಗಳನ್ನು ಸರ್ಕಾರ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಗೊಂದಲ ಸೃಷ್ಟಿ : ಸ್ಟಾö್ಯಂಪ್ ಪೇಪರ್ ನೀಡುವ ಕೇಂದ್ರಗಳಿಗೆ ತೆರಳುವ ಜನರಲ್ಲಿ ಇದೀಗ ದರ ಹೆಚ್ಚಳವಾಗಿರುವ ವಿಷಯ ತಿಳಿದು ಗೊಂದಲ ಸೃಷ್ಟಿಯಾಗಿದೆ. ರೂ. ೨೦ ಛಾಪಾ ಕಾಗದ ಕೊಂಡುಕೊಳ್ಳಲು ಬಂದವರಿಗೆ ರೂ. ೧೦೦ ರ ಛಾಪಾ ಕಾಗದ ಮಾತ್ರ ದೊರೆಯುತ್ತದೆ ಎಂದು ತಿಳಿದು ಕೆಲವರು ಕೇಂದ್ರದಲ್ಲಿ ಮಾತಿನ ಚಕಮಕಿಯೂ ನಡೆಸಿದ್ದಾರೆ.

ಸರ್ಕಾರ ದರ ಹೆಚ್ಚಳ ಮಾಡಿರುವುದು ಮತ್ತು ಸ್ಟಾö್ಯಂಪ್ ಪೇಪರ್ ಶುಲ್ಕ ಸರ್ಕಾರಕ್ಕೆ ಸಂದಾಯವಾಗುವ ಶುಲ್ಕ ಎಂದು ತಿಳಿಯದ ಜನರು ಕೇಂದ್ರದವರನ್ನು ಸಂಶಯದಿAದ ನೋಡುವಂತಾಗಿದೆ.

ಮಾಹಿತಿಯ ಕೊರತೆ : ಛಾಪಾ ಕಾಗದದ ಶುಲ್ಕ ಹೆಚ್ಚಳದ ವಿಷಯ ಜನಸಾಮಾನ್ಯರಿಗೆ ಅಥವಾ ರೈತರಿಗೆ, ಛಾಪಾ ಕಾಗದ ನೀಡುವ ಕೇಂದ್ರಗಳಿಗೆ, ಸರ್ಕಾರಿ ಕಚೇರಿಗಳಿಗೆ, ಬ್ಯಾಂಕ್‌ಗಳಿಗೆ, ಕೋರ್ಟ್ ಕಚೆೆÃರಿಗಳಿಗಾಗಲಿ ಮೊದಲೇ ಸರಿಯಾದ ಮಾಹಿತಿ ನೀಡದೆ ದರ ಹೆಚ್ಚಿಸಿರುವುದು ಸಮಸ್ಯೆಯನ್ನು ಉಂಟುಮಾಡಿದೆ.

ಯಾವುದರಲ್ಲೆಲ್ಲ ದರ ಹೆಚ್ಚಳ: ಅತಿ ಹೆಚ್ಚಾಗಿ ಬಳಕೆಯಾಗುವ ಅಫಿಡೆವಿಟ್ ಛಾಪಾ ಕಾಗದಕ್ಕೆ ಈ ಮೊದಲು ರೂ. ೨೦ ರ ಸ್ಟಾö್ಯಂಪ್ ಪಡೆಯಲಾಗುತ್ತಿತ್ತು ಇದೀಗ ಹೊಸ ದರದ ಅನ್ವಯ ರೂ. ೧೦೦ ರ ಸ್ಟಾö್ಯಂಪ್ ಕಡ್ಡಾಯವಾಗಿದೆ.

ಕೃಷಿ, ಕಂದಾಯ, ಶಿಕ್ಷಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸ್ಟಾö್ಯಂಪ್ ಬಳಕೆಯಾಗುತ್ತಿದ್ದು ಶೇ. ೦.೧ ರಷ್ಟು ಇದ್ದ ಶುಲ್ಕ ಶೇ. ೦.೫ ಗೆ ಏರಿಕೆಯಾಗಿದೆ. ಬ್ಯಾಂಕಿನಲ್ಲಿ ಸಾಲ ಪಡೆಯಲು ಕೂಡ ದುಬಾರಿ ಸ್ಟಾö್ಯಂಪ್ ಪೇಪರ್ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಾಲದ ಶೇ. ೦.೫ ರಷ್ಟು ಶುಲ್ಕ ನೀಡಬೇಕಾಗಿದೆ. ಕನಿಷ್ಟ ಶುಲ್ಕ ರೂ. ೫೦೦ ನಿಗದಿಪಡಿಸಲಾಗಿದೆ. ಒಟ್ಟಾರೆ ೨೫ ರೀತಿಯ ಛಾಪಾ ಕಾಗದದ ದರಗಳಲ್ಲಿ ಬದಲಾವಣೆ ಮಾಡಲಾಗಿದೆ.

ಛಾಪಾ ಕಾಗದದ ಮೌಲ್ಯ ಹೆಚ್ಚಳವಾಗಿರುವುದರಿಂದ ಛಾಪಾ ಕಾಗದ ವಿತರಿಸುವ ಕೇಂದ್ರ ಮತ್ತು ಟೈಪಿಂಗ್ ಹಾಗೂ ನೋಟರಿ ಸೇವಾ ಶುಲ್ಕವೂ ಹೆಚ್ಚಳವಾಗುವ ಸಾಧ್ಯತೆ ಕಂಡುಬರುತ್ತಿದೆ. ಕಾರಣ ಛಾಪಾ ಕಾಗದ ವಿತರಿಸುವ ಕೇಂದ್ರಗಳು ಈ ಮೊದಲು ಭರಿಸುತ್ತಿದ್ದ ಹಣಕ್ಕಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ.

ಒಟ್ಟಾರೆ ಛಾಪಾ ಕಾಗದದ ಶುಲ್ಕ ಹೆಚ್ಚಳದಿಂದ ಕರ್ನಾಟಕದ ಜನತೆ ಸಂಕಷ್ಟಕ್ಕೀಡಾಗಿರುವುದAತು ನಿಜ. ಬೇರೆ ಯಾವುದೇ ರಾಜ್ಯಗಳಲ್ಲಿ ಈ ಶುಲ್ಕದಲ್ಲಿ ಹೆಚ್ಚಳವಾಗದಿರುವುದು ಇಲ್ಲಿ ಗಮನಾರ್ಹವಾಗಿದೆ.

- ಗಿರೀಶ್ ಕಾಂತ್