ಗೋಣಿಕೊಪ್ಪ ವರದಿ, ಫೆ. ೧೮: ಪುಣೆಯಲ್ಲಿ ಆಯೋಜಿಸಿದ್ದ ೪೪ ನೇ

ರಾಷ್ಟಿçÃಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಮೂವರು ಪದಕ ಸಾಧನೆ ಮಾಡಿದ್ದು, ಆಗಸ್ಟ್ನಲ್ಲಿ ನಡೆಯಲಿರುವ ಸ್ವೀಡನ್ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಮುಳ್ಳೇರ ಪೊನ್ನಮ್ಮ ಪೂವಣ್ಣ ಗುಂಡು ಎಸೆತ, ಜಾವೆಲಿನ್ ಎಸೆತದಲ್ಲಿ ಪ್ರಥಮ, ೧೦೦ ಮೀ. ೪x೧೦೦ ರಿಲೇ, ೪x೪೦೦ ರಿಲೇ ಎರಡನೇ ಸ್ಥಾನ ಗಳಿಸಿದ್ದಾರೆ. ಬೊಪ್ಪಂಡ ಕುಸುಮ್ ಭೀಮಯ್ಯ ೪೦೦ ಮೀಟರ್ ಹಾಗೂ ೮೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದರು.

ಪೆಮ್ಮಂಡ ಅಪ್ಪಯ್ಯ ೧೦೦, ೨೦೦ ಮೀಟರ್ ಓಟದಲ್ಲಿ ತೃತೀಯ, ೪೦೦ ಮೀಟರ್ ನಾಲ್ಕನೇ ಸ್ಥಾನ ಪಡೆದರು.